ಚೆನ್ನೈ:ರಸ್ತೆ ಅಪಘಾತದಲ್ಲಿ ಸಾವಿಗೀಡಾದ 12 ಅಡಿ ಉದ್ದ ಹೆಬ್ಬಾವಿಗೆ ಅಂತಿಮ ಸಂಸ್ಕಾರ ನೆರವೇರಿಸಿದ ವಿರಾಳಾತಿವಿರಳ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ರಸ್ತೆ ದಾಟುವಾಗ ಹೆಬ್ಬಾವಿನ ಮೇಲೆ ಟ್ರಕ್​ವೊಂದು ಹರಿದ ಪರಿಣಾಮ ಹಾವು ಮೃತಪಟ್ಟಿದೆ. ಈ ಘಟನೆ ಕೃಷ್ಣಗಿರಿ ಜಿಲ್ಲೆಯ ಬಾರ್ಗೂರ್​ ಬಳಿಯಿರುವ ನಾದರ್​ ಕೊಟ್ಟಾಯ್​ನ ರಸ್ತೆಯಲ್ಲಿ ನಡೆದಿದೆ. ಹಾವು ಸಾವಿಗೀಡಾಗಿದ್ದನ್ನು ರಸ್ತೆಯಲ್ಲಿ ನಿಂತು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕೆಲವರು ಸುಮ್ಮನೆ ನೋಡುತ್ತಾ ತೆರಳಿದರು. ಆದರೆ, ಪಕ್ಕದ ಗ್ರಾಮದವರು ಹಾವು ಮೃತಪಟ್ಟಿರುವುದನ್ನು ಗಮನಿಸಿ ಅದಕ್ಕೆ ಅಂತಿಮ ಸಂಸ್ಕಾರ ನಡೆಸಿಕೊಟ್ಟರು.
ಇದನ್ನೂ ಓದಿ:ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಅಂಕಣ…
ಸತ್ತ ಹಾವಿಗೆ ಬಿಳಿಯ ಬಟ್ಟೆ ಹೊದಿಸಿ, ಹೂವಿನ ಹಾರ ಹಾಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಮೃತ ವ್ಯಕ್ತಿಗಳಿಗೆ ಮಾಡುವಂತೆಯೇ ಎಲ್ಲ ವಿಧಿವಿಧಾನಗಳನ್ನು ಮಾಡಿ ಹಾವಿನ ಅಂತ್ಯಸಂಸ್ಕಾರ ನಡೆಸಿದರು. ಇದಕ್ಕೂ ಮುನ್ನ ಹಾವಿನ ಮೇಲೆ ರೋಸ್​ ವಾಟರ್​ ಸಹ ಸಿಂಪಡಿಸಲಾಯಿತು.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ವೈರಲ್​ ಆಗಿದೆ. ಇನ್ನು ಹೆಬ್ಬಾವಿಗೆ ಅಂತ್ಯಸಂಸ್ಕಾರ ನಡೆಸುವಂತಹ ಘಟನೆ ತುಂಬಾ ವಿರಳ. ಇದೇ ಮೊದಲ ಬಾರಿಗೆ ಗ್ರಾಮಸ್ಥರು ಇದನ್ನು ನೆರವೇರಿಸಿದ್ದು, ಮೂಕ ಪ್ರಾಣಿಗಳು ಸಹ ಒಂದು ಜೀವಿಯಾಗಿದ್ದು ಅದಕ್ಕೆ ಗೌರವ ಸಲ್ಲಿಸಬೇಕಾದ್ದು ಮಾನವೀಯತೆ ಎನ್ನುತ್ತಾರೆ ಕೃಷ್ಣನ್​ ಹೆಸರಿನ ಗ್ರಾಮಸ್ಥ. ಸದ್ಯ ಗ್ರಾಮಸ್ಥರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಒಂದೂವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಇನ್ನೂ ನಿಗದಿಯಾಗದ ಪ್ರವೇಶ ಪರೀಕ್ಷೆ
https://www.vijayavani.net/lady-si-romance-with-married-constable-in-nellore/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
