ಚೆನ್ನೈ:ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಇದೀಗ ಮಾಡಿರುವ ರಿಟ್ವೀಟ್​ ಒಂದು ವೈದ್ಯಕೀಯ ಶಿಕ್ಷಣ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಆರ್ಥೋಪೆಡಿಶಿಯನ್ ಡಾ. ಜಾಸನ್​ ಫಿಲಿಪ್​ ಎಂಬುವರು ಮಾಡಿರುವ ಟ್ವೀಟ್​ ಅನ್ನು ಚಿನ್ಮಯಿ, ರೀಟ್ವೀಟ್​ ಮಾಡಿದ್ದಾರೆ. ಜಾಸನ್​ ಟ್ವೀಟ್​ನಲ್ಲಿ ತಿಳಿಸಿರುವ ವಿಷಯ ತುಂಬಾ ಗಂಭೀರವಾಗಿದ್ದು, ಮೆಡಿಕಲ್​ ಶಿಕ್ಷಣದ ಕರಾಳತೆಯನ್ನು ಬಿಚ್ಚಿಟ್ಟಿದಂತಿದೆ. ಜಾಸನ್​ ಅವರು ವಿದ್ಯಾರ್ಥಿ ಆಗಿದ್ದ ಸಮಯದಲ್ಲಿ ನಡೆದ ಘಟನೆ ಇದಾಗಿದೆ. ಆರ್ಥೋಪೆಡಿಕ್​ ವಿಭಾಗದ ಮುಖ್ಯಸ್ಥ ಅಥವಾ ಎಚ್​ಒಡಿಯ ದುರ್ವರ್ತನೆಗೆ ಸಂಬಂಧಿಸಿದ ಟ್ವೀಟ್​ ಇದಾಗಿದೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ ಹೊಂದಾಣಿಕೆ ಕೇಂದ್ರಕ್ಕೆ ಬಿಟ್ಟದ್ದು: ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ
ಆರ್ಥೋಪೆಡಿಶಿಯನ್ ಟ್ವೀಟ್​ ಪ್ರಕಾರ, ಅವರು ಅಂತಿಮ ವರ್ಷದ ಆರ್ಥೋಪೆಡಿಕ್​ ಓದುತ್ತಿದ್ದ ಸಂದರ್ಭದಲ್ಲಿ ಎಚ್​ಒಡಿ, ಪ್ರತಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹುಡುಗಿಯರನ್ನು ಪೂರೈಸುವಂತೆ ಬೇಡಿಕೆ ಇಡುತ್ತಿದ್ದರಂತೆ. ಇಬ್ಬರು ಸುಂದರ ಮತ್ತು ಎತ್ತರವಾದ 18 ವರ್ಷದ ಹುಡುಗಿಯರನ್ನು ಒಂದು ರಾತ್ರಿಗೆ ಪೂರೈಸುವಂತೆ ಬೇಡಿಕೆ ಇಡುತ್ತಿದ್ದರು. ಪರೀಕ್ಷೆಯಲ್ಲಿ ಪಾಸ್​ ಮಾಡಬೇಕಾದರೆ ಹುಡುಗಿಯರನ್ನು ಪೂರೈಸಿ ಎಂದು ಕೇಳುತ್ತಿದ್ದರು ಎಂದಿದ್ದಾರೆ. ಅಲ್ಲದೆ, ನನ್ನ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದಿರುವ ಆರ್ಥೋಪೆಡಿಶಿಯನ್, ಎಚ್​ಒಡಿ ತುಂಬಾ ಪ್ರಭಾವ ವ್ಯಕ್ತಿಯಾಗಿದ್ದು, ತಮಿಳುನಾಡಿನಾದ್ಯಂತ ತಮ್ಮ ಪ್ರಭಾವ ಹೊಂದಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.
Hey#MedTwitterWhat are some of the most incredible stories of bootlicking you have seen/heard during residency!?Recently, I heard of a guy who gifted a gold chain to his HOD because he wanted to pass the exam in the first attempt! 🙈
— Dr. Devashish Palkar (@psychidiaries)June 21, 2023

