ಮುಂಬೈ:ಮದುವೆಯಾದ ಮೇಲೆ ಅತ್ತೆ ಮಾವ ವ್ಯಂಗ್ಯ ಮಾತುಗಳನ್ನು ಸೊಸೆಗೆ ಹೇಳಿದರೆ ಅಥವಾ ವ್ಯಂಗ್ಯವಾಗಿ ಮಾತನಾಡಿದರೆ ಅದು ತಪ್ಪಲ್ಲ ಎಂದು ಮುಂಬೈ ಸೆಷನ್ಸ್​ ನ್ಯಾಯಾಲಯ ಹೇಳಿದೆ. ಈ ರೀತಿ ಪ್ರಕರಣವೊಂದನ್ನು ಎದುರಿಸುತ್ತಿದ್ದ ವೈದ್ಧ ದಂಪತಿಗೆ ಜಾಮೀನು ನೀಡಲಾಗಿದೆ.
ಇದನ್ನೂ ಓದಿ:3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!
ಮದುವೆಯಾದ ಮೇಲೆ ವ್ಯಂಗ್ಯ ಮಾತುಗಳನ್ನು ಕೇಳುವುದು ದಾಂಪತ್ಯ ಜೀವನದ ಭಾಗವಾಗುತ್ತದೆ. ಅದ್ಕಕ್ಕೆಂದು ನ್ಯಾಯಾಲಯದ ಮೆಟ್ಟಿಲು ಹತ್ತಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಮಹಿಳೆಯೊಬ್ಬರು ದುಬೈನಲ್ಲಿ ವಿದ್ಯಾಭ್ಯಾಸ ನಡೆಸುವಾಗ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆತ ಮುಂಬೈನ ವೃದ್ಧ ದಂಪತಿಯ ಸಾಕು ಮಗ ಎನ್ನುವುದು ಮಹಿಳೆಗೆ ಮದುವೆಯ ಸಮಯದಲ್ಲಿ ತಿಳಿದುಬಂದಿತ್ತು. ಮದುವೆ ಆಗಿ ಮನೆಗೆ ಬಂದ ಸೊಸೆಗೆ ಅತ್ತೆ ಮಾವ ಹಿಂಸಿಸುತ್ತಿದ್ದರಂತೆ. ಫ್ರಿಜ್​ ಮುಟ್ಟಲು ಕೊಡುತ್ತಿರಲಿಲ್ಲವಂತೆ, ನಿನ್ನೆ ಮೊನ್ನೆ ಮಾಡಿದ್ದ ಅಡುಗೆಯನ್ನೇ ಊಟಕ್ಕೆ ಕೊಡುತ್ತಿದ್ದರಂತೆ. ರೂಮಿನಲ್ಲಿ ಮಲಗಲೂ ಬಿಡದೆ, ಹಾಲ್​ನಲ್ಲಿಯೇ ಮಲಗಲು ಹೇಳುತ್ತಿದ್ದರಂತೆ. ತವರಿಗೆ ಹೋಗಲೂ ಬಿಡುತ್ತಿರಲಿಲ್ಲ ಎಂದು ಮಹಿಳೆ ದೂರಿದ್ದಳು.
ದುಬೈನಿಂದ ಊರಿಗೆ ಬರುವಾಗ 15 ಕೆ.ಜಿ ಡ್ರೈಫ್ರೂಟ್ಸ್​ ಅನ್ನು ಅವರ ಮಗ ನನ್ನೊಂದಿಗೆ ಕಳುಹಿಸಿಕೊಟ್ಟಿದ್ದರು. ಅದನ್ನೂ ಕೂಡ ಅತ್ತೆ ಮಾವ ತೂಕ ಹಾಕಿ ಖಚಿತಪಡಿಸಿಕೊಂಡಿದ್ದರು ಎಂದು ಮಹಿಳೆ ಹೇಳಿದ್ದಾಳೆ.
ಇದನ್ನೂ ಓದಿ:ಪಾಕ್​ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ! ತನಿಖೆಯಿಂದ ಬಯಲಾಯಿತು ಮಹಿಳೆಯ ನಿಜ ಬಣ್ಣ
ಸೊಸೆ ತಮ್ಮ ವಿರುದ್ಧ ದೂರು ನೀಡಿದ್ದಾಳೆ ಎನ್ನುವುದೇ ತಿಳಿದಿರದ ದಂಪತಿಗೆ ಅವರ ಬ್ಯಾಂಕ್​ ಖಾತೆಗಳನ್ನು ಹೋಲ್ಡ್​ ಮಾಡಿದ ನಂತರ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಇದೀಗ 80 ಮತ್ತು 75 ವರ್ಷದ ದಂಪತಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ. (ಏಜೆನ್ಸೀಸ್​)
ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 16 =
Remember me
