ಚೆನ್ನೈ:ತಮಿಳುನಾಡಿನ ಮಾಜಿ ಸಿಎಂ, ಪುರುಚ್ಚಿ ತಲೈವಿ ಎಂದೇ ಕರೆಯಲಾಗುತ್ತಿದ್ದ ಜೆ. ಜಯಲಲಿತಾ ಮನೆ ಸ್ಮಾರಕವನ್ನಾಗಿಸಲ್ಲ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.
ಎಐಎಡಿಎಂಕೆ ನೇತೃತ್ವದ ಸರ್ಕಾರ ಪೋಯಸ್​ ಗಾರ್ಡನ್​ನಲ್ಲಿರುವ ಮೂರು ಅಂತಸ್ತಿನ ವಿಶಾಲ ಮನೆ ವೇದಾ ನಿಲಯವನ್ನು ಜಯಲಲಿತಾ ನೆನಪಿನಲ್ಲಿ ಸ್ಮಾರಕವಾಗಿಸಲು ಯೋಜನೆ ರೂಪಿಸಿತ್ತು. ಇದಕ್ಕಾಗಿ ಪುರುಚ್ಚಿ ತಲೈವಿ ಡಾ. ಜೆ. ಜಯಲಲಿತಾ ಸ್ಮಾರಕ ಪ್ರತಿಷ್ಠಾನವನ್ನು ರಚಿಸಿತ್ತು.
ಇದನ್ನೂ ಓದಿ;ತನಗಿರುವ ವಿಚಿತ್ರ ಗೀಳಿನಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾಳೆ ಈ ಯುವತಿ

ಆದರೆ, ಇದಕ್ಕಾಗಿ ಮನೆಯಲ್ಲಿದ್ದವರನ್ನು ತೆರವು ಮಾಡುವುದಿಲ್ಲ, ಯಾವುದೇ ವಸ್ತುಗಳ ಸ್ಥಳಾಂತರಕ್ಕೂ ಅವಕಾಶವಿಲ್ಲ ಎಂದು ಹೇಳಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲ ಭನ್ವಾರಿಲಾಲ್​ ಅನುಮೋದನೆ ಕೂಡ ನೀಡಿದ್ದರು.
ಜಯಲಲಿತಾ 2016ರ ಡಿಸೆಂಬರ್​ನಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ಮನೆ ಯಾರ ಅಧೀನಕ್ಕೆ ಸೇರಲಿದೆ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿತ್ತು. ಆಸ್ತಿ ಬಗ್ಗೆ ಕಲಹಗಳು ಉಂಟಾಗಿದ್ದವು. ಜತೆಗೆ ಸ್ಮಾರಕ ಸ್ಥಾಪನೆಗೆ ಹೈಕೋರ್ಟ್​ ತಡೆ ನೀಡಿತ್ತು.
ಇದನ್ನೂ ಓದಿ;ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!
ಇದೀಗ, ಸ್ಮಾರಕ ನಿರ್ಮಾಣ ಯೋಜನೆ ಕೈಬಿಟ್ಟಿರುವ ತಮಿಳುನಾಡು ಸರ್ಕಾರ ವೇದಾ ನಿಲಯವನ್ನು ಸಿಎಂ ಅಧಿಕೃತ ನಿವಾಸವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೈಕೋರ್ಟ್​ಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಿದೆ.
ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
