ಚೆನ್ನೈ:ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಬೇಕೆಂಬ ಹಂಬಲದಲ್ಲಿ ತಮ್ಮನ್ನು ತಾವು ರೀಲ್ಸ್​ ಹಾಗೂ ಫೋಟೋಗಳಿಗೆ ಫೋಸ್​ ನೀಡುವುದನ್ನು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.
ಇದೀಗ ತಮಿಳುನಾಡಿನಲ್ಲಿ ವ್ಯಕ್ತಿ ಓರ್ವ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಗೀಳಿಗೆ ಬಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಓರ್ವ ಆನೆಯ ಬಳಿ ಹೋಗಿ ಅದನ್ನು ರೇಗಿಸುತ್ತಿರುವುದು ಕಂಡು ಬಂದಿದೆ ಮತ್ತು ಈ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ.
Tolerating such irritating morons is not easy. This is the precisely why they are revered as the gentle giants.#Elephants#Respect#WhatsappForwardpic.twitter.com/UwWUFVsGX3
IFS ಅಧಿಕಾರಿ ಸಾಕೇತ್​ ಬಡೋಲಾ ಈ ವಿಡಿಯೋವನ್ನು ಹಂಚಿಕೊಂಡಿದ್ದು ಘಟನೆಯೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೇನಕಲ್​ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:VIDEO| ಕಾರನ್ನು ನಿಲ್ಲಿಸಲು ಹೋಗಿ ಸರಣಿ ಅಪಘಾತ ಮಾಡಿದ ಮಹಿಳೆ!
ವಿಡಿಯೋದಲ್ಲಿ ಕಂಡು ಬರುವ ಹಾಗೆ ಕುಡಿದ ಮತ್ತಿನಲ್ಲಿ ವ್ಯಕ್ತಿ ಓರ್ವ ಆನೆಯ ಬಳಿ ಹೋಗಿ ಅದನ್ನು ಕಿಚಾಯಿಸಲು ಪ್ರಯತ್ನಿಸುತ್ತಾನೆ. ಆನೆ ಹಿಂಬದಿಗೆ ಹೋಗುತ್ತದೆ ಮತ್ತು ಸೊಂಡಿಲಿನಿಂದ ಮಣ್ಣನ್ನು ಎರಚುತ್ತದೆ.
ಇನ್ನು ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇಂತಹ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲ್ಲಿಗಟ್ಟಿದ್ದಾರೆ.
ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿ ಹಅಗು ಪೊಲೀಸ್​ ಅಧಿಕಾರಿಗಳಿಗೆ ನೆಟ್ಟಿಗರು ಧನ್ಯವಾದಗಳನ್ನು ತಿಳಿಸಿದ್ಧಾರೆ.
This person has been arrested and taken into custody.Well done DFO Dharmapuri. This should serve as a deterrent to otherspic.twitter.com/LhKOQnZls9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 2 =
Remember me
