ನವದೆಹಲಿ:ನಟನಾಗಿ ಎಷ್ಟೇ ಬ್ಯುಸಿ ಇದ್ದರೂ ತಲೈವಾ ರಜನಿಕಾಂತ್ ಅವಕಾಶ ಸಿಕ್ಕಾಗಲೆಲ್ಲ ಹಿಮಾಲಯಕ್ಕೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಮನಶ್ಶಾಂತಿಗಾಗಿ ಅಲ್ಲಿ ಕೆಲವು ದಿನಗಳನ್ನು ಧ್ಯಾನದಲ್ಲಿ ಕಳೆಯುತ್ತಾರೆ.
ಇದನ್ನೂ ಓದಿ:ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನ – ಮಳೆಯಿಂದಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​
ರಜನಿಕಾಂತ್​ ಮೇ 29ರಂದು ಉತ್ತರಾಖಂಡಕ್ಕೆ ತೆರಳಿ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ಅವರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ರಜನಿಕಾಂತ್ ಕೇದಾರನಾಥದಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದೇ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ರಜನಿಕಾಂತ್ ಅವರನ್ನು ಸನ್ಮಾನಿಸಿದರು. ಪೊಲೀಸರು ಎಕ್ಸ್​ ನ ತಮ್ಮ ಅಧಿಕೃತ ಹ್ಯಾಂಡಲ್ ನಲ್ಲಿ ರಜನಿಕಾಂತ್​ ಅವರ ಜೊತೆಗೆ ಇರುವ ಫೋಟೋಗಳನ್ನು ಶೇರ್​ ಮಾಡಿದ್ದು, ಪೋಟೋಗಳನ್ನು ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.
ಶ್ರೀ ಬದರಿನಾಥ ದರ್ಶನಕ್ಕಾಗಿ ದೇವಭೂಮಿಗೆ ಆಗಮಿಸಿದ ರಜನಿಕಾಂತ್ ಜಿ ಅವರಿಗೆ ಸ್ವಾಗತ ಮತ್ತು ಅಭಿನಂದನೆಗಳು ಎಂದು ಪೊಲೀಸರು ಪೋಸ್ಟ್​ನಲ್ಲಿ ಹಾಕಿಕೊಂಡಿದ್ದರೆ, ಶ್ರೀ ಬದರಿನಾಥ ಧಾಮದ ದರ್ಶನದಿಂದ ಪುಳಕಿತನಾಗಿದ್ದೇನೆ ಎಂದು ರಜನಿಕಾಮತ್​ ತಿಳಿಸಿದರು. ಅವರು ಲೋಕಕಲ್ಯಾಣ ಮತ್ತು ದೇಶದ ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ.
ಚುನಾವಣೋತ್ತರ ಸಮೀಕ್ಷೆ ಪ್ರಕಾರ ಅಣ್ಣಾಮಲೈಗೆ ಸೋಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
