ಕಾಬುಲ್:ನಿಗದಿಯಾಗಿರುವ ಆಗಸ್ಟ್ 31ರ ಗಡುವಿನೊಳಗೆ ಜಾಗ ಖಾಲಿ ಮಾಡಿ. ತಪ್ಪಿದರೆ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆ ಎಂದು ಅಮೆರಿಕ ಮತ್ತು ಬ್ರಿಟನ್​ಗಳಿಗೆ ತಾಲಿಬಾನ್ ನೇರ ಎಚ್ಚರಿಕೆ ನೀಡಿದೆ. ತಾಲಿಬಾನ್ ವಕ್ತಾರ ಡಾ. ಸುಹೈಲ್ ಶಹೀನ್ ಸೋಮವಾರ ಸುದ್ದಿಗೋಷ್ಠಿ ನಡೆಸಿ, ವಿದೇಶಿ ಸೇನೆಗಳನ್ನು ಹಿಂಪಡೆಯುವುದಕ್ಕೆ ನಿಗದಿಯಾಗಿರುವ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲ. ಒಂದೊಮ್ಮೆ ಆ.31ರ ಬಳಿಕವೂ ಅವು ಮುಂದುವರಿದರೆ ಅದು ಪ್ರಚೋದನಕಾರಿ ನಡೆಯಾಗುತ್ತದೆ. ಅದರ ಪರಿಣಾಮವನ್ನು ಅಮರಿಕ, ಬ್ರಿಟನ್​ಗಳು ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾನೆ.
ಗಡುವು ವಿಸ್ತರಣೆ ಆಶಾವಾದ:ಅಮೆರಿಕನ್ನರನ್ನು ತವರಿಗೆ ಕರೆ ತರುವುದು ನಮ್ಮ ಆದ್ಯತೆಯ ವಿಚಾರವಾಗಿದೆ. ಈಗಾಗಲೇ ನಿಗದಿಯಾದ ಗಡುವಿನೊಳಗೆ ತೆರವು ಕಾರ್ಯಾಚರಣೆ ಮುಗಿಸಬೇಕು. ಇದು ಸ್ವಲ್ಪ ನೋವಿನ ವಿಚಾರವಾದರೂ ಬೇರೆ ವಿಧಿ ಇಲ್ಲ. ಕಾಬುಲ್​ನಿಂದ 36 ಗಂಟೆ ಅವಧಿಯಲ್ಲಿ 11,000 ಜನರನ್ನು ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಒಟ್ಟು 33,000 ಜನರನ್ನು ಅಲ್ಲಿಂದ ಸ್ಥಳಾಂತರ ಮಾಡಿದಂತಾಗಿದೆ. ಆದಾಗ್ಯೂ, ತೆರವು ಕಾರ್ಯಾಚರಣೆ ಗಡುವು ವಿಸ್ತರಣೆ ಸಂಬಂಧ ಮಾತುಕತೆ ನಡೆದಿದೆ. ಅದು ಯಶ ಕಾಣಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಜನರು ಪಲಾಯನ ಮಾಡ್ತಿಲ್ಲ:ಅಫ್ಘಾನಿಸ್ತಾನದಿಂದ ಜನ ಪಲಾಯನ ಮಾಡ್ತಿಲ್ಲ. ಆದರೆ ಅವರು ಭಯಭೀತರಾಗಿದ್ದಾರೆ. ಈಗ ಕಾಬುಲ್ ಏರ್​ಪೋರ್ಟ್​ನಲ್ಲಿ ಕಾಣುತ್ತಿರುವ ಹತಾಶ ಮನಸ್ಥಿತಿ ‘ಆರ್ಥಿಕ ವಲಸೆ’ಯೇ ಹೊರತು ಬೇರೇನೂ ಅಲ್ಲ ಎಂದು ತಾಲಿಬಾನ್ ವಕ್ತಾರ ಡಾ. ಸುಹೈಲ್ ಶಹೀನ್ ಸ್ಕೈ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾನೆ.
ಹಿಜಬ್ ಧರಿಸಿದ್ರೆ ಸಾಕು!:ಹೆಣ್ಣು ಮಕ್ಕಳು ಮನೆಯಿಂದ ಹೊರಬರುವಾಗ ಹಿಜಬ್ ಧರಿಸಬೇಕು. ಅದರಿಂದ ಅವರು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಉಳಿದಂತೆ ಹೆಣ್ಣುಮಕ್ಕಳಿಗೆ ಎಲ್ಲ ಅಧಿಕಾರಗಳು, ಹಕ್ಕುಗಳು ಇರಲಿವೆ. ಪತ್ರಕರ್ತೆಯರು, ಶಿಕ್ಷಕಿಯರು ಅವರವರ ಕೆಲಸವನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹೆಣ್ಣು ಮಕ್ಕಳ ಶಾಲೆ ಮುಚ್ಚುತ್ತಿಲ್ಲ. ಅದು ಸುಳ್ಳು ಸುದ್ದಿ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗಬಾರದು ಎಂದು ತಡೆಯುತ್ತಿಲ್ಲ. ಯಾವ ಮಹಿಳೆಯನ್ನೂ ಈ ಕುರಿತು ಬೆದರಿಸಿಲ್ಲ. ಅವರ ಹಕ್ಕುಗಳನ್ನು ಕಸಿಯಲಾಗುತ್ತಿಲ್ಲ. ಎಲ್ಲವೂ ಸುಳ್ಳು ಎಂದು ಡಾ. ಸುಹೈಲ್ ಶಹೀನ್ ಹೇಳಿದ್ದಾನೆ.
