ಕೊಚ್ಚಿ:ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮಿಳುನಾಡು ಸರ್ಕಾರಿ ಸಾರಿಗೆ ಬಸ್​ ನಿರ್ವಾಹಕನನ್ನು ಅಲ್ಲಿನ ಕುಂದಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತೆಂಕಾಸಿ ಮತ್ತು ಕೇರಳದ ಕೊಲ್ಲಂ ನಡುವೆ ಸಂಚಾರ ಮಾಡುವ ಸರ್ಕಾರಿ ಬಸ್​ನಲ್ಲಿ ಈ ಘಟನೆ ನಡೆದಿದೆ. ಬಂಧಿತ ಕಂಡಕ್ಟರ್​ನನ್ನು ಅರಸನ್​ (38) ಎಂದು ಗುರುತಿಸಲಾಗಿದೆ. ಈತ ತೆಂಕಾಸಿ ನಿವಾಸಿ.
ಇದನ್ನೂ ಓದಿ:ಮೈದಾನದಲ್ಲೇ ಜಗಳಕ್ಕಿಳಿದ ಗಂಭೀರ್​-ಕೊಹ್ಲಿ; ವಾಗ್ವಾದಕ್ಕೆ ಮೂಲ ಕಾರಣವೇನು?
ಸಂತ್ರಸ್ತ ವಿದ್ಯಾರ್ಥಿನಿ ಪುನಲೂರು ಮೂಲದವಳು. ಆಕೆ ಮನೆಗೆ ಮರಳಲು ಪ್ರತಿದಿನ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಏಪ್ರಿಲ್​ 19ರಂದು ಬಸ್​ ಕೊಟ್ಟರಾಕರ ಸೇತುವೆ ದಾಟಿದಾಗ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಆಕೆಯ ಬಳಿ ಬಂದು ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಬಳಿಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಮದುವೆ ಮಾಡಿಕೊಳ್ಳೋಣ ಅಂತಾ ವಿದ್ಯಾರ್ಥಿನಿಯನ್ನು ಪೀಡಿಸುತ್ತಾನೆ. ಆದರೆ, ಆಕೆಗೆ ಇದರಿಂದ ಕಿರಿಕಿರಿ ಉಂಟಾಗುತ್ತದೆ.
ಘಟನೆ ನಡೆದ ಬೆನ್ನಲ್ಲೇ ಸಂತ್ರಸ್ತೆ ಪಾಲಕರಿಗೆ ತಿಳಿಸುತ್ತಾಳೆ. ನಂತರ ಪಾಲಕರೊಂದಿಗೆ ಬಸ್​ ಕಂಡಕ್ಟರ್​ನನ್ನು ಪ್ರಶ್ನಿಸಲು ಮಾರನೇ ದಿನ ಬರುತ್ತಾರೆ. ಆದರೆ, ಅದೇ ದಿನ ಬಂಧಿತ ಅರಸನ್​ಗೆ ಬೇರೆ ಸ್ಥಳಕ್ಕೆ ಕಾರ್ಯ ನಿಯೋಜನೆ ಮಾಡಲಾಗಿತ್ತು. ಇತ್ತೀಚೆಗೆ ವಿದ್ಯಾರ್ಥಿನಿಯ ತಂದೆ ಅದೇ ಬಸ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಮಗಳನ್ನು ಬೇರೆ ಸೀಟನಲ್ಲಿ ಕೂರಿಸಿ ತಾವು ಅವಳಿಗೆ ಕಾಣುವಂತೆ ಹಿಂದೆ ಕುಳಿತಿದ್ದರು.
ಇದನ್ನೂ ಓದಿ:VIDEO | ಬ್ರಾಹ್ಮಣರ ಮೂಲ ಭಾರತವಲ್ಲ… ರಷ್ಯಾದಿಂದ ಬಂದು ನೆಲೆಸಿದ್ದಾರೆ; ಚರ್ಚೆಗೆ ಕಾರಣವಾದ ಆರ್​ಜೆಡಿ ನಾಯಕನ ಹೇಳಿಕೆ
ಈ ವೇಳೆ ವಿದ್ಯಾರ್ಥಿನಿಯ ಬಳಿ ಹೋದ ನಿರ್ವಾಹಕ ಮತ್ತೆ ಮದುವೆ ಒತ್ತಾಯಿಸಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಮುಂದಾಗುತ್ತಾನೆ. ಬಳಿಕ ಮಧ್ಯಪ್ರವೇಶಿಸಿದ ತಂದೆ ಮತ್ತು ಆಕೆಯ ಸಂಬಂಧಿಕರು ನಿರ್ವಾಹಕನಿಗೆ ಧರ್ಮದೇಟು ನೀಡಿ ಕುಂದಾರ ಪೊಲೀಸ್​ ಠಾಣೆಗೆ ಎಳೆದೊಯ್ದು ಒಪ್ಪಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.(ಏಜೆನ್ಸೀಸ್​)
ಹಾಟ್​ ಫೋಟೋಗಳನ್ನು ಹರಿಬಿಟ್ಟು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ಖುಷ್ಬೂ ಪುತ್ರಿ!

ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ನಾಲ್ವರು ಸಹೋದರಿಯರು ಸುಟ್ಟು ಸಜೀವ ದಹನ!

ಮಹಾಲಕ್ಷ್ಮಿ ಲೇಔಟ್​ ಅಭಿವೃದ್ಧಿಯೇ ನನ್ನ ಧ್ಯೇಯ: ಸಚಿವ ಕೆ. ಗೋಪಾಲಯ್ಯ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 17 =
Remember me
