ಚೆನ್ನೈ:ತಮಿಳುನಾಡು ಮೂಲದ ಇಂಜಿನಿಯರ್ ವಿದ್ಯಾರ್ಥಿಗಳು ಕಡಿಮೆ ವೆಚ್ಚದ ಎಲೆಕ್ಟ್ರಿಕ್​ ಬೈಕ್ (ವಿದ್ಯುತ್​ ಚಾಲಿತ) ತಯಾರು ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೊಯಮತ್ತೂರಿನ ಖಾಸಗಿ ಇಂಜಿನಿಯರ್​ ಕಾಲೇಜಿನ ವಿದ್ಯಾರ್ಥಿಯಾಗಳಾಗಿದ್ದು, ತಾವು ತಯಾರಿಸಿದ ಎಲೆಕ್ಟ್ರಿಕ್​ ಬೈಕ್​ 3D ಪ್ರಿಂಟೆಡ್​ ಭಾಗಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಗ್ರಾಮದ ಮಧ್ಯೆದಲ್ಲಿಯೇ ಯುವಕನ ಬರ್ಬರ ಹತ್ಯೆ: ಬೆಳ್ಳಂಬೆಳಗ್ಗೆಯೇ ಬೆಚ್ಚಿಬಿದ್ದ ಗ್ರಾಮಸ್ಥರು
ಈ ಬಗ್ಗೆ ಮಾತನಾಡಿರುವ ಎಸ್​. ಕಿರಣ್​ ಲಾಲ್​ ಮತ್ತು ವಿ ಭಾರ್ತಿಕನ್​​, ಇದೊಂದು ಎಲೆಕ್ಟ್ರಿಕ್​ ಮೋಟರ್​ ಆಗಿದೆ. ಇದಕ್ಕೆ ಲಿಥಿಯಮ್​-ಐಯಾನ್​ ಬ್ಯಾಟರಿ ಅಳವಡಿಸಲಾಗಿದೆ. ಗಂಟೆಗೆ 27 ಕಿ.ಮೀ ವೇಗದಲ್ಲಿ 25 ಕಿ.ಮೀ ಗೂ ಅಧಿಕ ದೂರವನ್ನ ಕ್ರಮಿಸಲಿದೆ. ಒಮ್ಮೆ ಚಾರ್ಜ್​ ಮಾಡಲು 2.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, 0.6 ಯುನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕಡಿಮೆ ಪ್ರಯಾಣದ ವಾಹನವನ್ನು ಇಂಟ್ರಾಕ್ಯಾಂಪಸ್​ ಮೊಬಿಲಿಟಿಯಾಗಿ ಬಳಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರಿ ಕಚೇರಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗಲು ವಾಹನ ನೆರವಾಗಲಿದೆ. ದೂರ ಪ್ರಯಾಣ ಹೊರತುಪಡಿಸಿ ಸ್ಥಳೀಯವಾಗಿಯೂ ಉಪಯೋಗಿಸಬಹುದಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
Tamil Nadu: Students of a private engineering college in Coimbatore claim to have made a low-cost electric bike. Brathikan,a student says,"This vehicle has an electric motor. It takes 2.5 hours to charge the vehicle & it can run up to 27kms. It consumes 0.6 units of electricity."pic.twitter.com/EDtmvPcUSH
— ANI (@ANI)September 20, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nineteen =
Remember me
