ಚೆನ್ನೈ:ಸಂಬಂಧ ಮುರಿದು ಬಿದ್ದರೆ ಅದರಿಂದ ಚೇತರಿಕೆಗೆ ಕೆಲವು ದಿನಗಳು ಬೇಕಾಗಬಹುದು. ಆದರೆ ಅದೇ ಬಿರುಕು ನಿಮ್ಮನ್ನು ಬಲಿಷ್ಠವಾಗಿಸುತ್ತದೆ. ಇಲ್ಲೊಬ್ಬಳು ಯುವತಿ ವಂಚಿಸಿದ ಪ್ರಿಯಕರನ ಮೇಲೆ ಕುದಿಯುವ ಎಣ್ಣೆ ಸುರಿದ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.
ಕಾರ್ತಿ (27) ಯುವತಿಯಿಂದ ಹಲ್ಲೆಗೊಳಗಾದ ಯುವಕ , ಮೀನಾ ದೇವಿ ಬಂಧಿತೆ. ಈತ ಭವಾನಿಯ ವರ್ಣಪುರಂ ನಿವಾಸಿಯಾಗಿದ್ದು, ಪೆರುಂದುರೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಸಂಬಂಧಿ ಮೀನಾ ದೇವಿಯೊಂದಿಗೆ ಸಂಬಂಧ ಹೊಂದಿದ್ದ. ಇಬ್ಬರು ಮದುವೆಯಾಗುವ ನಿರ್ಧಾರವನ್ನು ಮಾಡಿದ್ದರು.
ಇದನ್ನೂ ಓದಿ:ಉದ್ಘಾಟನೆ ದಿನವೇ ಮೈಸೂರು – ಬೆಂಗಳೂರು ನೂತನ ಎಕ್ಸಪ್ರೆಸ್​​ ಹೈವೇನಲ್ಲಿ ಭೀಕರ ಅಪಘಾತ
ಆದರೆ ಕಾರ್ತಿ ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಮೀನಾದೇವಿ ತಿಳಿದಿದೆ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಮೀನಾ ದೇವಿ ಆತನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ.
ಇದರಿಂದಾಗಿ ಕೈ ಮತ್ತು ಮುಖ ಉರಿಯಲಾರಂಭಿಸಿದ್ದರಿಂದ ಕಾರ್ತಿ ನೆಲಕ್ಕೆ ಬಿದ್ದಿದ್ದಾನೆ. ಸಹಾಯಕ್ಕಾಗಿ ಆತನ ಕೂಗು ಕೇಳಿದ ನೆರೆಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾಳೆ.
ಇದನ್ನೂ ಓದಿ:VIDEO| ಪಾನಿಪುರಿ ಮಾರಾಟ ಮಾಡುವ BTech ಪದವೀಧರೆ; ಇಲ್ಲಿದೆ ನೋಡಿ ಸ್ಫೂರ್ತಿದಾಯಕ ಕಥೆ
ಈ ಘಟನೆಗೆ ಸಂಬಂಧಿಸಿ ಮೀನಾದೇವಿಯನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ: ಎಚ್​ಡಿಕೆ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
