ನವದೆಹಲಿ:ಕೇಂದ್ರ ಸರ್ಕಾರ ಮಂಡಿಸಿರುವ ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ)vನ್ನು ಶ್ಲಾಘಿಸಿರುವ ಬಾಲಿವುಡ್​ ನಟಿಯರಾದ ತಮನ್ನಾ ಭಾಟಿಯಾ, ದಿವ್ಯ ದತ್ತ, ಶೆಹನಾಜ್​ ಗಿಲ್​ ಇದೊಂದು ಅತ್ಯುತಮ್ಮ ನಡೆ. ಮಹಿಳೆಯರು ರಾಜಕೀಯಕ್ಕೆ ಬರಲು ಸ್ಪೂರ್ತಿ ನೀಡುತ್ತದೆ ಎಂದಿದ್ದಾರೆ.
ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ ಮೂವರು ನಟಿಯರು ಕೇಂದ್ರ ಸರ್ಕಾರದ ಕ್ರಮವನ್ನು ಹಾಡಿ ಹೊಗಳಿಸಿದ್ದಾರೆ. ಇವರ ಜೊತೆಗೆ ಬಾಲಿವುಡ್​ನ ಹಲವು ನಟಿಯರು ಮಸೂದೆಯನ್ನು ಸ್ವಾಗತಿಸಿದ್ದಾರೆ. ಇವರ ಜೊತೆಗೆ ನಟಿಯರಾದ ಖುಷ್ಬೂ ಸುಂದರ್​, ಹರ್​ನಾಜ್​ ಕೌರ್​ ಸಂಧು, ಸ್ಮೃತಿ ಕಲ್ರಾ, ಸೋನಾಲ್​ ಮಾಥುರ್​, ಕೀರ್ತಿ ಕುಲ್ಹರಿ ನೂತನ ಸಂಸತ್​ ಭವನಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ನಟಿ ತಮನ್ನಾ ಈ ಮಸೂದೆ ಸಾಮಾನ್ಯ ಜನರಿಗೆ ರಾಜಕೀಯಕ್ಕೆ ಬರಲು ಹೆಚ್ಚು ಉತ್ತೇಜನ ನೀಡುತ್ತದೆ. ಮಹಿಳೆಯರು ರಾಜಕೀಯಕ್ಕೆ ಬರುತ್ತೇವೆ ಎಂದರೆ ಪ್ರೋತ್ಸಾಹಿಸುವವರಿಗಿಂತ ಮೂಗು ಮುರಿಯುವವರೇ ಹೆಚ್ಚು. ಸರ್ಕಾರ ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡಲು ಮುಂದಾಗಿರುವುದನ್ನು ಕಂಡಾಗ ರಾಜಕೀಯಕ್ಕೆ ಬರಲು ಸ್ಪೂರ್ತಿಯಾಗುತ್ತದೆ ಎಂದು ಹೇಳಿದ್ದಾರೆ.
#WATCH| On Women's Reservation Bill, actor Tamannaah Bhatia says, "…This bill will inspire common people to join politics".pic.twitter.com/nbjAq4Aqqd
ಇದನ್ನೂ ಓದಿ:ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಸ್ತು; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನೂತನ ಸಂಸತ್
ನಟಿ ದಿವ್ಯ ದತ್ತ ಮಾತನಾಡಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಒಂದು ದೊಡ್ಡ ಉಪಕ್ರಮವಾಗಿದೆ. ಇದು ನಿಜವಾಗಿಯೂ ಉತ್ತಮ ಕ್ರಮವಾಗಿದ್ದು, ಮಹಿಳೆಯರನ್ನು ಈ ಮಸೂದೆ ಮೂಲಕ ಮುಂದಕ್ಕೆ ತರಲಾಗುತ್ತಿದೆ. ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿರುವುದು ಒಂದು ವಿಶೇಷ ಅನುಭವ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
#WATCH| "This (Women's Reservation Bill) is a big initiative. It feels really good. The women are being brought to the forefront. To witness a special session of Parliament is an experience in itself..," says actor Divya Dutta at Parliament.pic.twitter.com/2CLAtefYfi
ನಟಿ ಶಹನಾಜ್​ ಗಿಲ್​ ಮಾತನಾಡಿ ಸರ್ಕಾರದ ವತಿಯಿಂದ ಇದೊಂದು ಅತ್ಯದ್ಭುತ ನಡೆಯಾಗಿದೆ. ನಮಗೆ ಹಕ್ಕು ಮತ್ತು ಸಮಾನತೆಯನ್ನು ನೀಡಿದರೆ ಪೋಷಕರು ಹೆಣ್ಣುಮಕ್ಕಳನ್ನು ಬೆಂಬಲಿಸಲು ಶುರು ಮಾಡುತ್ತಾರೆ. ನಾನು ಒಂದು ಪುಟ್ಟ ಹಳ್ಳಿಯಿಂದ ಬಂದಿದ್ದು, ಅಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೆ ಸೆಟಲ್​ ಆಗುತ್ತಾರೆ ಎಂಬ ಭಾವನೆಯಿದೆ. ಹೆಣ್ಣು ಮತ್ತು ಗಂಡು ಇಬ್ಬರನ್ನು ಸಮಾನವಾಗಿ ನೋಡಿದರೆ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗುತ್ತದೆ ಎಂದು ನಟಿ ಶೆಹನಾಜ್​ ಗಿಲ್​ ಹೇಳಿದ್ದಾರೆ.
#WATCH| Women's Reservation Bill | Actress Shehnaaz Gill says, "…It is a great step. If we are given rights and equal treatment, parents too will support girls. I come from a small village, girls are married off so that they get settled. But after this, if girls and boys are…pic.twitter.com/6Qmk6MHlb5
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
