ನವದೆಹಲಿ:ತಮಿಳುನಾಡಿನ ಕಲಾವಿದನೋರ್ವ ಕಲ್ಲಂಗಡಿ ಹಣ್ಣಿನ ಮೇಲೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ತಾಜ್​ ಮಹಲ್​ ಚಿತ್ರವನ್ನು ಸುಂದರವಾಗಿ ಕೆತ್ತನೆ ಮಾಡಿದ್ದು, ಫೋಟೋ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಎಂ. ಎಲಾಂಚೆಜಿಯಾನ್ ಅವರು ಹಣ್ಣು ಮತ್ತು ತರಕಾರಿಗಳ ಮೇಲೆ ಚಿತ್ರವನ್ನು ಕೆತ್ತುವ ಕಲಾವಿದರು. ಅಮೆರಿಕ ಅಧ್ಯಕ್ಷರು ತಾಜ್​ಮಹಲ್​ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸ್ವಾಗತ ಕೋರುವ ಸಲುವಾಗಿ ಈ ಸುಂದರ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ. ಮೋದಿ ಹಾಗೂ ಟ್ರಂಪ್​ ಅವರನ್ನು ಅಕ್ಕಪಕ್ಕ ಚಿತ್ರಿಸಿ, ಅವರ ತಲೆಯ ಮೇಲ್ಭಾಗದಲ್ಲಿ ತಾಜ್​ ಮಹಲ್​ನ್ನು ರೂಪಿಸಿದ್ದಾರೆ.
31 ವರ್ಷದ ಎಂ. ಎಲಾಂಚೆಜಿಯಾನ್ ಅವರು ಥೇಣಿ ಜಿಲ್ಲೆಯ ಗುಡಲೂರಿನವರು. 5 ಕೆಜಿ ತೂಕದ ಕಲ್ಲಂಗಡಿ ಹಣ್ಣಿನ ಮೇಲೆ ಟ್ರಂಪ್​, ಮೋದಿ ಹಾಗೂ ತಾಜ್​ಮಹಲ್​ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ.
ಕಳೆದ ವರ್ಷ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭಾರತ ಭೇಟಿಯ ವೇಳೆ ನಾಲ್ಕು ಕೆಜಿ ಕಲ್ಲಂಗಡಿ ಹಣ್ಣಿನ ಮೇಲೆ ಮೋದಿ ಹಾಗೂ ಚೀನಾ ಅಧ್ಯಕ್ಷರ ಚಿತ್ರ ಬರೆದಿದ್ದರು.
ಈ ಬಾರಿ ಮೂರು ಚಿತ್ರಗಳನ್ನು ಕೆತ್ತನೆ ಮಾಡಬೇಕಾಗಿರುವುದರಿಂದ ಇನ್ನೂ ದೊಡ್ಡ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಎಲಾಂಚೆಜಿಯಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
