ಚೆನ್ನೈ:ವಯಸ್ಸಾಗುತ್ತಿದ್ದರೂ ಇನ್ನು ಮದುವೆಯಾಗಿಲ್ಲ, ಹೆಣ್ಣು ಸಿಗುತ್ತಿಲ್ಲ ಅಂತಾ ಕೆಲ ಯುವಕರು ಚಿಂತಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಸಾಮಿ ಕೇವಲ 26ನೇ ವಯಸ್ಸಿನಲ್ಲಿ 21 ಮದುವೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಇಂದಿನ ದಿನಗಳಲ್ಲಿ ಯುವಕರಿಗೆ ಹುಡುಗಿಯರು ಸಿಗುವುದೇ ಕಷ್ಟಕರವಾಗಿದೆ. ಸಿಕ್ಕರೂ ಮದುವೆ ಆಗೋದು ಗ್ಯಾರಂಟಿ ಇರುವುದಿಲ್ಲ. ಎಷ್ಟೋ ಯುವಕರು 35ರಿಂದ 40ರ ಹರೆಯಕ್ಕೆ ಬಂದರು ಹೆಣ್ಣು ಸಿಗುವುದಿಲ್ಲ. ಆದರೆ, ಈ ಅಸಾಮಿ 26ನೇ ವಯಸ್ಸಿನಲ್ಲಿ 21 ಯುವತಿಯರನ್ನು ಹೇಗೆ ಮದುವೆಯಾದ ಎಂಬುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
21 ಮದುವೆಯಾದ ಭೂಪನ ಹೆಸರು ಕಾರ್ತಿಕ್​ ರಾಜ. ಈತ ತಮಿಳುನಾಡಿನ ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದವನು. ಈ ವರ್ಷದ ಮಾರ್ಚ್​ ತಿಂಗಳಲ್ಲಿ ಈತ ರಾಣಿ ಎಂಬಾಕೆಯನ್ನು ಮದುವೆಯಾಗಿದ್ದ. ಈ ವೇಳೆ ವಧುವಿನ ಕಡೆಯವರು ಕಾರ್ತಿಕ್​ಗೆ ವರದಕ್ಷಿಣೆಯಾಗಿ ಐದು ಎಕರೆ ಭೂಮಿ, ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ರೂ. ನಗದು ಹಣವನ್ನು ನೀಡಿದ್ದರು. ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಕಾರ್ತಿಕ್​, ವರದಕ್ಷಿಣೆ ಹಣದೊಂದಿಗೆ ಪರಾರಿಯಾಗಿದ್ದ. ಬಳಿಕ ಕಾರ್ತಿಕ್​ನನ್ನು ಹುಡುಕಾಡಿದ ರಾಣಿ ಕುಟುಂಬ, ಆತನ ಸುಳಿವು ಸಿಗದಿದ್ದಾಗ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತೀವ್ರ ಶೋಧ ನಡೆಸಿ ಕಾರ್ತಿಕ್​ನನ್ನು ಪತ್ತೆ ಹಚ್ಚಿ ಬಂಧಿಸಿದರು. ಬಳಿಕ ನಡೆದ ವಿಚಾರಣೆಯಲ್ಲಿ ಅನೇಕ ಶಾಕಿಂಗ್​ ಸಂಗತಿಗಳನ್ನು ಆರೋಪಿ ಕಾರ್ತಿಕ್​ ಬಾಯ್ಬಿಟ್ಟಿದ್ದಾನೆ. ಕಾರ್ತಿಕ್​ ಈವರೆಗೆ ರಾಣಿ ಸೇರಿದಂತೆ ಒಟ್ಟು 21 ಯುವತಿಯರನ್ನು ಮದುವೆಯಾಗಿದ್ದಾನೆಂದು ತಿಳಿದುಬಂದಿದೆ.
ಆರೋಪಿ ಕಾರ್ತಿಕ್ ರಾಜ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದು, ಹಣ ಸಂಪಾದನೆಗಾಗಿ ಈ ಮಾರ್ಗವನ್ನು ಆಯ್ದುಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎಂದು ಹೇಳಿದರೆ ಜಾಸ್ತಿ ವರದಕ್ಷಿಣೆ ಕೊಡುತ್ತಾರೆ ಅಂತಾ ಸುಳ್ಳು ಹೇಳುತ್ತಿದ್ದ. ತನ್ನ ಯೋಜನೆಯಂತೆ ಬೇರೆ ಬೇರೆ ಹೆಸರಿನ ಯುವತಿಯರನ್ನು ಮದುವೆಯಾಗುತ್ತಿದ್ದ. ಬಳಿಕ ಯಾವೊಬ್ಬ ಪತ್ನಿಯ ಜೊತೆಯು ಆತ ಕನಿಷ್ಠ ಪಕ್ಷ 5 ತಿಂಗಳು ಸಹ ಕಳೆಯುತ್ತಿರಲಿಲ್ಲ. ಮದುವೆಯ ಬಳಿಕ ಎಲ್ಲ ಹಣವನ್ನು ತೆಗೆದುಕೊಂಡು ಆರೋಪಿ ಪರಾರಿಯಾಗುತ್ತಿದ್ದ. ಎಲ್ಲವೂ ಮುಗಿದ ಮೇಲೆ ಬೇರೆ ಊರಿಗೆ ಹೋಗಿ ಬೇರೆ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದ. ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮದುವೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇದೀಗ ಕಾರ್ತಿಕ್ ರಾಜನ ಬಣ್ಣ ಬಯಲಾಗುತ್ತಿದ್ದಂತೆ ಆತ ಈ ಹಿಂದೆ ಮದುವೆಯಾಗಿದ್ದ 20 ಪತ್ನಿಯರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ತಿಕ್ ರಾಜಾ ಬಳಿ ಆಡಿ ಕಾರು ಮಾತ್ರ ಇದೆ, ಚಿನ್ನ ಅಥವಾ ನಗದು ಏನೂ ಇಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ.(ಏಜೆನ್ಸೀಸ್​)
ಭಾರತೀಯರ ಮುಂದೆ ತಪ್ಪೊಪ್ಪಿಕೊಂಡ ಸನ್ನಿ ಲಿಯೋನ್! ಕಹಿ ಘಟನೆ ಬಿಚ್ಚಿಟ್ಟ ಮಾಜಿ ನೀಲಿ ತಾರೆ​

ಬಿಚ್ಚಮ್ಮಳ ಮೇಕಪ್​ ಇಲ್ಲದ ಅವತಾರ ಕಂಡು ಬೆರಗಾದ ನೆಟ್ಟಿಗರು! ಪೂರ್ತಿ ಬಟ್ಟೆಯಲ್ಲಿ ಗುರುತಿಸೋದು ಕಷ್ಟವೆಂದ ನೆಟ್ಟಿಗ

ಹಕ್ಕು ಮತ್ತು ಕರ್ತವ್ಯ: ಸಾರ್ವಜನಿಕ ಆಸ್ತಿ ಹಾನಿ ಪ್ರತಿಭಟನಾಕಾರರಿಗೆ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
