ಚೆನ್ನೈ:ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಪ್ರಯುಕ್ತ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​ ರಾಜ್ಯದ ಜನರಿಗೆ ಭರ್ಜರಿ ಘೋಷಣೆಗಳನ್ನು ಮಾಡಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿದಾರರು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ಈ ಸೌಲಭ್ಯ ಸಿಗಲಿದೆ ಎಂದು ಸರ್ಕಾರದ ವತಿಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಇದನ್ನೂ ಓದಿ:ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಚುಂಬಿಸಿದ ಆಮೀರ್​ ಖಾನ್; ವಿಡಿಯೋ ವೈರಲ್
“ಕಲೈಘರ್​ ಮಗಳಿರ್​ ಉರಿಮೈ ತಿಟ್ಟಂ” ಯೋಜನೆಯಡಿ ಮಾಸಿಕವಾಗಿ ನೀಡುವ ಸಾವಿರ ರೂಪಾಯಿ ಹಣವನ್ನು ಐದು ದಿನಗಳ ಮುಂಚೆಯೇ ಅಂದರೆ ಜನವರಿ 10 ರಂದು ಪಲಾನುಭವಿಗಳ ಖಾತೆಗೆ ಸರ್ಕಾರ ನೇರವಾಗಿ ಪಾವತಿ ಮಾಡಲಿದೆ. ಇದರಿಂದ 1.15 ಕೋಟಿ ಮಹಿಳೆಯರಿಗೆ ಅನುಕೂಲವಾಗಲಿದೆ. ಪಡಿತರ ಕಿಟ್​ನಲ್ಲಿ ಕಬ್ಬು, ತಲಾ ಒಂದು ಕೆಜಿ ಅಕ್ಕಿ, ಸಕ್ಕರೆ, ಒಂದು ಗಿಫ್ಟ್ ಹ್ಯಾಂಪರ್​, ಒಂದು ಧೋತಿ ಮತ್ತು ಸೀರೆಯನ್ನು ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರ್ಷದ ಮೊದಲ ದೊಡ್ಡ ಹಬ್ಬವಾದ ಪೊಂಗಲ್ ಅಥವಾ ಥೈ ಪೊಂಗಲ್ ತಮಿಳುನಾಡು ರಾಜ್ಯದಲ್ಲಿ ಪ್ರತಿವರ್ಷ ಜನವರಿ ಮಧ್ಯದಲ್ಲಿ ಆಚರಿಸಲಾಗುವ ನಾಲ್ಕು ದಿನಗಳ ಸುಗ್ಗಿಯ ಹಬ್ಬವಾಗಿದೆ ಮತ್ತು ಈ ಹಬ್ಬವು ಮಕರ ಸಂಕ್ರಾಂತಿಯೊಂದಿಗೆ ಸೇರಿಕೊಳ್ಳುತ್ತದೆ. ರೈತರು ಮತ್ತು ಇತರ ಜನರು ಒಟ್ಟಾಗಿ ಸಮೃದ್ಧವಾದ ಸುಗ್ಗಿಯನ್ನು ಆಚರಿಸುತ್ತಾರೆ ಮತ್ತು ಪೊಂಗಲ್ ಹಬ್ಬದ ಈ ನಾಲ್ಕು ದಿನಗಳ ವಿವಿಧ ಆಚರಣೆಗಳನ್ನು ಅನುಸರಿಸುವ ಮೂಲಕ ದೇವರಿಗೆ ಪ್ರಾರ್ಥನೆಯನ್ನು ಅರ್ಪಿಸುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + six =
Remember me
