ಮಧುರೈ:ಕೆಲವು ವಸ್ತು ಹಾಗೂ ವ್ಯಕ್ತಿಗಳ ಮೇಲೆ ಪ್ರೀತಿಯಾದರೆ ಅವುಗಳನ್ನು ಕಳೆದುಕೊಳ್ಳುವುದು ತುಂಬಾ ಕಷ್ಟವಾಗಿದೆ. ಹೀಗೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ನಿವೃತ್ತಿಯಾಗುವ ಮುನ್ನ ತನ್ನ ಕೆಲಸದ ಕೊನೆಯ ದಿನದಂದು ಭಾವುಕನಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧುರೈ ಜಿಲ್ಲೆಯ ಮುತ್ತುಪಾಂಡಿ (60) ಎಂಬ ವ್ಯಕ್ತಿ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಬಸ್ಸಿನ ಸ್ಟೇರಿಂಗ್ ಚಕ್ರಕ್ಕೆ ಮುತ್ತಿಟ್ಟು ತನ್ನ ಅಳಲು ತೋಡಿಕೊಂಡಿದ್ದು, ಮೂರು ದಶಕಗಳಿಂದ ತಾನು ಮಾಡುತ್ತಿರುವ ಉದ್ಯೋಗದ ಕುರಿತಾಗಿ ಒರುವ ಪ್ರೀತಿ ಎಷ್ಟು ಅಗಾಧವಾಗಿದೆ ಎಂದು ತೋರಿಸುತ್ತದೆ.
ಮುತ್ತುಪಾಂಡಿ ಅವರು, ಮಧುರೈ ಜಿಲ್ಲೆಯ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮಿ ಕಾಲೋನಿ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದರು. ಮುತ್ತುಪಾಂಡಿ ಕೆಲಸದ ಕೊನೆಯ ದಿನದಂದು ಅವರು ಮಹಾಲಕ್ಷ್ಮಿ ಕಾಲೋನಿಗೆ ಬಸ್​​ ಚಲಾಯಿಸಿಕೊಂಡು ಹೋಗುವಾಗ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ:‘ಗ್ಯಾರಂಟಿ’ಗಾಗಿ ಸಿಎಂ-ಸಚಿವರ ಸಭೆ: ಕೊನೆಗೇನು ನಿರ್ಧಾರ?
ವಿಡಿಯೋದಲ್ಲಿ ಏನಿದೆ?:ಕೊನೆಯ ಬಾರಿಗೆ ಬಸ್ಸನ್ನು ನೋಡುತ್ತಾ ಅಳುತ್ತಾರೆ. ಸ್ಟೇರಿಂಗ್, ಚಕ್ರ, ಕ್ಲಚ್, ಗೇರ್, ಬ್ರೇಕ್.. ಹೀಗೆಲ್ಲ ಮುತ್ತಿಕ್ಕಿ ನಮಸ್ಕರಿಸಿ ಬಸ್ಸಿನಿಂದ ಕೆಳಗಿಳಿದರು. ಬಸ್​​ ಬೋರ್ಡಿಗೆ ನಮಸ್ಕರಿಸಿ ಬಸ್ಸಿನ ಮುಂದೆ ಬಂದು ಎರಡು ಕೈಗಳಿಂದ ಬಸ್ಸನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.
#கடைசியாஒருமுறை… ஓய்வு பெறும் நாளில் நெகிழ்ச்சி…#பேருந்தைகட்டிப்பிடித்து அழுத ஓட்டுநர்#முத்துப்பாண்டி..@CMOTamilnadu@sivasankar1ss@kalilulla_it@abm_tn@rajakumaari@DonUpdates_in@PTRajkumar97899@Vel_Vedhapic.twitter.com/pFjkbOcnnG
— Nowshath A (@Nousa_journo)June 1, 2023
”ಸಮಾಜದಲ್ಲಿ ನನಗೆ ಈ ವೃತ್ತಿ ಗೌರವ ತಂದುಕೊಟ್ಟಿದೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾಯಿತು, ”ಎಂದು ಮುತ್ತುಪಾಂಡಿ ಹೇಳಿದರು.
ತಮ್ಮ ಸೇವಾವಧಿಯಲ್ಲಿ ಪ್ರಯಾಣಿಕರು ಹಾಗೂ ಇತರರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು ಎಂದು ಸಹೋದ್ಯೋಗಿಗಳು ಹೊಗಳಿದರು.
VIDEO| ಮುಗ್ಗರಿಸಿ ಬಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
