ಚೆನ್ನೈ:ಜಲ್ಲಿಕಟ್ಟು ಕ್ರೀಡೆ ಎಷ್ಟು ಮನರಂಜೆನಯೋ ಅಷ್ಟೇ ಡೇಂಜರಸ್​ ಕೂಡ ಹೌದು. ಜಲ್ಲಿ ಕಟ್ಟು ಕ್ರೀಡೆ ನೋಡಲು ಬಂದ ಯುವಕನೊಬ್ಬನಿಗೆ ಎತ್ತು ನೇರವಾಗಿ ಬಂದು ಗುದ್ದಿದ್ದು, ಯುವಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿಯ ಹಳೆಪೆಟ್ಟೆ ಸಮೀಪದಲ್ಲಿ ಸೋಮವಾರದಂದು ಜಲ್ಲಿಕಟ್ಟು ಕ್ರೀಡೆ ನಡೆಸಲಾಗುತ್ತಿತ್ತು. ಕ್ರೀಡೆಯಲ್ಲಿ ನೂರಾರು ಎತ್ತುಗಳು ಭಾಗಿಯಾಗಿದ್ದವು. ಸುತ್ತ ಮುತ್ತ ಯುವಕರು ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ರಭಸದಿಂದ ಬಂದ ಗೂಳಿಯೊಂದು ಯುವಕನಿಗೆ ಗುದ್ದಿ ಮುಂದೆ ಸಾಗಿದೆ. ಗೂಳಿಯ ಅಡಿಯಾದ ಯುವಕ ಅಲ್ಲೇ ಅಸ್ವಸ್ಥನಾಗಿ ಬಿದ್ದಿದ್ದಾನೆ.
ಗಾಯಾಳುವನ್ನು ತಕ್ಷಣ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮಂಗಳವಾರದಂದು ಮೃತನಾಗಿದ್ದಾನೆ. ಮೃತನು ಅವನಾಪೆಟ್ಟಿ ಗ್ರಾಮದ ನಿವಾಸಿ ಶಕ್ತಿ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೃಷ್ಣಗಿರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)
ಗಟ್ಟಿ ಹೃದಯವಿರುವವರು ಮಾತ್ರ ಈ ವಿಡಿಯೋ ನೋಡಿ.. ಗೂಳಿಯೋ ಯಮನೋ ನೀವೇ ನಿರ್ಧರಿಸಿ…ತಮಿಳುನಾಡಿನ ಕೃಷ್ಣಗಿರಿಯ ಹಳೆಪೆಟ್ಟೆ ಸಮೀಪದಲ್ಲಿ ಸೋಮವಾರದಂದು ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಶಕ್ತಿ ಹೆಸರಿನ ಯುವಕನಿಗೆ ಗೂಳಿ ಗುದ್ದಿರುವ ದೃಶ್ಯವಿದು..pic.twitter.com/JZdCdWuVKP
— Vijayavani (@VVani4U)February 16, 2021

ಟಾಪ್​ಲೆಸ್​ ರಿಹಾನ ಕೊರಳಲ್ಲಿ ಗಣೇಶನ ಪದಕ! ಕೆರಳಿಸುವ ಫೋಟೋ ಹೇಗಿದೆ ನೋಡಿ…

ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − nine =
Remember me
