ತಮಿಳುನಾಡು:ಮೆಕ್ಸಿಕೊ ದೇಶದ ಯುವತಿ ಹಾಗೂ ತಮಿಳುನಾಡಿನ ಯವಕನಿಗೆ ಪ್ರೇಮಾಂಕುರವಾಗಿ, ಇದೀಗ ಈ ಜೋಡಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. ಈ ಮೂಲಕ ದಾಂಪತ್ಯ ಜೀವನ ಆರಂಭಿಸಿದ್ದಾರೆ.
ತಮಿಳುನಾಡಿನ ಕುಪ್ಪುಚಿಪುದೂರ್ ಪೊಲ್ಲಾಚಿ ನಿವಾಸಿ ಸಾವುತ್ರಿ ರಾಜ್, ಮೆಕ್ಸಿಕೊ ದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಡೇನಿಯಾಲಾ ಎಂಬ ಯುವತಿಯ ಪರಿಚಯವಾಗಿದೆ. ದಿನಕಳೆದಂತೆ ಇಬ್ಬರ ಸ್ನೇಹ ಪ್ರೀತಿಯೆಡೆಗೆ ತಿರುಗಿದೆ. ಓದು ಮುಗಿಯುತ್ತಿದ್ದಂತೆ ಸಾವುತ್ರಿ ರಾಜ್ ಮೆಕ್ಸಿಕೊ ದೇಶದಲ್ಲೇ ಕೆಲಸ ಆರಂಭಿದ್ದ. ಬಳಿಕ ಈ ಜೋಡಿ ಮದುವೆ ಆಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಬಂಗಾರ ಕದ್ದು ಗುಜರಿಗೆ ಮಾರಿದ ಕಳ್ಳ; 7 ಲಕ್ಷ ರೂ. ಮೌಲ್ಯದ ಚಿನ್ನಕ್ಕೆ ಸಿಕ್ಕಿದ್ದು 30 ಸಾವಿರ ರೂ.!
ಭಾರತೀಯ ಸಾಂಪ್ರದಾಯಿಕ ಶೈಲಿಯ ವಿವಾಹಕ್ಕೆ ಮಾರುಹೋಗಿರುವ ವಧು ಡೇನಿಯಲಾ ಹಳ್ಳಿಯಲ್ಲೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಹೀಗಾಗಿ ಈ ಜೋಡಿ ತಮಿಳುನಾಡಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ಸಂಭ್ರಮದಲ್ಲಿ ಇಡೀ ಊರಿನ ಮಂದಿ ಪಾಲ್ಗೊಂಡು ಹಾರೈಸಿದ್ದಾರೆ.
ಅಲ್ಲದೆ ಡೇನಿಯಾಲಳ ತಂದೆ-ತಾಯಿ ಕೂಡ ತಮಿಳುನಾಡಿಗೆ ಬಂದು ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಇಲ್ಲಿನ ಸಂಸ್ಕೃತಿ ಕಂಡು ಮನಸೋತಿದ್ದಾರೆ. ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ಮಗಳ ಮದುವೆಯಲ್ಲಿ ಮಿಂಚಿದ್ದಾರೆ. ಜತೆಗೆ ನೃತ್ಯ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ:ಚಾಲಕರೇ ಎಚ್ಚರ; ನಿಮ್ಮ ಆಟೋದಲ್ಲಿರುವ ರಾಜಕೀಯ ಪಕ್ಷಗಳ ಪೋಸ್ಟರ್​ ತೆಗೆಯದಿದ್ದರೆ ಬೀಳಲಿದೆ ದಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
