ಧರ್ಮಪುರಿ:ಸಾರ್ವಜನಿಕರಲ್ಲಿ 10 ರೂ. ನಾಣ್ಯದ ಬಗ್ಗೆ ಜಾಗೃತಿ ಮೂಡಿಸಿಲು ತಮಿಳುನಾಡಿನ ಈ ವ್ಯಕ್ತಿ ಮಾಡಿರುವ ಕೆಲಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.ಬಹಳಷ್ಟು ಮಂದಿ 10 ರೂ. ನಾಣ್ಯ ಚಲಾವಣೆಯಲ್ಲೇ ಇಲ್ಲ ಎಂದೇ ಭಾವಿಸಿದ್ದಾರೆ. ಈ ಬಗ್ಗೆ ಆರ್​ಬಿಐ ಸ್ಪಷ್ಟನೆ ನೀಡಿದ್ದರೂ ಕೂಡ ಜನರಲ್ಲಿ ಅಷ್ಟಾಗಿ ಅರಿವು ಬಂದಿಲ್ಲ ಎಂದೇ ಹೇಳಬಹುದು.
ಕೆಲವೆಡೆ 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಫಲಕಗಳನ್ನು ಹಾಕಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿ 10 ರೂ. ನಾಣ್ಯಗಳನ್ನು ಸಂಗ್ರಹಿಸಿ, ಈ ನಾಣ್ಯಗಳಿಂದಲೇ ಕಾರು ಖರೀದಿ ಮಾಡಿದ್ದಾರೆ.ಧರ್ಮಪುರಿಯ 27 ವರ್ಷದ ಹೋಮಿಯೋಪತಿ ವೈದ್ಯ ಡಾ. ಎ ವೆಟ್ರಿವೇಲ್ ಎಂಬುವವರು 10 ರೂಪಾಯಿ ನಾಣ್ಯಗಳನ್ನು ನೀಡಿ 6 ಲಕ್ಷ ರೂ.ಬೆಲೆಯ ಕಾರನ್ನು ಖರೀದಿಸಿದ್ದಾರೆ.ಈ ಮೂಲಕ ಈ ನಾಣ್ಯ ಚಲಾವಣೆಯಲ್ಲಿದೆ ಎಂದು ಅರಿವು ಮೂಡಿಸಿದ್ದಾರೆ.
ಒಂದು ವೇಳೆ ಕಾರಿನ ಬೆಲೆ 12 ಲಕ್ಷ ಆಗಿದ್ದರೆ, ಅಷ್ಟೂ ಹಣವನ್ನು 10 ರೂ. ಕಾಯಿನ್​ಗಳನ್ನು ಮತ್ತಷ್ಟು ಸಂಗ್ರಹಿಸಿ ಅದರಿಂದಲೇ ಕೊಂಡುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಒಟ್ಟು ನಾಲ್ಕು ಚೀಲಗಳಲ್ಲಿ ಕಾಯಿನ್​ಗಳನ್ನು ತಂದು ಕಾರು ಖರೀದಿಸಿದ್ದಾರೆ.
When you want to make a statement with 10 rupee coins….buy a car worth 6 lakhs with it. Vetrivel of dharmapuri wanted to tell India that Rs 10 is legal tender.pic.twitter.com/6nbBIBFaUY
— Rohini Swamy (@Rohini_Swamy)June 20, 2022

ಶಾಲೆಯನ್ನು ನಡೆಸುತ್ತಿರುವ ಈ ವೈದ್ಯ ತಾನು ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ 10 ರೂ. ನಾಣ್ಯ ಇಟ್ಟು ಆಟ ಆಡುತ್ತಿದ್ದದ್ದನ್ನು ಗಮನಿಸಿದೆ. ಆಗ ಪ್ರಶ್ನಿಸಿದಾಗ ಇದು ಚಲಾವಣೆಯಲ್ಲಿಲ್ಲ ಎಂದು ಕೇಳ್ಪಟ್ಟೆ. ಧರ್ಮಪುರಿಯಲ್ಲಿ ಯಾವ ಅಂಗಡಿಯಲ್ಲೂ ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸಲು ಮನೆ ಮನೆಗೆ ತೆರಳಿ ತನ್ನ ಬಳಿ ಇದ್ದ ನೋಟು ನೀಡಿ ಜನರಿಂದ 10 ರೂ. ನಾಣ್ಯ ಸಂಗ್ರಹಿಸಿ ಕಾರು ಕೊಂಡಿದ್ದೇನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಅಸ್ಸಾಂನಲ್ಲಿ ಮುಂದುವರಿದ ಪ್ರವಾಹ, ಸಾವಿನ ಸಂಖ್ಯೆ 82ಕ್ಕೇರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
