ಒಡಿಶಾ:ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮನ್ನು ನನ್ನ ತಂತ್ರದಿಂದಲೇ ಸರಿ ಮಾಡುತ್ತೀನಿ ಎಂದು ಹೇಳಿ ಮಂತ್ರವಾದಿಯೊಬ್ಬ ಮಹಿಳೆಯ ತಲೆಗೆ 18 ಸೂಜಿ ಚುಚ್ಚಿ ಆಕೆ ಪ್ರಜ್ಞಾಹೀನಳಾಗುವಂತೆ ಮಾಡಿರುವ ಘಟನೆ ಒಡಿಶಾದ ಬಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮಂತ್ರವಾದಿ ಸಂತೋಷ್​ ರಾಣಾನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯ ತಂದೆ, ಕಳೆದ ನಾಲ್ಕು ವರ್ಷಗಳಿಂದ ನನ್ನ ಮಗಳು ಅನಾರೋಗ್ಯಕ್ಕೀಡಾಗಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಎಷ್ಟೇ ಚಿಕಿತ್ಸೆ ಪಡೆದರೂ ಆಕೆ ಮಾತ್ರ ಗುಣಮುಖರಾಗದೆ ಇರುವುದನ್ನು ನೋಡಿ ಸಂಬಂಧಿಕರು ಪೂಜೆ ಮಾಡಿಸುವುದಕ್ಕೆ ಹೇಳಿದರು. ಅದರಂತೆ ನಾವು ನಮ್ಮ ಮಗಳ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಮಂತ್ರವಾದಿಯನ್ನು ಭೇಟಿ ಮಾಡಿದೆವು.
ಇದನ್ನೂ ಓದಿ:ಬಿಲ್ಕಿಸ್​ ಬಾನೊ ಪ್ರಕರಣ; ಕ್ಷಮಾದಾನ ರದ್ದು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾ
ಮಂತ್ರವಾದಿಯನ್ನು ಭೇಟಿ ಮಾಡಿದ ಬಳಿಕ ಆತ ವಿಶೇಷ ಪೂಜೆ ಮಾಡಿಸಿದಾಗ ಗುಣಮುಖರಾಗುತ್ತಾರೆ ಎಂದು ನಮ್ಮನ್ನು ನಂಬಿಸಿದ. ಬಳಿಕ ಆತ ಪೂಜೆ ಮಾಡುವ ನೆಪದಲ್ಲಿ ನಮ್ಮ ಮಗಳನ್ನು ಕೋಣೆಯೊಳಗೆ ಕರೆದೊಯ್ದಿದ್ದ, ಒಂದು ಗಂಟೆಯ ನಂತರ ಅವಳನ್ನು ಹೊರಗೆ ಕರೆತಂದಿದ್ದ. ಆ ಬಳಿಕ ನಮ್ಮ ಮಗಳು ತುಂಬಾ ಅಸ್ವಸ್ಥರಾಗಿರುವುದನ್ನು ಗಮನಿಸಿದಾಗ ಆಕೆಯ ತಲೆಯಲ್ಲಿ ಎಂಟು ಸೂಜಿಗಳನ್ನು ಚುಚ್ಚಿರುವುದನ್ನು ಗಮನಿಸಿದೆವು.
ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ತಲೆಯ ಒಳಗೆ ಇನ್ನೂ 10 ಸೂಜಿ ಇರುವುದು ಕಂಡು ಬಂತು. ಪೂಜೆ ವೇಳೆ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು ಮತ್ತು ಆದ್ದರಿಂದ ಚುಚ್ಚುವಿಕೆಯ ಬಗ್ಗೆ ಆಕೆಗೆ ತಿಳಿದಿಲ್ಲ. ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗಾಯಾಳು ಮಹಿಳೆಯ ತಂದೆ ವಿವರಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 16 =
Remember me
