ಕೊಯಮತ್ತೂರು:ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯ ಶಿಕ್ಷಕ ಮಾತ್ರವಲ್ಲದೆ, ಆತನ ಪತ್ನಿಯನ್ನು ಸಹ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಆರೋಪಿ ಶಿಕ್ಷಕನ್ನು ಮಿಥುನ್​ ಚಕ್ರವರ್ತಿ (35) ಎಂದು ಗುರುತಿಸಲಾಗಿದೆ. ಆತನ ಪತ್ನಿ ಅರ್ಚನಾಳನ್ನು ಸಹ (32) ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರಿನ ಆರ್​ಎಸ್​ ಪುರಂನಲ್ಲಿ ಖಾಸಗಿ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಆರೋಪಿ ಮಿಥುನ್​ ಚಕ್ರವರ್ತಿಯ ಲೈಂಗಿಕ ದೌರ್ಜನ್ಯ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ 2021ರ ನವೆಂಬರ್​ 12ರಂದು ನಡೆದಿತ್ತು. ಈ ಪ್ರಕರಣದಲ್ಲಿ ಮೊದಲು ಮಿಥುನ್​ ಬಂಧನವಾಗಿತ್ತು. ಇದೀಗ ಆಕೆಯ ಪತ್ನಿಯ ಬಂಧನವೂ ಆಗಿದೆ.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಹುಲಿ ಪತ್ತೆಹಚ್ಚಬಲ್ಲರು!
ಈ ಪ್ರಕರಣದಲ್ಲಿ ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕೊಯಮತ್ತೂರಿನ ಪೊಕ್ಸೊ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಮಿಥುನ್​ ಪತ್ನಿ ಅರ್ಚನಾಳನ್ನು ನಿನ್ನೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಅರ್ಚನಾ ಸಹ ತನ್ನ ಗಂಡ ಮಿಥುನ್​ ಶಿಕ್ಷಕನಾಗಿದ್ದ ಕಾಲೇಜಿನಲ್ಲೇ ಶಿಕ್ಷಕಿಯಾಗಿದ್ದಳು. ಮಿಥುನ್​, ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಅರ್ಚನಾ ಬಳಿ ದೂರು ನೀಡಿದ್ದಳು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದೇ ಅರ್ಚನಾ ನಿರ್ಲಕ್ಷಿಸಿದ್ದಳು. ಇದರ ಪರಿಣಾಮ ವಿದ್ಯಾರ್ಥಿನಿ ಕಿರುಕುಳ ತಾಳಲಾರದೇ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಂಡಳು.(ಏಜೆನ್ಸೀಸ್​)
ಕಂಟೇನರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು

ಕಾಂಗ್ರೆಸ್ ಜವಾಬ್ದಾರಿ ಇಲ್ಲದ, ಸಹಾಯಕವಲ್ಲದ ಸರ್ಕಾರವಾಗಿದೆ: ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
