ಚೆನ್ನೈ:ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಲು ಸಕಲ ಸಿದ್ಧತೆಗಳು ವಿವಿಧೆಡೆ ನಡೆಯುತ್ತಿವೆ. ಇದೀಗ ತಮಿಳುನಾಡಿನ ಬಿಜೆಪಿ ಮೋದಿಯವರ ಜನ್ಮದಿನದಂದು (ಸೆ.17) ಜನಿಸುವ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದೆ.
‘ನಾವು ಚೆನ್ನೈನ ಆರ್‌ಎಸ್‌ಆರ್‌ಎಂ ಸರ್ಕಾರಿ ಆಸ್ಪತ್ರೆಯನ್ನು ಗುರುತಿಸಿದ್ದೇವೆ. ಇಲ್ಲಿ ಪ್ರಧಾನಿಯವರ ಜನ್ಮದಿನದಂದು ಜನಿಸಿದ ಎಲ್ಲಾ ಮಕ್ಕಳಿಗೆ ಚಿನ್ನದ ಉಂಗುರವನ್ನು ನೀಡಲು ನಿರ್ಧರಿಸಿದ್ದೇವೆ’ ಎಂದು ತಮಿಳುನಾಡಿನ ಮೀನುಗಾರಿಕೆ, ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ಎಲ್ ಮುರುಗನ್ ಹೇಳಿದ್ದಾರೆ.
ಮೋದಿಯವರ ಜನ್ಮದಿನದಂದು (ಸೆ.17) 10 ರಿಂದ 15 ಮಕ್ಕಳು ಜನಿಸಬಹುದು. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೂ 2 ಗ್ರಾಂ. ಚಿನ್ನದ ಉಂಗುರ ನೀಡಲಿದ್ದೇವೆ. ಒಂದು ಉಂಗುರಕ್ಕೆ 5000 ರೂಪಾಯಿಯಷ್ಟು ವೆಚ್ಚ ತಗಲುತ್ತದೆ. ಪ್ರಧಾನಿಯವರ ಜನ್ಮದಿನವನ್ನು ಅಂದು ಜನಿಸುವ ಮಕ್ಕಳೊಂದಿಗೆ ವಿಶೇಷವಾಗಿ ಆಚರಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.
ನಾಳೆ (ಸೆ. 17) ಪ್ರಧಾನಿ ನರೇಂದ್ರ ಮೋದಿಯವರಿಗೆ 72 ವರ್ಷ ತುಂಬುತ್ತಿದೆ. ಇದಕ್ಕಾಗಿ 720 ಕೆ.ಜಿಯಷ್ಟು ಮೀನನ್ನು ಹಂಚುವ ಬಗ್ಗೆಯೂ ಯೋಜನೆ ರೂಪಿಸಿದ್ದೇವೆ. ಜೊತೆಗೆ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೇಂದ್ರದ ಹಿರಿಯ ಮುಖಂಡರು ಯಾವುದೇ ಕಾರಣಕ್ಕೂ ಕೇಕ್​​ಗಳನ್ನು ಕತ್ತರಿಸದಂತೆ ಸೂಚನೆ ನೀಡಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
