ಕಾಬುಲ್:ದ್ವೇಷವನ್ನು ಮರೆತು ಅಫ್ಘಾನಿಸ್ತಾನದ ಮರುನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ಉಗ್ರರ ಮುಖವಾಡ ಬಯಲಾಗಿದೆ. ದೇಶದೆಲ್ಲೆಡೆ ಸಂಘಟನೆಗೆ ವಿರೋಧ ಹೆಚ್ಚುತ್ತಿರುವುದರಿಂದ ಕ್ರುದ್ಧರಾಗಿರುವ ಉಗ್ರರು ಈ ಹಿಂದೆ ಅಮೆರಿಕ ಹಾಗೂ ನ್ಯಾಟೋ ಪಡೆಗಳಿಗೆ ನೆರವು ನೀಡಿದವರನ್ನು ಮನೆಯಿಂದ ಹೊರಗೆ ಎಳೆದು ತಂದು ಕೊಲ್ಲುವ ಮೂಲಕ ರಕ್ತದೋಕುಳಿಯ ಹೊಸ ಅಧ್ಯಾಯ ಆರಂಭಿಸಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಐದು ದಿನಗಳಾಗಿವೆ. ಸಂಘಟನೆಯ ನಾಯಕರು ಶಾಂತಿ, ಸಂಧಾನದ ಮಾತುಗಳನ್ನಾಡುತ್ತಿದ್ದರೂ ತಳಮಟ್ಟದಲ್ಲಿ ಹಿಂಸೆ ಮುಂದುವರಿಸಿದ್ದಾರೆ. ಇದರಿಂದಾಗಿ ಅಫ್ಘನ್ನರು ಪ್ರತಿರೋಧ, ಪ್ರತಿಭಟನೆ ತೋರಿಸಲಾರಂಭಿಸಿದ್ದಾರೆ. ದೇಶದ ಸ್ವಾತಂತ್ರೊ್ಯೕತ್ಸವದಲ್ಲಿ ತಾಲಿಬಾನಿ ವಿರೋಧಿ ಪ್ರತಿಭಟನೆ ಹೆಚ್ಚಾದ ಬಳಿಕ ವಿರೋಧಿಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿದ್ದಾರೆ. ವಿಶೇಷವಾಗಿ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯದ ಹಲವರನ್ನು ಹುಡುಕಿ ಹತ್ಯೆ ಮಾಡಿದ್ದಾರೆ. ಈ ವಿದ್ಯಮಾನ ಜಾಗತಿಕ ಮಟ್ಟದಲ್ಲೂ ಕಳವಳ, ಆತಂಕ ಸೃಷ್ಟಿಸಿದೆ. ಷರಿಯಾ ಕಾನೂನು ಅನುಸರಿಸುವುದಾಗಿ ತಾಲಿಬಾನ್ ಘೋಷಿಸಿರುವ ಕಾರಣ, ಅನೇಕ ಅಫ್ಘನ್ನರು ಊರು ಬಿಟ್ಟು ಹೋಗಲು ಪ್ರಯತ್ನಿಸಿದ್ದಾರೆ.
ಪ್ರಾಣಭೀತಿಯಲ್ಲಿ ಜನರು:ತಾಲಿಬಾನ್ ಶಾಂತಿ ಸಮಾಧಾನದ ಮಾತುಗಳನ್ನಾಡಿದರೂ, ಹೇಳಿಕೆಗಳನ್ನು ನೀಡಿದರೂ ವಾಸ್ತವ ಬೇರೆಯೇ ಇದೆ. ತಾಲಿಬಾನ್ ಉಗ್ರರು ಅಲ್ಲಿ ತಮ್ಮದೇ ಆದ ನಡವಳಿಕೆ ತೋರಿಕೊಂಡಿದ್ದಾರೆ. ಮಹಿಳೆಯರು ಮನೆಯಲ್ಲಿರಬೇಕು ಎಂದು ತಾಕೀತು ಮಾಡುತ್ತಿದ್ದು, ಪತ್ರಕರ್ತರೂ ಭೀತಿಯಿಂದ ಕೆಲಸ ಮಾಡುವಂತಾಗಿದೆ. ಪತ್ರಿಕಾ ಮಾಧ್ಯಮಗಳಲ್ಲಿ ಕೆಲಸ ಮಾಡುವ ಅನೇಕರಿಗೆ ತಾಲಿಬಾನಿಗಳು ಕೋಲು ಮತ್ತು ಬೆಲ್ಟ್​ಗಳಿಂದ ಹಲ್ಲೆ ನಡೆಸಿದ್ದಾರೆ. ಹೆಣ್ಣು ಮಕ್ಕಳು ಶಾಲೆಗೆ ಹೋಗಬಾರದು ಎಂದು ತಾಕೀತು ಮಾಡಿದ್ದಾರೆ. ಟಿವಿ ನೋಡಿದರೆ, ಸಂಗೀತ ಕೇಳಿದರೆ ಅಂಥ ಜನರನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲುವ ಶಿಕ್ಷೆಗೆ ಗುರಿಯಾಗಿಸುತ್ತಿದ್ದಾರೆ.
