ಮುಂಬೈ:ಕರ್ನಾಟಕದಲ್ಲಿ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫೋನ್​ ಟ್ಯಾಪಿಂಗ್​ ನಡೆದಿದೆ ಎಂದು ಆರೋಪ ಕೇಳಿಬಂದಿತ್ತು.
ಈಗ ಮಹಾರಾಷ್ಟ್ರದಲ್ಲಿ ಫೋನ್​ ಟ್ಯಾಪಿಂಗ್​ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಶಿವಸೇನೆ ಮುಖಂಡ ಸಂಜಯ್​ ರಾವತ್​ ಮಾತನಾಡಿ, ಮಹಾರಾಷ್ಟ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ದೇವೇಂದ್ರ ಫಡ್ನವೀಸ್​ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನನ್ನ ಫೋನ್​ ಟ್ಯಾಪ್​ ಮಾಡಿತ್ತು. ಈ ಬಗ್ಗೆ ನನಗೆ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಹೇಳಿದ್ದರು.
ಈಗ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಶಿವಸೇನೆಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ಶಿವಸೇನೆ ಅಥವಾ ಎನ್​ಸಿಪಿ ನಾಯಕರ ಫೋನ್​ಗಳನ್ನು ಕದ್ದಾಲಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.ಫೋನ್​ ಕದ್ದಾಲಿಕೆ ಮಹಾರಾಷ್ಟ್ರ ರಾಜಕಾರಣದ ಸಂಸ್ಕೃತಿ ಅಲ್ಲ. ನಮ್ಮ ಸರ್ಕಾರ ಯಾವತ್ತೂ ಅಂತಹ ಕೆಲಸ ಮಾಡಿಲ್ಲ. ನಾವ್ಯಾರಿಗೂ ಆದೇಶ ನೀಡಿ ಫೋನ್​ ಕದ್ದಾಲಿಕೆ ಮಾಡಿಸಿಲ್ಲ. ಈಗ ಆರೋಪ ಮಾಡುತ್ತಿರುವವರು ನಂಬಿಕೆಗೆ ಎಷ್ಟು ಅರ್ಹರು ಎಂಬುದು ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ.
ಫೋನ್​ ಕದ್ದಾಲಿಕೆ ಬಗ್ಗೆ ಈಗಿನ ಸರ್ಕಾರ ತನಿಖೆ ಮಾಡುವುದಾದರೆ ಮಾಡಿಕೊಳ್ಳಲಿ. ಈ ರಾಜ್ಯದ ಜನರಿಗೆ ಸತ್ಯ ಏನೆಂಬುದು ಗೊತ್ತು. ರಾಜ್ಯದ ಗೃಹಸಚಿವರು ಶಿವಸೇನೆಯವರೇ ಇದ್ದಾರೆ. ಆದಷ್ಟು ಬೇಗನೇ ತನಿಖೆ ಮಾಡಿ ಸಾರ್ವಜನಿಕರಿಗೆ ವರದಿ ನೀಡಿ ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಫಡ್ನವೀಸ್​ ಹೇಳಿದರು.
ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶಮುಖ್​ ಅವರೂ ಕೂಡ ಫೋನ್​ ಟ್ಯಾಪಿಂಗ್​ ಆರೋಪ ಮಾಡಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಸಂಸದ ಸಂಜಯ್​ ರಾವತ್​ ಫೋನ್​ಗಳನ್ನು ಕಳೆದ ಬಿಜೆಪಿ ಸರ್ಕಾರ ಟ್ಯಾಪ್​ ಮಾಡಿತ್ತು ಎಂದು ಆರೋಪ ಮಾಡಿದ್ದರು.(ಏಜೆನ್ಸೀಸ್​)
ಸರ್ಕಾರ ನನ್ನ ಫೋನ್ ಟ್ಯಾಪ್ ಮಾಡಿತ್ತು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ: ಶಿವಸೇನೆ ನಾಯಕ ಸಂಜಯ್ ರಾವತ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