ಕಾಬುಲ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಸಿಖ್ಖರಿದ್ದಾರೆ. ಅವರನ್ನು ಅಲ್ಲಿಂದ ಸ್ಥಳಾಂತರಿಸುವುದಕ್ಕೆ ನೆರವು ಬೇಕಾಗಿದೆ ಎಂದು ಅಮೆರಿಕದ ಯುನೈಟೆಡ್ ಸಿಖ್ಸ್ ಸಂಘಟನೆ ಹೇಳಿದೆ. ಕಾಬುಲ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಸಿಖ್ಖರಿದ್ದಾರೆ. ಅವರಲ್ಲಿ ಮಹಿಳೆಯರು ಮತ್ತು 50ಕ್ಕೂ ಹೆಚ್ಚು ಮಕ್ಕಳಿದ್ದಾರೆ. ನಾಲ್ಕು ನವಜಾತ ಶಿಶುಗಳಿವೆ. ತಾಲಿಬಾನ್ ವಶಕ್ಕೆ ಅಫ್ಘನ್ ಹೋದ ನಂತರ ಸಿಖ್ಖರನ್ನು ಅಲ್ಲಿಂದ ಸ್ಥಳಾಂತರಿಸುವ ಕೆಲಸದಲ್ಲಿ ಭಾರತ ಮಾತ್ರವೇ ನೆರವು ನೀಡಿದೆ. ಅಮೆರಿಕ, ಪಾಕಿಸ್ತಾನ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ತಜಕಿಸ್ತಾನ್, ಇರಾನ್ ಸರ್ಕಾರಗಳಿಗೂ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ಸಂಘಟನೆ ಹೇಳಿದೆ.
ಭಾರತೀಯರ ಸ್ಥಳಾಂತರ ಕಾರ್ಯ ಕೊನೆ ಹಂತದಲ್ಲಿ:ಅಫ್ಘನ್​ನಿಂದ ಭಾರತೀಯರ ತೆರವು ಕಾರ್ಯಾಚರಣೆ ಕೊನೆಯ ಹಂತ ತಲುಪಿದೆ. ಸೋಮವಾರ ಎರಡು ವಿಮಾನಗಳ ಮೂಲಕ ಕಾಬುಲ್​ನಿಂದ ಭಾರತೀಯರ ತಂಡವನ್ನು ಭಾರತಕ್ಕೆ ಕರೆ ತರಲಾಗಿದೆ. ಆಗಸ್ಟ್ 15ರಿಂದ ಈಚೆಗೆ 700ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿ ಒಬ್ಬ ಬಲಿ:ಕಾಬುಲ್ ಏರ್​ಪೋರ್ಟ್​ನಲ್ಲಿ ಸೋಮವಾರ ಗುಂಡಿನ ಕಾಳಗ ಏರ್ಪಟ್ಟಿದ್ದು, ಒಬ್ಬ ಅಫ್ಘನ್ ಗಾರ್ಡ್ ಮೃತಪಟ್ಟಿದ್ದಾನೆ. ಮೂವರು ಗಾಯಗೊಂಡಿದ್ದಾರೆ ಎಂದು ಜರ್ಮನಿ ಸೇನೆ ಹೇಳಿದೆ. ವಿಮಾನ ನಿಲ್ದಾಣದ ಉತ್ತರ ಭಾಗದ ಗೇಟ್​ನಲ್ಲಿ ಅಪರಿಚಿತ ದುಷ್ಕರ್ವಿುಗಳು ಅಫ್ಘನ್ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರಿಂದಾಗಿ ಗುಂಡಿನ ಕಾಳಗ ನಡೆಯಿತು. ಇದರಲ್ಲಿ ಅಮೆರಿಕ, ಜರ್ಮನಿಯ ಯೋಧರೂ ಭಾಗಿಯಾಗಿದ್ದರು.
