ಚೆನ್ನೈ:ಬಹಳ ವರ್ಷಗಳಿಂದ ಕರೆದುಕೊಂಡು ಬಂದಿರುವ ಹೆಸರುಗಳನ್ನು ಬದಲಾವಣೆ ಮಾಡುವುದು ಹೊಸ ವಿಷಯವೇನಲ್ಲ. ಆಯಾ ಪ್ರಾದೇಶಿಕ ಭಾಷೆಯನ್ನು ಗಣನೆಗೆ ತೆಗೆದುಕೊಂಡರೆ, ಇಂಗ್ಲಿಷ್​ನಲ್ಲಿ ಬರೆಯುವ ಸ್ಪೆಲ್ಲಿಂಗ್​ಗಳ ಹೆಸರೇ ಬೇರೆಯಾಗಿರುತ್ತದೆ.
ಇದಾಗಲೇ ಕರ್ನಾಟಕದಲ್ಲಿಯೂ ಕೆಲವೊಂದು ಊರುಗಳ ಹೆಸರುಗಳ ಸ್ಪೆಲ್ಲಿಂಗ್​ಗಳನ್ನು ಬದಲಾವಣೆ ಮಾಡಿಯಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಇತ್ಯಾದಿ ಊರುಗಳ ಸ್ಪೆಲ್ಲಿಂಗ್​ಗಳು ಬದಲಾಗಿ ವರ್ಷಗಳೇ ಸಂದಿವೆ.
ಇದೀಗ ತಮಿಳುನಾಡಿನ ಸರದಿ. ಆದರೆ ಇಲ್ಲಿಯ ವಿಶೇಷ ಎಂದರೆ, ಲಾಕ್​ಡೌನ್​ ಅವಧಿಯಲ್ಲಿ ತಮಿಳುನಾಡಿದ ಬರೋಬ್ಬರಿ 1018 ಊರುಗಳ ಹೆಸರುಗಳ ಸ್ಪೆಲ್ಲಿಂಗ್​ ಬದಲಾಯಿಸಿದೆ ಸರ್ಕಾರ. ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆ ಪ್ರಮುಖ ಸ್ಥಳಗಳಿಗೆ ಸ್ಥಳೀಯರ ಉಚ್ಚಾರಣೆ ರೀತಿಯಲ್ಲಿ ತಮಿಳರಿಗೆ ಅರ್ಥವಾಗುವಂಥ ಸ್ಪೆಲ್ಲಿಂಗ್ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ:ಕರೊನಾ ನಡುವೆಯೇ ನೀರಾಗುತ್ತಿದೆ ಗುಲಾಬಿ! ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಚಮತ್ಕಾರ
ತಮಿಳುನಾಡಿನ ಎಲ್ಲಾ 37 ಕಂದಾಯ ಜಿಲ್ಲೆಗಳಲ್ಲಿ ಈ ಹೆಸರು ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಮಿಳುನಾಡಿನ ಸಂಸ್ಕೃತಿ ಖಾತೆ ಸಚಿವ ಕೆ ಪಾಂಡ್ಯರಾಜನ್ ಕೆಲ ದಿನಗಳ ಹಿಂದೆ ಹೇಳಿದ್ದರು. ಅದರಂತೆಯೇ ಈಗ ಮಾಡಲಾಗಿದೆ.
