ಚೆನೈ:ಅಮೆರಿಕಾಗೆ ಹೋಗಿದ್ದ ನಟ ಕಮಲ್ ಹಾಸನ್ ಭಾರತಕ್ಕೆ ಮರಳುತ್ತಿದ್ದಂತೆ ಕರೊನಾ ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಚಿಕಿತ್ಸೆಗೆಂದು ನಟ ಕಮಲ್ ಹಾಸನ್​​ರನ್ನು ಚೆನೈನ ಒಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ, ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸಕಲಕಲಾವಲ್ಲಭನಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಒಲಿದುಬಂದಿದೆ. ಕಮಲ್ ಅವರ ಅಭಿಮಾನಿಗಳ ಸಂಖ್ಯೆ ಎಷ್ಟು ಎಂದರೆ ಲೆಕ್ಕವಿಲ್ಲದಷ್ಟು ಎಂದೇ ಹೇಳಬೇಕು. ಹಾಗಾಗಿ, ಅಭಿಮಾನಿಗಳು ನೆಚ್ಚಿನ ನಟನ ಆರೋಗ್ಯದ ಬಗ್ಗೆ ಚಿಂತಿಸುವುದು ಸಹಜ. ಆದರೆ, ನಟ ಕಮಲ್ ಹಾಸನ್ ಅವರ ಮಕ್ಕಳೆ ಯಾಕೋ ಅವರ ಆರೋಗ್ಯದ ಬಗ್ಗೆ ಚಿಂತಿಸುತ್ತಿಲ್ಲಾ ಎಂಬಂತೆ ಅನಿಸುತ್ತಿದೆ.
ಹೌದು, ಅಭಿಮಾನಿಗಳು ತಮ್ಮ ತಂದೆಯ ಆರೋಗ್ಯದ ಬಗ್ಗೆ ಚಿಂತಿಸುತ್ತಾರೆಂದು ನಟಿ ಶೃತಿ ಹಾಸನ್ ಅಂತು ಒಂದು ಟ್ವೀಟ್ ಮೂಲಕ ತಮ್ಮ ತಂದೆ ಆರೋಗ್ಯಕರವಾಗಿದ್ದಾರೆ. ಚಿಂತಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಆದರೂ, ಕಮಲ್ ಹಾಸನ್ ಆರೋಗ್ಯದ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರೂ ಕಮಲ್ ಅವರ ಮಕ್ಕಳು ಮಾತ್ರ ಎಂಜಾಯ್ ಮಾಡುತ್ತಿರುವ ಹಾಂಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣ ಒಂದಿಷ್ಟು ಫೋಟೋಗಳು.

ನಟಿ ಶೃತಿ ಹಾಸನ್ ನವೆಂಬರ್ 26 ರಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಶೃತಿ ಹಾಸನ್ ಅವರ ತಂಗಿ ಮತ್ತು ಅವರ ಹೊಸ ಗೆಳಯನ ಜೊತೆ ಮುಂಬೈನಲ್ಲಿರುವ ತಮ್ಮ ಫ್ಲಾಟ್​​ನಲ್ಲಿ ಒಟ್ಟಿಗೆ ಇದ್ದಾರೆ. ಹಾಗಾಗಿ, ಮೂರು ಜನ ಪಾರ್ಟಿ ಮಾಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ಕಂಡು ಕಮಲ್ ಹಾಸನ್ ಅಭಿಮಾನಿಗಳು ಗರಂ ಆಗಿದ್ದಾರೆ.

ಅತ್ತ ತಂದೆ ಚೆನೈನಲ್ಲಿ ಕರೊನಾದಿಂದ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದರೆ, ಇತ್ತ ಮಕ್ಕಳು ಮಾತ್ರ ಮೋಜೂ ಮಸ್ತಿಯಲ್ಲಿ ತೊಡಗಿದ್ದಾರೆ, ಇದರಿಂದ ನಟಿ ಶೃತಿ ಹಾಸನ್, ಅಕ್ಷರಾ ಹಾಸನ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಹಳ ದಿನಗಳ ನಂತರ ನಟಿ ಶೃತಿ ತಮ್ಮ ತಂಗಿಯನ್ನು ಭೇಟಿಯಾಗಿದ್ದು, ಹೊಸ ಗೆಳೆಯ ಮತ್ತು ಇನ್ನೂ ಮೂರು ಸ್ನೇಹಿತರ ಜೊತೆ ಸೇರಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಆದರೆ, ಅಪ್ಪ ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಪುತ್ರಿಯರು ಮಾಡಿರುವ ಪಾರ್ಟಿ ಅಭಿಮಾನಿಗಳನ್ನು ಕೆರಳಿಸಿದೆ. ಕಮಲ್ ಹಾಸನ್ ಮಕ್ಕಳು ಈ ಯಾವುದೇ ಟೀಕೆಗಳಿಗೆ ಇಲ್ಲಿಯವರೆಗೂ ವಿವರಣೆ ಕೊಟ್ಟಿಲ್ಲ.

ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರು ವಾಪಸ್‌ ಹೋದಾಗ ಧುಮ್ಮಿಕ್ಕಿ ಹರಿಯಿತು ಜೋಗದ ಜಲಪಾತ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − ten =
Remember me