ಕಾಬುಲ್​ನ ಹಮೀದ್ ಕರ್ಜೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರು ಪ್ರವೇಶಿಸಬೇಕು ಎಂಬುದಕ್ಕೆ ಅಮೆರಿಕ ರಾಯ ಭಾರ ಕಚೇರಿ 4 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ತಾಲಿಬಾನಿಗಳಿಂದ ಬಚಾವ್ ಆಗಿ ದೋಹಾ ತಲುಪಿರುವುದಾಗಿ ಅಫ್ಘನ್​ನ ಜನಪ್ರಿಯ ಮಹಿಳಾ ಪಾಪ್ ತಾರೆ ಅಯಾನಾ ಸಯೀದ್ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಕಾಬುಲನ್ನು ತಾಲಿಬಾನ್ ವಶಪಡಿಸಿಕೊಂಡ ಬೆನ್ನಿಗೆ ವಾಣಿಜ್ಯ ವಿಮಾನ ಹಾರಾಟ ಬಹುತೇಕ ಸ್ಥಗಿತಗೊಂಡಿತ್ತು. ಕೆಲವೇ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬಳೆಂದು ಹೇಳಿಕೊಂಡಿರುವ ಅಯಾನಾ, ನಾನು ಕ್ಷೇಮವಾಗಿದ್ದೇನೆ ಮತ್ತು ಬದುಕಿದ್ದೇನೆ. ನಿದ್ದೆ ಇಲ್ಲದ ಕಹಿ ನೆನಪಿನ ಕೆಲವು ರಾತ್ರಿಗಳನ್ನು ಅನುಭವಿಸಿದ ಬಳಿಕ ಕತಾರ್, ದೋಹಾ ತಲುಪಿದ್ದೇನೆ. ಇಲ್ಲಿಂದ ಬೇರೆ ವಿಮಾನ ಹಿಡಿದು ಇಸ್ತಾಂಬುಲ್​ಗೆ ತೆರಳುತ್ತೇನೆ. ಮನಸ್ಸು ನಿಯಂತ್ರಣಕ್ಕೆ ಬಂದ ಬಳಿಕ ನಿಮ್ಮೊಂದಿಗೆ ಹಂಚಿಕೊಳ್ಳುವ ವಿಷಯಗಳು ಅನೇಕ ಇವೆ ಎಂದು 13 ಲಕ್ಷ ಇನ್​ಸ್ಟಾಗ್ರಾಂ ಫಾಲೋಯರ್ಸ್​ಗೆ ಅವರು ಹೇಳಿದ್ದಾರೆ. ಅಯಾನಾ ಸಯೀದ್ (36) ಅಫ್ಘನ್ ಟೆಲಿವಿಷನ್​ನಲ್ಲಿ ಹಾಡುಗಾರಿಕೆ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರು. 2015ರಲ್ಲಿ ಅಯಾನಾ ಸ್ಟೇಡಿಯಂನಲ್ಲಿ ಬಹಿರಂಗವಾಗಿ ಹಾಡುವ ಮೂಲಕ ಮೂರು ದಾಖಲೆ ನಿರ್ವಿುಸಿದ್ದರು. ಅಫ್ಘನ್ ಮಹಿಳೆಯೊಬ್ಬರು ಹಾಡಿದ್ದು, ಹಿಜಬ್ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಮತ್ತು ಸ್ಟೇಡಿಯಂನಲ್ಲಿ ಎಲ್ಲರೆದುರು ಪ್ರವೇಶಿಸಿದ ದಾಖಲೆ ಅವರದ್ದು. ಅವರ ಪತಿ ಹಸಿಬ್ ಸಯೀದ್, ಅಫ್ಘನ್ ಮ್ಯೂಸಿಕ್ ಪ್ರೊಡ್ಯೂಸರ್. ಇಸ್ತಾಂಬುಲ್​ನಲ್ಲಿ ಸ್ವಂತ ಮನೆ ಇದ್ದು, ಇನ್ನು ಅಲ್ಲೇ ನೆಲೆಸುವುದಾಗಿ ತಿಳಿಸಿದ್ದಾರೆ.
ದೋಹಾದಿಂದ 146 ಭಾರತೀಯರು:ಅಮೆರಿಕ ಮತ್ತು ನ್ಯಾಟೋ ಪಡೆಗಳ ನೆರವಿನೊಂದಿಗೆ ಕತಾರ್​ನ ರಾಜಧಾನಿ ದೋಹಾ ತಲುಪಿದ್ದ 146 ಭಾರತೀಯರನ್ನು ಭಾರತ ನಾಲ್ಕು ಪ್ರತ್ಯೇಕ ವಿಮಾನಗಳ ಮೂಲಕ ಸೋಮವಾರ ಸ್ವದೇಶಕ್ಕೆ ಕರೆತಂದಿದೆ. ಭಾನುವಾರ 135 ಭಾರತೀಯರು ದೋಹಾದಿಂದ ದೆಹಲಿ ತಲುಪಿದ್ದರು.
ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು

ನಾನು ಟೈಟಾಗಿದ್ದೇನೆ ಗೊತ್ತಾಗಿಲ್ಲ, ಇನ್ನೊಂದು ಕಾರ್ಡ್ ನಂಬರ್ ಕೊಡಿ ಎಂದ; 730 ರೂಪಾಯಿ ವೈನ್‌ಗೆ 1.79 ಲಕ್ಷ ರೂ. ಧೋಖಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
