ಕೊಯಮತ್ತೂರು:ಮಹಿಳಾ ರಿಯಲ್​ ಎಸ್ಟೇಟ್​ ಓನರ್​ ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ದೋಚಿದ್ದ ಕಿಲಾಡಿ ಲೇಡಿ ಹಾಗೂ ಆಕೆಯ ಸಹಚರರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ತಿರುವಳ್ಳೂರು ಮೂಲದ ಅರುಣ್‌ಕುಮಾರ್ (37) ಮತ್ತು ಆತನ ಸ್ನೇಹಿತರಾದ ಸುರೇಂದ್ರನ್ ಮತ್ತು ವರ್ಷಿಣಿಯ ಸಹಚರ ಅರುಣ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಾರ್ಚ್ 20 ರಂದು ಎಲ್ಲರೂ ಸೇರಿ ಮನೆಯನ್ನು ದೋಚಿದ್ದರು.
ಸಿಂಘನಲ್ಲೂರು ಮೂಲದ ವರ್ಷಿಣಿ (29) ಕೊಯಮತ್ತೂರಿನ ಪುಲಿಯಾಕುಲಂ ಗ್ರೀನ್‌ಫೀಲ್ಡ್ ಕಾಲೋನಿ ನಿವಾಸಿಯಾಗಿರುವ ರಾಜೇಶ್ವರಿ (63) ಅವರ ಮನೆಯಲ್ಲಿ ಕಳ್ಳತನ ಎಸಗಿದ್ದಳು. ಬರೋಬ್ಬರಿ 2. 5 ಕೋಟಿ ರೂಪಾಯಿ ನಗದು ಹಾಗೂ 100 ಸವರನ್​ ಚಿನ್ನಾಭರಣವನ್ನು ಎಗರಿಸಿದ್ದಳು.
ಇದನ್ನೂ ಓದಿ:ವರುಣದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ? ಹೋದಲೆಲ್ಲ ಕ್ಷಮೆ ಕೋರುತ್ತಿರುವ ಸಿದ್ದು
ಮನೆಯಲ್ಲಿ ರಾಜೇಶ್ವರಿ ಒಬ್ಬರೇ ವಾಸವಾಗಿದ್ದಾರೆ. ವರ್ಷಿಣಿ ರಾಜೇಶ್ವರಿಗೆ ಸಂಬಂಧಿಯಾಗಬೇಕು. ಅವರಿಗೆ ಸಹಾಯಾಕಳಾಗಿ ಕೆಲಸ ಮಾಡುತ್ತಿದ್ದಳು. ಮಾರ್ಚ್​ 20ರಂದು ಆಹಾರದಲ್ಲಿ ಮದ್ದು ಕೊಟ್ಟು ರಾಜೇಶ್ವರಿ ಅವರನ್ನು ನಿದ್ದೆಗೆ ಜಾರುವಂತೆ ಮಾಡಿ, ಹಣ ಹಾಗೂ ಚಿನ್ನಾಭರಣ ದೋಚಿ ಅಲ್ಲಿಂದ ಪರಾರಿಯಾಗಿದ್ದರು. ಆಕೆಯ ಸ್ನೇಹಿತ ಅರುಣ್ ಸಹಾಯದಿಂದಲೇ ಕಳ್ಳತನ ಮಾಡಿದ್ದಳು.
ಕಳ್ಳತನ ಮಾಡಿದ ಹಣದಲ್ಲಿ 33.2 ಲಕ್ಷ ರೂಪಾಯಿ ಮತ್ತು ಆರು ಜೊತೆ ಚಿನ್ನದ ಬಳೆಗಳನ್ನು ತನ್ನ ಸ್ನೇಹಿತರಿಗೆ ನೀಡಿದ್ದಳು ಎಂದು ಅರುಣ್ ಹೇಳಿಕೆ ನೀಡಿದ ಬಳಿಕ ಇತರರನ್ನು ಕೂಡ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲಾಗಿತ್ತು. ಪ್ರಕರಣ ದಾಖಲಾಗಿದ್ದಾಗಿನಿಂದ ಮಹಿಳೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು ಕೊನೆಗೂ ಕಿಲಾಡಿ ಲೇಡಿ ಸಿಕ್ಕಿಬಿದ್ದಿದ್ದಾಳೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಸಂಪಾದಕೀಯ | ಪರಿಶೀಲಿಸಿ ವ್ಯವಹರಿಸಿ; ಪೊಲೀಸ್ ಇಲಾಖೆ ಹೆಸರಲ್ಲೇ ನಕಲಿ ನೇಮಕಾತಿ ವೆಬ್​ಸೈಟ್

ಬಿಜೆಪಿ ಕನ್ನಡ ವಿರೋಧಿಯೇ? ಕೃಷಿ ವಿರೋಧಿಯೇ?

ರಾಜಕೀಯಕ್ಕೆ ಬರುವುದಿಲ್ಲ, ಎಲ್ಲರೂ ನನ್ನ ಗೆಳೆಯರೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 9 =
Remember me
