ಚೆನ್ನೈ:ದೇಶಾದ್ಯಂತ ಕೃಷಿ ಕಾಯ್ದೆಗೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಮಹತ್ತರ ಪ್ರಕಟಣೆಯೊಂದನ್ನು ಹೊರಡಿಸಿದೆ. ರಾಜ್ಯದ ರೈತರ ಸಾಲ ಮನ್ನಾ ಮಾಡಿ ಎಐಎಡಿಎಂಕೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ 16.43 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ 12,110 ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಶುಕ್ರವಾರಂದು ಈ ಘೋಷಣೆಯನ್ನು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಮಾಡಿದ್ದಾರೆ. ಈ ಯೋಜನೆ ಕೂಡಲೇ ಜಾರಿಗೆ ಬರಲಿದ್ದು, ಅಗತ್ಯವಾದ ಆರ್ಥಿಕ ಹಂಚಿಕೆಯನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.
ಎಐಎಡಿಎಂಕೆ ಭರವಸೆಗಳನ್ನು ಈಡೇರಿಸುವ ಏಕೈಕ ಪಕ್ಷವಾಗಿದೆ ಮತ್ತು ಹೊಸ ಕಲ್ಯಾಣ ಕ್ರಮಗಳನ್ನು ಸಹ ಹೊಂದಿದೆ. ಡಿಎಂಕೆ ಪಕ್ಷವು ಎರಡು ಎಕರೆ ಜಮೀನಿಗೆ ಭರವಸೆ ನೀಡಿತ್ತಾದರೂ ಅದನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ಅವರು ಪ್ರತಿಪಕ್ಷದ ಕಾಲೆಳೆದರು. (ಏಜೆನ್ಸೀಸ್)
38ನೇ ವಯಸ್ಸಿನಲ್ಲಿ ಕಳೆದುಕೊಂಡ ಪರ್ಸ್​ 91ನೇ ವಯಸ್ಸಿಗೆ ಮರಳಿ ಸಿಕ್ಕಿತು!

ಅರ್ಧ ಕೋಟಿ ಭಾರತೀಯರಿಗೆ ತಲುಪಿದ ಕರೊನಾ ಲಸಿಕೆ ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಫಲಾನುಭವಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
