ತಮಿಳುನಾಡು:ತಮಿಳುನಾಡು ಸರ್ಕಾರ ಜಾಹೀರಾತು ಪ್ರಕಟಿಸುವ ವೇಳೆ ಚೀನಾ ದೇಶದ ವ್ಯಾಮೋಹ ಮಿತಿ ಮೀರಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರದ ಹಿಂಭಾಗದಲ್ಲಿ ಉಪಗ್ರಹ ನೌಕೆ ಫೋಟೋವನ್ನು ಬಳಸಲಾಗಿದೆ. ದೊಡ್ಡದಾಗಿ ಚಿತ್ರಿಸಿರುವ ಉಪಗ್ರಹದ ಫೋಟೋ ಮೇಲೆ ಚೀನಾ ಧ್ವಜ ಬಳಸಲಾಗಿದೆ. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ:IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?
ಪ್ರಧಾನಿ ಮೋದಿ, ಸಿಎಂ ಎಂಕೆ ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಹಾಗೂ ಕನ್ನಿಮೋಳಿ ಅವರ ಭಾವಚಿತ್ರ ಹಾಕಲಾಗಿದೆ. ಜೊತೆಗೆ ಇಸ್ರೋದ ರಾಕೆಟ್ ಇದ್ದು, ಅದರ ಮೇಲೆ ಚೀನಾ ಧ್ವಜವನ್ನು ಚಿತ್ರಿಸಲಾಗಿದೆ. ಇದೇ ಜಾಹೀರಾತು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಡಿಎಂಕೆ ಪಕ್ಷ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಸಚಿವೆ ತಿರು ಅನಿತಾ ರಾಧಾಕೃಷ್ಣನ್ ಅವರು ಪ್ರಮುಖ ತಮಿಳು ದಿನಪತ್ರಿಕೆಗಳಿಗೆ ನೀಡಿದ ಈ ಜಾಹೀರಾತು ಚೀನಾಕ್ಕೆ ಡಿಎಂಕೆಯ ಬದ್ಧತೆ ಮತ್ತು ನಮ್ಮ ದೇಶದ ಸಾರ್ವಭೌಮತ್ವದ ಸಂಪೂರ್ಣ ನಿರ್ಲಕ್ಷ್ಯದ ದ್ಯೋತಕವಾಗಿದೆ ಎಂದು ಕಿಡಿಕಾಡಿದ್ದಾರೆ.
This advertisement by DMK Minister Thiru Anita Radhakrishnan to leading Tamil dailies today is a manifestation of DMK’s commitment to China & their total disregard for our country’s sovereignty.
DMK, a party flighing high on corruption, has been desperate to paste stickers ever…pic.twitter.com/g6CeTzd9TZ
— K.Annamalai (@annamalai_k)February 28, 2024

ಕುಲಶೇಖರಪಟ್ಟಣಂನಲ್ಲಿ ಇಸ್ರೋದ ಎರಡನೇ ಉಡಾವಣಾ ಕೇಂದ್ರದ ಘೋಷಣೆ ಬಿಡುಗಡೆಯಾದಾಗಿನಿಂದ ಡಿಎಂಕೆ, ಭ್ರಷ್ಟಾಚಾರದ ಮೇಲಿರುವ ಪಕ್ಷವಾಗಿದೆ, ಸ್ಟಿಕ್ಕರ್‌ಗಳನ್ನು ಅಂಟಿಸಲು ಹತಾಶವಾಗಿದೆ. ಹತಾಶೆಯ ಪ್ರಮಾಣವು ಅವರ ಹಿಂದಿನ ದುಷ್ಕೃತ್ಯಗಳನ್ನು ಸಮಾಧಿ ಮಾಡುವ ಅವರ ಪ್ರಯತ್ನವನ್ನು ಮಾತ್ರ ಸಾಬೀತುಪಡಿಸುತ್ತದೆ. ಆದರೆ ಡಿಎಂಕೆ ಏಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಇಂದು ಆಂಧ್ರಪ್ರದೇಶದಲ್ಲಿದೆ ಮತ್ತು ತಮಿಳುನಾಡಿನಲ್ಲಿ ಇಲ್ಲ ಎಂಬುದನ್ನು ನಾವು ಅವರಿಗೆ ನೆನಪಿಸಬೇಕು ಅಂತ ಟಾಂಗ್ ಕೊಟ್ಟಿದ್ದಾರೆ.
ಇಸ್ರೋದ 1 ನೇ ಉಡಾವಣಾ ಕೇಂದ್ರವನ್ನು ಪರಿಕಲ್ಪನೆ ಮಾಡಿದಾಗ, ತಮಿಳುನಾಡು ಇಸ್ರೋದ ಮೊದಲ ಆಯ್ಕೆಯಾಗಿತ್ತು. ತೀವ್ರ ಭುಜದ ನೋವಿನಿಂದ ಸಭೆಗೆ ಹಾಜರಾಗಲು ಸಾಧ್ಯವಾಗದ ಟಿಎನ್ ಸಿಎಂ ತಿರು ಅಣ್ಣಾದೊರೈ ಅವರು ತಮ್ಮ ಸಚಿವರಲ್ಲಿ ಒಬ್ಬರಾದ ಮತ್ತಿಯಳಗನ್ ಅವರನ್ನು ಸಭೆಗೆ ನಿಯೋಜಿಸಿದರು.
ಇಸ್ರೋ ಅಧಿಕಾರಿಗಳು ಬಹಳ ಸಮಯ ಕಾಯುತ್ತಿದ್ದರು. ಕೊನೆಗೆ ಮತ್ತಿಯಳಗನ್ ಅವರು ಸಭೆಗೆ ಬಂದರು, ಆದರೆ ಅವರು ಕುಡಿದು ಬಂದಿದ್ದರು. ಇದೇ ಪರಿಸ್ಥಿತಿಯಲ್ಲೇ ಅವರು ಸಭೆ ಉದ್ದೇಶಿಸಿ ಮಾತನಾಡಿ, ಎಲ್ಲರಿಗೂ ಮುಜುಗರ ಉಂಟು ಮಾಡಿದ್ದರು. ಇದು 60 ವರ್ಷಗಳ ಹಿಂದೆ ನಮ್ಮ ದೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ಡಿಎಂಕೆ ಸ್ವಾಗತಿಸಿದ ರೀತಿಯಾಗಿತ್ತು. ಈಗಲೂ ಅಷ್ಟೇ ಡಿಎಂಕೆ ಬದಲಾಗಿಲ್ಲ, ಹೊರತು ಮತ್ತಷ್ಟು ಕೆಟ್ಟದಾಗಿದೆ ಅಂತ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − 6 =
Remember me
