ಚೆನ್ನೈ:ಗರ್ಭಿಣಿ ಅಂತಾನೂ ನೋಡದೆ ತಾಳಿ ಕಟ್ಟಿದ ಪತ್ನಿಗೆ ಜಾಡಿಸಿ ಒದ್ದ ಪರಿಣಾಮ ಚಲಿಸುತ್ತಿರುವ ಬಸ್​ನಿಂದ ಹೊರಗೆ ಬಿದ್ದು ಆಕೆ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿ ಕಳೆದ ಭಾನುವಾರ ನಡೆದಿದೆ.
ವಲರಮತಿ (19) ಮೃತ ದುರ್ದೈವಿ. 8 ತಿಂಗಳ ಹಿಂದಷ್ಟೇ ವೆಂಬರಪತಿ ಮೂಲದ 24 ವರ್ಷದ ಪಾಂಡಿಯನ್​ ಎಂಬಾತನನ್ನು ಮದುವೆಯಾಗಿದ್ದಳು. ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು. ಆದರೂ ಮಾಮೂಲಿ ಎಂಬಂತೆ ಗಂಡ-ಹೆಂಡತಿ ನಡುವೆ ಮನಸ್ತಾಪಗಳು ಸಾಮಾನ್ಯವಾಗಿತ್ತು. ಭಾನುವಾರ ಇಬ್ಬರು ದಿಂಡಿಗಲ್​ನಿಂದ ಪೊನ್ನಾಮರವತಿಗೆ ಸರ್ಕಾರಿ ಬಸ್​ನಲ್ಲಿ ತೆರಳುತ್ತಿದ್ದರು.
ಪಾನಮತ್ತನಾಗಿದ್ದ ಪಾಂಡಿಯನ್​, ಯಾವುದೋ ಕಾರಣಕ್ಕೆ 5 ತಿಂಗಳು ಗರ್ಭಿಣಿಯಾಗಿದ್ದ ವಲರಮತಿ ಜತೆ ಕ್ಯಾತೆ ತೆಗಿದಿದ್ದಾನೆ. ಇಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ಪಾಂಡಿಯನ್​, ಕನವೈಪಟ್ಟಿ ಬಳಿ ತನ್ನ ಪತ್ನಿಗೆ ಜಾಡಿಸಿ ಒದ್ದಿದ್ದಾನೆ. ಇದರ ಪರಿಣಾಮ ಬಸ್​ನಿಂದ ಕೆಳಗೆ ಬಿದ್ದ ವಲರಪತಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಲರಮತಿ ಮೃತದೇಹವನ್ನು ತಮ್ಮ ವಶಕ್ಕೆ ಪಡೆದುಕೊಂಡು, ದಿಂಡಿಗಲ್​ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಬಂಧಿತ ಪಾಂಡಿಯನ್​ ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಬೇಕಿದ್ರೆ ಬೆಟ್ ಕಟ್ತೀನಿ ಈ ಜಗತ್ತಿನಲ್ಲಿ ರಾಮುಗಿಂತ ಉತ್ತಮ ಸಲಹೆಗಾರ ಯಾರೂ ಇಲ್ಲ ಅಂದ್ರು ಆನಂದ್​ ಮಹೀಂದ್ರಾ!

ಸಿಎಂ ಹೇಮಂತ್ ಸೊರೇನ್​ಗೆ ಬಂಧನದ ಭೀತಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಇವರೇ?

‘ನನ್ನ ವ್ಯಕ್ತಿತ್ವ ಎಲ್ಲೇ ಹೋದರು ಬದಲಾಗೋದಿಲ್ಲ’! ಈ ಸ್ಪರ್ಧಿಯ ಮಾತನ್ನು ಒಪ್ಪಿದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 3 =
Remember me
