ಚೆನ್ನೈ:ಶ್ರೀಲಂಕಾ ನೌಕಾಪಡೆಯ ದಾಳಿಯನ್ನು ವಿರೋಧಿಸಿ ರಾಮೇಶ್ವರಂ ಮೀನುಗಾರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಶುಕ್ರವಾರ (ಆಗಸ್ಟ್​​​ 2) ಘೋಷಿಸಿದ್ದಾರೆ.
ಇದನ್ನು ಓದಿ:ಚುನಾವಣಾ ಬಾಂಡ್​ ಪ್ರಕರಣ; ಎಸ್​ಐಟಿ ತನಿಖೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​​
ಭಾರತೀಯ ಮೀನುಗಾರರ ದೋಣಿಗೆ ಶ್ರೀಲಂಕಾ ನೌಕಾಪಡೆಯ ಹಡಗು ಡಿಕ್ಕಿ ಹೊಡೆದು ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ಬಂಧಿಸಲಾಗಿದೆ. ಮೃತದೇಹವನ್ನು ಹಾಗೂ ಬಂಧಿಸಿರುವ ಮೀನುಗಾರರನ್ನು ಕರೆತರುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ. ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿದ ನಂತರವೇ ಕೆಲಸವನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ. ಮೀನುಗಾರರ ತುರ್ತು ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶ್ರೀಲಂಕಾ ನೌಕಾಪಡೆ ತಮಿಳುನಾಡು ಮೀನುಗಾರರು ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿ ಅವರನ್ನು ಬಂಧಿಸಿ, ಗುಂಡು ಹಾರಿಸಿ, ದೋಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ದೌರ್ಜನ್ಯ ನಡೆಸುತ್ತಿದೆ. ಈ ಆರೋಪಗಳ ನಡುವೆ ಶ್ರೀಲಂಕಾ ನೌಕಾಪಡೆಯ ಗಸ್ತು ದೋಣಿಯು ರಾಮೇಶ್ವರಂನ 4 ಮೀನುಗಾರರಿದ್ದ ದೋಣಿಗೆ ಡಿಕ್ಕಿ ಹೊಡೆದು ಮಲೈಚಾಮಿ ಎಂಬ ಮೀನುಗಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮತ್ತೊಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಇನ್ನೂ ಇಬ್ಬರನ್ನು ಶ್ರೀಲಂಕಾ ನೌಕಾಪಡೆಗೆ ಬಂಧಿಸಿರುವ ಘಟನೆ ನಡೆದಿದೆ.
ಘಟನೆಯನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಸಮುದ್ರದಲ್ಲಿ ನಾಪತ್ತೆಯಾಗಿರುವ ರಾಮಚಂದ್ರನ್​ಗಾಗಿ ಭಾರತೀಯ ನೌಕಪಡೆ ಹುಡುಕಾಟ ನಡೆಸುತ್ತಿದೆ. ಘಟನೆಯಲ್ಲಿ ಮೃತಪಟ್ಟ ಮಲೈಸ್ವಾಮಿ ಕುಟುಂಬಕ್ಕೆ ಸಿಎಂ ಎಂ.ಕೆ.ಸ್ಟಾಲಿನ್ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.
ನಾಲ್ವರು ಮೀನುಗಾರರು ನೆಡುಂತೀವು ದ್ವೀಪದ ಬಳಿ ದೋಣಿಯಲ್ಲಿ ಬುಧವಾರ (ಜುಲೈ 31)​​ ಸಮುದ್ರಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಶ್ರೀಲಂಕಾ ನೌಕಾಪಡೆಯ ಕಣ್ಗಾವಲು ನೌಕೆಯು ಅವರ ದೋಣಿಗೆ ಡಿಕ್ಕಿ ಹೊಡೆದು ಮುಳುಗಲು ಕಾರಣವಾಗಿದೆ. ದೋಣಿಯಲ್ಲಿದ್ದ ಮಲೈಸಾಮಿ ಮೃತಪಟ್ಟಿದ್ದು, ಮತ್ತೊಬ್ಬ ಮೀನುಗಾರ ವಿ.ರಾಮಚಂದ್ರನ್ (54) ನಾಪತ್ತೆಯಾಗಿದ್ದಾರೆ. ಉಳಿದ ಇಬ್ಬರು ಮೀನುಗಾರರಾದ ಮೂಕಯ್ಯ (54), ಮತ್ತು ಮುತ್ತು ಮುನಿಯಾಂಡಿ (57) ಅವರನ್ನು ಶ್ರೀಲಂಕಾ ಪಡೆ ಬಂಧಿಸಿದೆ. (ಏಜೆನ್ಸೀಸ್​​)
ನೀಟ್​​ ವಿವಾದ; ಸುಪ್ರೀಂ​ ತೀರ್ಪು ಕೇಂದ್ರದ ನಿಲುವನ್ನು ಸಮರ್ಥಿಸುತ್ತದೆ ಎಂದಿದ್ದೇಕೆ ಧರ್ಮೇಂದ್ರ ಪ್ರಧಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eight =
Remember me
