ದೇಶದಲ್ಲಿ ನಾಲ್ಕನೇ ಹಂತದ ಅನ್​​ಲಾಕ್​ ಪ್ರಕ್ರಿಯೆ ಜಾರಿಯಾಗುತ್ತಿದೆ. ಸಭೆ-ಸಮಾರಂಭಗಳಿಗೆ, ಮೆಟ್ರೋ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗೆ ಒಂದೊಂದೇ ಹಂತದಲ್ಲಿ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಡುತ್ತಿದೆ.ನಿನ್ನೆಯಷ್ಟೇ ಅನ್​​ಲಾಕ್-4ರ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸೆಪ್ಟೆಂಬರ್​ 30ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸೆಪ್ಟೆಂಬರ್​ 30ರವರೆಗೆ ಅಂದರೆ ಇನ್ನೂ ಒಂದು ತಿಂಗಳು ಲಾಕ್​ಡೌನ್​ ಜಾರಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಇಂದು ಘೋಷಿಸಿದ್ದಾರೆ.ಇದನ್ನೂ ಓದಿ:ಭಾರತೀಯ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ಸ್ (ಎಸ್​ಟಿಪಿಐ) ನಲ್ಲಿ ಡಿಪ್ಲೊಮಾ, ಪದವಿ ಆದವರಿಗೆ ಉದ್ಯೋಗ
ತಮಿಳುನಾಡಿನಲ್ಲಿ ಇಷ್ಟು ದಿನ ಇದ್ದಿದ್ದ ಲಾಕ್​ಡೌನ್ ನಿಯಮಗಳಲ್ಲಿ ತುಸು ಸಡಿಲಿಕೆ ಮಾಡಲಾಗಿದ್ದರೂ ಪೂರ್ತಿ ತೆರವು ಗೊಳಿಸುವುದಿಲ್ಲ. ಆದರೆ ರಾಜ್ಯದ ಆರ್ಥಿಕತೆ ದೃಷ್ಟಿಯಿಂದ, ಜನಜೀವನವನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವ ಸಲುವಾಗಿ ಲಾಕ್​ಡೌನ್​​ ನಿಯಮಗಳಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿ ಭಾನುವಾರ ಲಾಕ್​ಡೌನ್​ ಇರುವುದಿಲ್ಲ. ತಮಿಳುನಾಡಿನಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಕಡೆಗೆ ಹೋಗಲು ಯಾವುದೇ ಪಾಸ್​ ಅಗತ್ಯವಿಲ್ಲ. ಶಾಲಾಕಾಲೇಜು, ಸಿನಿಮಾ ಹಾಲ್​ಗಳು, ಪ್ರಾಣಿಸಂಗ್ರಹಾಲಯ, ಮ್ಯೂಸಿಯಂ, ಪ್ರವಾಸಿ ಸ್ಥಳಗಳೆಲ್ಲ ಬಂದ್​ ಇರುತ್ತವೆ. ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಸಭೆ, ಸಮಾರಂಭಗಳನ್ನು ನಡೆಸಲು ಅವಕಾಶ ಇಲ್ಲ.ಇನ್ನುಳಿದಂತೆ ಅಂಗಡಿ, ಮಾಲ್​​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಅಲ್ಲೆಲ್ಲ ಕೊವಿಡ್​-19 ಶಿಷ್ಟಾಚಾರಗಳ ಪಾಲನೆಯನ್ನು ಅಗತ್ಯವಾಗಿ ಮಾಡಬೇಕು ಎಂದು ತಮಿಳುನಾಡು ಲಾಕ್​​ಡೌನ್​ ಮಾರ್ಗಸೂಚಿಯಲ್ಲಿ ತಿಳಿಸಿದೆ. (ಏಜೆನ್ಸೀಸ್​)
100ಕ್ಕೂ ಹೆಚ್ಚು ತಾಸುಗಳು ಕಳೆದುಹೋದವು..’: ಕಂಗನಾಗೆ ಬಿಜೆಪಿ ಮುಖಂಡನ ಬೆಂಬಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
