ಚೆನ್ನೈ:ಆಘಾತಕಾರಿ ಘಟನೆ ಒಂದರಲ್ಲಿ ಖ್ಯಾತ ತಮಿಳು ನಟ, ನಿರ್ದೇಶಕ, ಡಬ್ಬಿಂಗ್​ ಕಲಾವಿದ ಬೋಸ್​ ವೆಂಕಟ್​ ಅವರ ಸಹೋದರ-ಸಹೋದರಿಯು ಒಂದೇ ದಿನ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಬೋಸ್​ ವೆಂಕಟ್​ ಅವರ ಸಹೋದರಿ ವಲರ್​ಮತಿ ಗುಣಸೇಖರನ್​ ಅವರು ಜೂನ್​ 23ರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದು ಕುಟುಂಬಸ್ಥರು ಚೆನ್ನೈಗೆ ದೌಡಾಯಿಸಿದ್ದು, ಈ ವೇಳೆ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ:ಐವರು ಕಳ್ಳರನ್ನು ಹಿಡಿಯಲು ಹೋಗಿ 1,500ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು!
ಪುದುಕೊಟ್ಟೈ ಜಿಲ್ಲೆಯ ಅರಂತಂಗಿ ಬ್ಲಾಕ್​ನ ಪಾಂಡಿಪತಿರಂ ಗ್ರಾಮದ ನಿವಾಸಿಯಾಗಿರುವ ಬೋಸ್​ ವೆಂಕಟ್​ ಅವರ ಸಹೋದರ ರಂಗನಾಥನ್​ ಅವರ ಸಹೋದರಿಯ ಮೃತದೇಹವನ್ನು ನೋಡಿದ ಕೂಡಲೇ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಈ ಕುರಿತು ನಟ ಬೋಸ್​ ವೆಂಕಟ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ತಮ್ಮ ಸಹೋದರ-ಸಹೋದರಿ ಒಂದೇ ದಿನ ಇಹಲೋಕ ತ್ಯಜಿಸಿದ್ದಾಗಿ ತಿಳಿಸಿದ್ದಾರೆ. ನೆಟ್ಟಿಗರು ನಟನ ಕುಟುಂಬದಲ್ಲಾದ ನಷ್ಟದ ಕುರಿತು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + one =
Remember me
