ಚೆನ್ನೈ:ಕರೊನಾ ಎರಡನೇ ಅಲೆ ತಗ್ಗಿದ್ದು, ಮೂರನೇ ಅಲೆಯ ಭಯವಿರುವಾಗಲೇ ಬಹುತೇಕ ರಾಜ್ಯಗಳು ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿವೆ. ಆದರೆ ನೆರೆಯ ತಮಿಳುನಾಡಿನಲ್ಲಿ ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಿ ಘೋಷಿಸಲಾಗಿದೆ. ಜುಲೈ 19ರವರೆಗೆ ಲಾಕ್​ಡೌನ್ ಮುಂದುವರಿಯಲಿದೆ.
ಲಾಕ್​ಡೌನ್ ವಿಸ್ತರಣೆ ಜತೆ ಒಂದಿಷ್ಟು ಕ್ಷೇತ್ರಗಳಲ್ಲಿ ಸಡಿಲಿಕೆಯನ್ನೂ ನೀಡಲಾಗಿದೆ. ಎಲ್ಲ ಅಂಗಡಿಗಳಿಗೆ ರಾತ್ರಿ 9 ಗಂಟೆಯವರೆಗೆ ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್, ಟೀ ಶಾಪ್​ಗಳು, ಬೇಕರಿಗಳು, ರಸ್ತೆ ಬದಿ ತಿಂಡಿ ಮಾರಾಟ ಮಾಡುವವರು ಹಾಗೂ ಸ್ವೀಟ್ ಅಂಗಡಿಗಳಿಗೆ ರಾತ್ರಿ 9 ಗಂಟೆಯವರೆಗೆ ಶೇ. 50 ಗ್ರಾಹಕರೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶವಿದೆ. ಮದುವೆಗಳಿಗೆ 50 ಜನ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಸೇರಲು ಅವಕಾಶವಿದೆ.
ಶಾಲೆ, ಕಾಲೇಜು, ಬಾರ್​ಗಳು, ಸಿನಿಮಾ ಮಂದಿರಗಳು, ಸ್ವಿಮ್ಮಿಂಗ್ ಪೂಲ್​ಗಳು, ಜೂಗಳು ಬಾಗಿಲು ಮುಚ್ಚಿರಲಿವೆ. ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸದ್ಯಕ್ಕೆ ರಾಜ್ಯದಿಂದ ರಾಜ್ಯಕ್ಕೆ ಬಸ್​ ಸಂಚಾರವಿಲ್ಲವಾದರೂ, ಹತ್ತಿರದ ಪುದುಚೆರಿಗೆ ಬಸ್ ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ.
ಶುಕ್ರವಾರದಂದು ತಮಿಳುನಾಡಿನಲ್ಲಿ 3,039 ಕರೊನಾ ಪ್ರಕರಣ ದೃಢವಾಗಿದೆ. 69 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 25.13 ಲಕ್ಷಕ್ಕಿಂತ ಹೆಚ್ಚಾಗಿದೆ. (ಏಜೆನ್ಸೀಸ್)
ವಿಕ್ರಾಂತ್ ರೋಣ ಚಿತ್ರದ ಸ್ಪೆಷಲ್​ ಸಾಂಗ್​ಗಾಗಿ ಬೆಂಗಳೂರಿಗೆ ಬಂದಿಳಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್!

42,766 ಹೊಸ ಕರೊನಾ ಪ್ರಕರಣ; ಕೇರಳದಲ್ಲಿ ಅತಿ ಹೆಚ್ಚು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