ಇಲ್ಲಿಯವರೆಗೆ ಕೊಯಮತ್ತೂರ್​ ಹೆಸರನ್ನು ಇಂಗ್ಲಿಷ್​ನಲ್ಲಿ Coimbatore ಎಂದು ಬರೆಯಲಾಗುತ್ತಿತ್ತು. ಅದು ಇನ್ನುಮುಂದೆ Koyampuththoor ಆಗುತ್ತದೆ. Puducherry ಇನ್ನು ಮುಂದೆ Puthucherry ಎಂದು ಇಂಗ್ಲೀಷ್ ನಲ್ಲಿ ಬರೆಯಬೇಕಾಗುತ್ತದೆ. ಇಲ್ಲಿಯವರೆಗೆ Mylapore ಇದ್ದ ಮೈಲಾಪುರದ ಸ್ಪೆಲ್ಲಿಂಗ್ Mylapore ಬದಲಿಗೆ Mayilaappoor ಆಗಿದೆ. Egmore ಸ್ಟೇಷನ್​ ಇನ್ನು ಎಳಂಬೂರ್ (Ezhumboor) ಸ್ಟೇಷನ್ ಆಗಲಿದೆ. Vellore – Veeloor ಎಂದು ಬದಲಾಗಿದೆ.
ಇದನ್ನೂ ಓದಿ:ಕರೊನಾ ಗುಣಮುಖರ ಸಂಖ್ಯೆ ಏರಿಕೆ; ಚೇತರಿಕೆ ಪ್ರಮಾಣ ಹೆಚ್ಚಳ
ಬದಲಾಗಿರುವ ಊರುಗಳ ಹೆಸರಿನ ಸ್ಪೆಲ್ಲಿಂಗ್​ಗಳು ಹೀಗಿವೆ:
Tondiyarpet – Thandaiyaarpettai : Purasawalkam – Purasaivaakkam; ​Vepery – Vepperi ; Perambur – Peramboor; VOC Nagar – Va.OO.Si. Nagar; Kodungaiyur – Kodungaiyoor; Peravallur – Peravalloor; Siruvallur – Siruvalloor; Konnur – Konnoor; Koyembedu – Koyambedu; Egmore – Ezhumboor; Chintadripet – Chintadaripettai; Triplicane – Thiruvallikkeni;
Mylapore – Mayilaappoor; Thiruvanmiyur – Thiruvanmiyoor; Mambalam – Maambalam; Saidapet – Saithaappettai; Ekkattuthangal – Eekkattuththaangal; Guindy Park – Gindi Poongaa; Thiyagaraya Nagar – Thiyaagaraaya Nagar; Pallikaranai – Pallikkaranai; Okkiam Thorappakkam – Okkiyam Thuraipakkam; Sholinganallur – Solinganalloor; Uthandi – Uththandi;
Mugalivakkam – Mugalivaakkam; Manappakkam – Manappaakkam; Alandur – Aalandhoor; Meenambakkam – Meenambaakkam; Porur – Poroor; Nanganallur – Nangainallur; Adambakkam – Aadhambaakkam; Ambattur – Ambaththoor; Thiruvottriyur – Thiruvotriyoor; Dharmapuri – Tharumapuri; Madavaram – Maathavaram; Dharapuram – Tharaapuram; Coimbatore – Koyampuththoor; Gudalur – Koodaloor;
Puducherry – Puthucherry; Varagur – Varagoor; Talaivasal – Thalaivasal; Kandalur – Kaanthaloor; Thiruverambur – Thiruverumboor; Tuvagudi – Thuvakkudi; Manaparai – Manapparai; Chattrappatti – Chatthirappatti; Pudur – Puthoor; Uthamapalayam – Uthamapaalayam; Vellore – Veeloor; Pernambut – Peranaampattu;
Vatalagundu – Vaththalakundu; hiruvarur – Thiruvaroor; uthupet – Muthuppettai; Tiruthuraipundi – Thirutthurai Poondi; Kudavasal – Kudavaasal; Nidamangalam – Needaamangalam; Orathanadu – Oratthanaadu; Kattur – Kaattoor
ಬುಲೆಟ್​ ಮಿಸ್ಸಿಂಗ್​ ಪ್ರಕರಣಕ್ಕೆ ಟ್ವಿಸ್ಟ್​: ಆತ್ಮಹತ್ಯೆ ಮಾಡಿಕೊಂಡಿದ್ದ ‘ಕಳ್ಳ’ ಜೀವಂತ ಸಿಕ್ಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
