ಬೆಂಗಳೂರು:ಕರ್ನಾಟಕದಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ತಮಿಳುನಾಡಿನ ಮೇಲ್ಮರವತ್ತೂರಿನ ಓಂ ಶಕ್ತಿ (ಆದಿಪರಾಶಕ್ತಿ) ದೇವಸ್ಥಾನದ ಸಂಸ್ಥಾಪಕರು ವಿಧಿವಶರಾಗಿದ್ದಾರೆ.
ತಮಿಳುನಾಡಿನಲ್ಲಿರುವ ಮೇಲ್ಮರವತ್ತೂರಿನ ಓಂ ಶಕ್ತಿ ಎಂದೇ ಖ್ಯಾತಿ ಪಡೆದಿರುವ ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದ ಬಂಗಾರು ಅಡಿಗಳಾರ್ ಅವರು ನಿಧನದ ಕುರಿತ ಮಾಹಿತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!
ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರಿಗೆ ಶಕ್ತಿ ದೇವತೆಯರ ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದ ಮಾತೃಹೃದಯಿ ಸ್ವಾಮೀಜಿಯವರು ಲಕ್ಷಾಂತರ ಭಕ್ತರ ಪಾಲಿಗೆ ‘ಅಮ್ಮ’ನೇ ಆಗಿದ್ದರು. ಅವರ ನಿರ್ಗಮನದಿಂದ ಜಗತ್ತು ಒಂದು ಅಧ್ಯಾತ್ಮಿಕ ಚೇತನವನ್ನೇ ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.
ಬಂಗಾರು ಅವರ ಆತ್ಮಕ್ಕೆ ಓಂ ಶಕ್ತಿ ತಾಯಿ ಶಾಂತಿ ನೀಡಲೆಂದು ಮತ್ತು ಅವರ ಕುಟುಂಬಸ್ಥರಿಗೆ ಹಾಗೂ ಕೋಟಿ ಕೋಟಿ ಭಕ್ತಾದಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 18 =
Remember me
