ಚೆನೈ:ತಮಿಳು ನಟ ಸಿಲಂಬರಸನ್ ಟಿಆರ್ (ಸಿಂಬು) ಅವರ ವೃತ್ತಿಜೀವನದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ನಿರ್ದೇಶಕ ವೆಂಕಟ್ ಪ್ರಭು ಅವರ ‘ಮಾನಾಡು’ ಇತ್ತೀಚೆಗೆ ತೆರೆಗೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸಿಲಂಬರಸನ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ಎಸ್‌ಜೆ ಸೂರ್ಯ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ.

ತಮಿಳುನಾಡಿನಲ್ಲಿ ಮೊದಲ ದಿನದ ಕಲೆಕ್ಷನ್ 7 ಕೋಟಿ ಆಗಿದ್ದರೆ, ಎರಡನೇ ದಿನಕ್ಕೆ 7 ಕೋಟಿ ಕಲೆಕ್ಷನ್ ಮಾಡಿದ್ದು, ರಾಜ್ಯದಲ್ಲಿ ಎರಡು ದಿನದಲ್ಲಿ 14 ಕೋಟಿ ರೂ ಗಳಿಸಿದೆ ಸಿಂಬು ಸಿನಿಮಾ. ಸಿಲಂಬರಸನ್ ಅವರು ಸಿನಿಮಾದಲ್ಲಿ ಮುಸ್ಲಿಂ ಯುವಕ ಅಬ್ದುಲ್ ಖಾಲಿಕ್ ಎಂಬ ಸ್ಟೈಲಿಶ್ ಪಾತ್ರವನ್ನು ನಿರ್ವಹಿಸಿದ್ದು, ಎಸ್‌ಜೆ ಸೂರ್ಯ ಪೋಲೀಸ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ಸಿನಿಮಾದ ನಿರ್ಮಾಪಕ ಸುರೇಶ್ ಚಿತ್ರದ ಗಳಿಕೆಯ ಬಗ್ಗೆ ಹೆಮ್ಮೆಯಿಂದ ತಮ್ಮ ಟ್ವಿಟರ್ ನಲ್ಲಿ ಒಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ನಟ ಸಿಂಬು ‘ಮಾನಾಡು’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದಾಗ ತುಂಬಾ ಭಾವುಕರಾದರು. ಯಾವುದೇ ವಿವಾದಕ್ಕೆ ತಲೆಕೆಡಿಸಿಕೊಳ್ಳದ ಸಿಂಬು ಅವತ್ತು ಮಾತ್ರ, ‘ನನಗೆ ಸಿನಿರಂಗದಲ್ಲಿ ತುಂಬಾ ಜನ ತೊಂದರೆ ಕೊಡುತ್ತಿದ್ದಾರೆ. ಆದರೆ, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತೇನೆ. ನನಗೆ ತೊಂದರೆ ಕೊಡುವವರನ್ನು ನಾನು ನೋಡಿಕೊಳ್ಳುತ್ತೇನೆ. ನೀವು ನನ್ನ ಹೀಗೆ ಪ್ರೀತಿಸಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು.
2days tn theatrical collection 14 cr#maanaaduBlockbuster— sureshkamatchi (@sureshkamatchi)November 27, 2021
2days tn theatrical collection 14 cr#maanaaduBlockbuster
ಸಿಂಬು ‘ಮಾನಾಡು’ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆಲ್ಲರಿಗೂ ಧನ್ಯವಾದಗಳು ತಿಳಿಸಿದ ನಂತರ ತಮ್ಮ ಕಷ್ಟಗಳ ಬಗ್ಗೆ ಇಷ್ಟೇಲ್ಲಾ ಮಾತಾಡಿದರು, ಅವರು ಯಾರ ಹೆಸರು ತೆಗೆಯದೆ ಆರೋಪ ಮಾಡಿದ್ದಾರೆ. ಬಹುಶಃ ಈ ಸಂರ್ದಭದಲ್ಲಿ ನಟ ಸಿಂಬು ಗಳ-ಗಳನೆ ಅತ್ತಿದ್ದು ಅವರ ಅಭಿಮಾನಿಗಳಿಗೆ ತುಂಬಾ ನೋವು ತಂದಿದೆ ಎನ್ನಲಾಗುತ್ತಿದೆ. ಹೀಗಾಗಿ, ಚಿತ್ರ ಈ ಮಟ್ಟಕ್ಕೆ ಹಿಟ್ ಆಗಲು ಅಭಿಮಾನಿಗಳೆ ಕಾರಣ ಎಂದು ಸಹ ಹೇಳಲಾಗುತ್ತಿದೆ.
ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ…ತಡರಾತ್ರಿಯವರೆಗೂ ಎಣಿಕೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − three =
Remember me
