ಚೆನ್ನೈ:ಕರ್ನಾಟಕದ ಲಾಕ್​ಡೌನ್​ ಅನ್ನು ಎರಡು ವಾರಗಳ ಕಾಲ ವಿಸ್ತರಣೆ ಮಾಡಿರುವ ಬೆನ್ನಲ್ಲೇ ನೆರೆಯ ತಮಿಳುನಾಡಿನಲ್ಲೂ ಅಂತದ್ದೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ ಲಾಕ್​ಡೌನ್​ ಅನ್ನು ಒಂದು ವಾರದ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಾಕ್​ಡೌನ್​ ಕುರಿತಾಗಿ ಶನಿವಾರದಂದು ರಾಜ್ಯದ ಎಲ್ಲ ಶಾಸಕರ ಜತೆ ಚರ್ಚೆ ನಡೆಸಲಾಗಿದೆ. ಅದರಲ್ಲಿ ಎರಡು ವಾರಗಳ ಕಾಲ ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಮಾತನಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಶಾಸಕರು ಒಂದು ವಾರದ ಕಾಲ ಲಾಕ್​ಡೌನ್​ ಮಾಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದೆ.
ಲಾಕ್​ಡೌನ್​ ಅವಧಿಯಲ್ಲಿ ಆಸ್ಪತ್ರೆ, ಮೆಡಿಕಲ್​, ಹಾಲಿನ ಸ್ಟಾಲ್​ಗಳು, ನೀರು ಸೇರಿ ಕೆಲ ಅಗತ್ಯ ಸೇವೆಗಳು ಎಂದಿನಂತೆ ಇರಲಿವೆ. ತರಕಾರಿ, ಹಣ್ಣು, ದಿನಸಿಯನ್ನು ಸರ್ಕಾರದಿಂದಲೇ ಗಾಡಿಯಲ್ಲಿ ತಂದು ಎಲ್ಲೆಡೆ ಮಾರಾಟ ಮಾಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)
ಮೊದಲನೇ ಅಲೆಯಲ್ಲಿ 748, ಎರಡನೇ ಅಲೆಯಲ್ಲಿ 420 ವೈದ್ಯರು ಕರೊನಾಗೆ ಬಲಿ!

ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