ಪತ್ರಕರ್ತನಿಗಾಗಿ ಶೋಧ:ಜರ್ಮನಿಯ ಡ್ಯೂಷೆ ವೆಲ್ಲೆ (ಡಿಡಬ್ಲ್ಯು) ಪತ್ರಕರ್ತನಿಗಾಗಿ ತಾಲಿಬಾನಿಗಳು ಮನೆ ಮನೆ ಶೋಧ ನಡೆಸಿದರು. ಇದೇ ವೇಳೆ, ಆ ಪತ್ರಕರ್ತನ ಸಂಬಂಧಿಕರನ್ನು ಅವರು ಹತ್ಯೆ ಮಾಡಿದ್ದಾರೆ. ಒಬ್ಬ ಸಂಬಂಧಿ ಕೂದಲೆಳೆ ಅಂತರದಲ್ಲಿ ಅಲ್ಲಿಂದ ಪಾರಾಗಿದ್ದಾರೆ ಎಂದು ಡಿಡಬ್ಲ್ಯುನ ಡೈರೆಕ್ಟರ್ ಜನರಲ್ ಪೀಟರ್ ಲಿಂಬಾರ್ಗ್ ಹೇಳಿದ್ದಾರೆ. ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ತಾಲಿಬಾನಿಗಳ ಕೃತ್ಯವನ್ನು ಖಂಡಿಸಿದ್ದಾರೆ.
ಕ್ರೌರ್ಯದ ಆಳ್ವಿಕೆ ಭೀತಿ:ಅಫ್ಘನ್ನರಲ್ಲಿ ಬಹುಪಾಲು ಜನರಿಗೆ 20 ವರ್ಷಗಳ ಹಿಂದಿನ ತಾಲಿಬಾನ್ ಆಡಳಿತದ ಕ್ರೌರ್ಯ ನೆನಪಾಗಿದೆ. ಹೀಗಾಗಿಯೇ ಕಾಬುಲ್ ತಾಲಿಬಾನ್ ವಶವಾಗುತ್ತಿರುವಂತೆ ಏರ್​ಪೋರ್ಟ್​ಗೆ ದೌಡಾಯಿಸಿದ್ದರು. ವಿಮಾನ ಹಾರಾಟ ಸ್ಥಗಿತವಾಗಿರುವ ಕಾರಣ ಹತಾಶರಾಗಿ ಏರ್​ಪೋರ್ಟ್ ಸುತ್ತಮುತ್ತ ವಿಮಾನಗಳಿಗೆ ಕಾಯುತ್ತ ಕುಳಿತಿದ್ದಾರೆ.
ಪ್ರಮುಖ ನಿರ್ಧಾರಕ್ಕೆ ಸಿದ್ಧತೆ:ತಮ್ಮ ಆಡಳಿತದಲ್ಲಿ ಯಾವೆಲ್ಲ ಬದಲಾವಣೆ ತರಲಾಗುವುದೆನ್ನುವುದರ ಬಗ್ಗೆ ತಾಲಿಬಾನ್ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ. ಅಮೆರಿಕನ್ ಪಡೆ ಸಂಪೂರ್ಣವಾಗಿ ದೇಶದ ತೊರೆದ ಬಳಿಕ ಪ್ರಮುಖ ತೀರ್ಮಾನ ಪ್ರಕಟಿಸುವುದಾಗಿ ಸಂಘಟನೆಯ ಮುಖಂಡರು ಹೇಳಿದ್ದಾರೆ.
ಶತ್ರುಗಳಿಗಾಗಿ ಮನೆ ಮನೆ ತಲಾಶ್:ವಿಶ್ವಸಂಸ್ಥೆಗಾಗಿ ಸಿದ್ಧಪಡಿಸಿರುವ ಗುಪ್ತಚರ ಕಡತದ ವರದಿ ಪ್ರಕಾರ, ಅಫ್ಘನ್​ನಲ್ಲಿ ತಾಲಿಬಾನಿಗಳು ವಿರೋಧಿಗಳಿಗಾಗಿ ಮನೆ-ಮನೆ ತಲಾಶ್ ನಡೆಸಿದ್ದಾರೆ. ವಿಶೇಷವಾಗಿ ಅಮೆರಿಕಕ್ಕೆ ಮತ್ತು ನ್ಯಾಟೋ ಪಡೆಗಳಿಗೆ ನೆರವು ನೀಡಿದವರನ್ನು ಗುರುತಿಸಿ ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ವರದಿಯನ್ನು ನಾರ್ವೆಯನ್ ಸೆಂಟರ್ ಫಾರ್ ಗ್ಲೋಬಲ್ ಅನಾಲಿಸಿಸ್ ಸಂಸ್ಥೆ ಸಿದ್ಧಪಡಿಸಿದೆ. ಇದರಂತೆ, ಕಾಬುಲ್ ಏರ್​ಪೋರ್ಟ್​ಗೆ ಹೋಗುವ ದಾರಿಯಲ್ಲೂ ತಾಲಿಬಾನಿಗಳು ಜನರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಶರಣಾಗತಿ ತೋರದವರು ಮತ್ತು ಅವರ ಕುಟುಂಬ ಸದಸ್ಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಷರಿಯಾ ಕಾನೂನು ಪ್ರಕಾರ ಶಿಕ್ಷೆಯನ್ನು ಸ್ಥಳದಲ್ಲೇ ಜಾರಿಗೊಳಿಸುತ್ತಿದ್ದಾರೆ.
ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

ನೆಲದೊಳಗಿನಿಂದ ಒಂದೇ ದಿನ 3 ಸಲ ಕೇಳಿಬಂತು ಭಾರಿ ಸದ್ದು, ಭೂಕಂಪನದ ಅನುಭವ; ಗಡಿಕೇಶ್ವರ ಗ್ರಾಮದಲ್ಲಿ ಗಡಗಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 4 =
Remember me
