ಚೆನ್ನೈ:ಸಮುದ್ರ ಮೀನುಗಾರಿಕೆ ವೇಳೆ ಬಲೆಗೆ ಸಿಲುಕಿದ್ದ ಎರಡು ಡಾಲ್ಫಿನ್ ಮೀನುಗಳನ್ನು ತಮಿಳುನಾಡಿನ ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಮನಾಥಪುರ ಜಿಲ್ಲೆಯ ಕೀಲಕರನಿ ವ್ಯಾಪ್ತಿಯಲ್ಲಿ ಮೀನುಗಾರರ ಬಲೆಗೆ ಡಾಲ್ಫಿನ್ ಮೀನುಗಳು ಸಿಕ್ಕಿ ಹಾಕಿಕೊಂಡಿವೆ. ಮೀನುಗಾರರು ದಡಕ್ಕೆ ಬಂದಾಗ ಡಾಲ್ಫಿನ್ ಮೀನು ಬಲೆಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದೊಂದಿಗೆ ಬಲೆಯಿಂದ ಬಿಡಿಸಿ, ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ.
Tamil Nadu Forest Team & local fishermen successfully rescued and released two dolphins caught in a fishing net in keelkarai Range, Ramanathapuram District today.Great power of fruitful community engagement.We will honour these real Heroes.Kudos Jagdish, DFO Ramnad 👏#TNForestpic.twitter.com/ZY2VvbNzgV— Supriya Sahu IAS (@supriyasahuias)November 30, 2022
Tamil Nadu Forest Team & local fishermen successfully rescued and released two dolphins caught in a fishing net in keelkarai Range, Ramanathapuram District today.Great power of fruitful community engagement.We will honour these real Heroes.Kudos Jagdish, DFO Ramnad 👏#TNForestpic.twitter.com/ZY2VvbNzgV
ಈ ಬಗ್ಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, ಇದು ಸಮುದಾಯವೊಂದರ ದೊಡ್ಡ ಶಕ್ತಿಗೆ ಉದಾಹರಣೆ. ಹೀಗಾಗಿ ಈ ರಕ್ಷಣಾ ಕಾರ್ಯಾಚರಣೆಯ ಪ್ರತಿಯೊಬ್ಬನನ್ನು ಗೌರವಿಸುತ್ತೇವೆ. ಡಿಎಫ್​ಓಗಳಾದ ಜಗದೀಶ್ ಹಾಗೂ ರಾಮ್​​ನದ್​ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಸಮುದ್ರ ದಡದಲ್ಲಿ ಡಾಲ್ಪಿನ್‌ಗಳನ್ನು ಮೀನಿನ ಬಲೆಯಿಂದ ಬಿಡಿಸುತ್ತಿರುವುದನ್ನು ಕಾಣಬಹುದು. ನಂತರ ಮೀನುಗಾರರು ಡಾಲ್ಪಿನ್‌ನನ್ನು ಸಮುದ್ರ ತೀರದಿಂದ, ನೀರಿಗೆ ಬಿಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
