ಕರೊನಾ ಲಾಕ್​ಡೌನ್​ ನಿರ್ಬಂಧವನ್ನು ಬಹುತೇಕ ಸಡಿಲಗೊಳಿಸಿರುವ ಕೇಂದ್ರ ಸರ್ಕಾರ ಇಂದು ಅನ್​ಲಾಕ್​-5ರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಆದರೆ ಕೆಲವು ರಾಜ್ಯಗಳು ಮಾತ್ರ ಅನ್​ಲಾಕ್​ಗಳನ್ನೆಲ್ಲ ಬದಿಗೊತ್ತಿ ಲಾಕ್​ಡೌನ್​​ ಮುಂದುವರಿಸುವತ್ತಲೇ ಚಿಂತನೆ ನಡೆಸುತ್ತಿವೆ. ಕೇರಳ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತೊಮ್ಮೆ ಲಾಕ್​ಡೌನ್​ ಹೇರುವ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ. ಆದರೆ ತಮಿಳುನಾಡು ಸರ್ಕಾರ ನಿನ್ನೆಯೇ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಅಕ್ಟೋಬರ್​ 31ರವರೆಗೂ ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಆದೇಶ ನೀಡಿದೆ.ಇದನ್ನೂ ಓದಿ:ನಾಳೆಯಿಂದ ದೇಶದಲ್ಲಿ ಅನ್​ಲಾಕ್​-5: ಹೀಗಿದೆ ನೋಡಿ ಕೇಂದ್ರದ ಹೊಸ ಮಾರ್ಗಸೂಚಿ
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಲಾಕ್​ಡೌನ್​ ವಿಸ್ತರಣೆ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಸ್ವಲ್ಪ ಮಟ್ಟಿಗೆ ನಿರ್ಬಂಧಗಳನ್ನು ಸಡಿಲಿಸಿ, ಲಾಕ್​ಡೌನ್​ ವಿಸ್ತರಣೆ ಮಾಡಿದ್ದಾರೆ.ಕಂಟೇನ್​ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಇರಲಿದೆ. ಸೆಕ್ಷನ್​ 144 ಕೂಡ ಮುಂದುವರಿಯಲಿದೆ. ಅದನ್ನು ಹೊರತುಪಡಿಸಿದ ಏರಿಯಾಗಳಲ್ಲಿ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ:ಡೌಟೇ ಬೇಡ ಅಕ್ಟೋಬರ್ 4ಕ್ಕೇ ನಡೆಯುತ್ತೆ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ
ಶಿಕ್ಷಣ ಸಂಸ್ಥೆಗಳು, ಪಾರ್ಕ್​, ಮನರಂಜನಾ ಸ್ಥಳಗಳು, ಮ್ಯೂಸಿಯಂಗಳು ತೆರೆಯಲು ಅವಕಾಶ ಇಲ್ಲ. ಹಾಗೇ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಮಾರಂಭಗಳ ನೆಪದಲ್ಲಿ ಗುಂಪುಗೂಡುವಂತಿಲ್ಲ ಎಂದೂ ತಿಳಿಸಿದ್ದಾರೆ.ಹಾಗೇ ಸಿನಿಮಾ ಶೂಟಿಂಗ್​ ಮುಂದುವರಿಸಬಹುದು. ಆದರೆ 100 ಜನರು ಮಾತ್ರ ಸ್ಥಳದಲ್ಲಿ ಇರಬೇಕು. ಸಣ್ಣಪುಟ್ಟ ಹೋಟೆಲ್​ಗಳು, ರೆಸ್ಟೋರೆಂಟ್​ಗಳು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಎಂದೂ ಹೇಳಿದ್ದಾರೆ. (ಏಜೆನ್ಸೀಸ್)
‘ಮತ್ತೊಮ್ಮೆ ಲಾಕ್​ಡೌನ್​ ಹೇರುವ ಅನಿವಾರ್ಯತೆ ಎದುರಾಗುತ್ತಿದೆ…ನಮಗೂ ಬೇರೆ ಆಯ್ಕೆ ಇಲ್ಲ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