ತಮಿಳುನಾಡಿನ ರಾಜಕೀಯದಲ್ಲಿ ಎಚ್​ಒಡಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಒಂದು ವೇಳೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮದ ಮೊರೆ ಹೋದರೆ ಅವರಿಗೆ ತಿರುಮಂತ್ರವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಆರ್ಥೋಪೆಡಿಶಿಯನ್ ತಮ್ಮ ಟ್ವೀಟ್​ನಲ್ಲಿ ಎಚ್ಚರಿಸಿದ್ದಾರೆ.
ಆರ್ಥೋಪೆಡಿಶಿಯನ್ ಜಾಸನ್​ ಟ್ವೀಟ್​ ಬೆನ್ನಲ್ಲೇ ಡಾ. ದೇವಾಶಿಶ್ ಪಾಲ್ಕರ್ ಎಂಬುವರು ಕೂಡ ಒಂದು ಘಟನೆಯನ್ನು ತಿಳಿಸಿದ್ದಾರೆ. ಇತ್ತಿಚೆಗಷ್ಟೇ ಅವರು ಓರ್ವ ಮೆಡಿಕಲ್​ ವಿದ್ಯಾರ್ಥಿಯನ್ನು ಮಾತನಾಡಿಸಿದಾಗ, ಮೊದಲ ಪ್ರಯತ್ನದಲ್ಲೇ ಪಾಸ್​ ಆಗಲು ಎಚ್​ಒಡಿಗೆ ಚಿನ್ನದ ಸರ ನೀಡಿದ್ದೇ ಎಂದು ತಿಳಿಸಿದ್ದನು ಎಂದಿದ್ದಾರೆ.
Hey#MedTwitterWhat are some of the most incredible stories of bootlicking you have seen/heard during residency!?Recently, I heard of a guy who gifted a gold chain to his HOD because he wanted to pass the exam in the first attempt! 🙈
— Dr. Devashish Palkar (@psychidiaries)June 21, 2023

ಮೇಲಿನ ಈ ಎರಡು ಪೋಸ್ಟ್ ಸಂಪೂರ್ಣವಾಗಿ, ವೈದ್ಯಕೀಯ ಕ್ಷೇತ್ರದಲ್ಲಿನ ದುರ್ನಡತೆ ಮತ್ತು ಅನೈತಿಕ ನಡವಳಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಇದು ಅಧಿಕಾರ ದುರುಪಯೋಗಗಳನ್ನು ಹೈಲೈಟ್ ಮಾಡಿದೆ.
ಇದನ್ನೂ ಓದಿ:ಮೊಬೈಲ್ ಗೀಳು ಬಿಟ್ಟು ಜಾನಪದ ಕಲಿಯಿರಿ: ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಕಿವಿಮಾತು
ಟ್ವೀಟ್​ ವಿರುದ್ಧ ಹರಿಹಾಯ್ದಿರುವ ಚಿನ್ಮಯಿ, ಕೆಲವು ಪಿಜಿ ವಿದ್ಯಾರ್ಥಿಗಳು ತಾವು ಪಾಸಾಗಲು 18 ವರ್ಷದ ಹುಡುಗಿಯರನ್ನು ಎಚ್‌ಒಡಿಗೆ ಪೂರೈಸುತ್ತಿದ್ದರು ಎಂದು ಹೇಳಲಾಗಿದೆ. ಹಾಗಾದರೆ, ಹುಡುಗಿಯರು ಕಾಳಜಿಯನ್ನು ಯಾರು ವಹಿಸುತ್ತಾರೆ, ಪಿಜಿ ವಿದ್ಯಾರ್ಥಿಗಳು ವೈದ್ಯರಾಗುವ ಮೊದಲು ಪಿಂಪ್‌ಗಳು ಮತ್ತು ಮಾನವ ಕಳ್ಳಸಾಗಣೆದಾರರಾದರು ಎಂದು ಕಿಡಿಕಾರಿದ್ದಾರೆ.
This tweetThe responses.
It is just another day.
Who cares if 18 year old girls had to be steadily supplied to a HOD because some PGs had to pass. So they became pimps / human traffickers before they became PG doctors a?
Of course he is too powerful so nobody dares expose…https://t.co/kE3dAPDCKc
— Chinmayi Sripaada (@Chinmayi)June 21, 2023

ಖಂಡಿತವಾಗಿಯೂ ಅವನು ತುಂಬಾ ಶಕ್ತಿಶಾಲಿ ಆಗಿರಬಹುದು. ಯಾರೂ ಆತನ ಕ್ರೌರ್ಯವನ್ನು ಬಹಿರಂಗಪಡಿಸುವ ಧೈರ್ಯ ಮಾಡುವುದಿಲ್ಲವೋ ಅವರು ಯಾರೇ ಆಗಿರಲಿ ಅವರು ಪಿಂಪ್‌ಗಳಾಗಿರುತ್ತಾರೆ ಎಂದು ಚಿನ್ಮಯಿ ಹೇಳಿದ್ದಾರೆ. ಇದೀಗ ಈ ಟ್ವೀಟ್​ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.(ಏಜೆನ್ಸೀಸ್​)
ಮೂರು ಮಕ್ಕಳನ್ನು ಬಿಟ್ಟು ಅತ್ತೆಯೊಂದಿಗೆ ಪರಾರಿಯಾದ ಅಳಿಯ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ!

ಡಿಎಂಕೆ ಸಂಸದೆ ಕನಿಮೋಳಿ ಪ್ರಯಾಣ: ಖಾಸಗಿ ಬಸ್​ ಮಹಿಳಾ ಚಾಲಕಿಯನ್ನು ಕೆಲಸದಿಂದ ತೆಗೆದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
