ನವದೆಹಲಿ:ಆರ್ಥಿಕ ಸಂಕಷ್ಟದ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚಿಸುವ ದೃಷ್ಟಿಯಿಂದ ದೊಡ್ಡ ಕೈಗಾರಿಕೋದ್ಯಮ ಮತ್ತು ಕಾರ್ಪೆರೇಟ್ ಕಂಪನಿಗಳಿಗೆ ಪೇಮೆಂಟ್ ಬ್ಯಾಂಕ್ ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಅವಕಾಶ ಕಲ್ಪಿಸಿದೆ. ದೇಶದ ಪ್ರತಿಷ್ಠಿತ ಟಾಟಾ, ಬಿರ್ಲಾ, ಅಂಬಾನಿ ಇನ್ನಿತರ ಸಮೂಹಗಳಿಗೆ ಬ್ಯಾಂಕ್ ನಡೆಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದೆ. ಎನ್​ಬಿಎಫ್​ಸಿ(ಬ್ಯಾಂಕೇತರ ಹಣಕಾಸು ಸಂಸ್ಥೆ)ಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಅವಕಾಶ ನೀಡಬಹುದೆಂದು ಆರ್​ಬಿಐ ಸಲಹೆ ನೀಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಅದಿತ್ಯ ಬಿರ್ಲಾ ನುವೊ, ಟೆಕ್ ಮಹೀಂದ್ರಾ, ಟಾಟಾ ಸನ್ಸ್, ಸನ್ ಫರ್ವ ಇನ್ನಿತರ ಕಂಪನಿಗಳು ಬ್ಯಾಂಕ್ ತೆರೆಯಲು ಅರ್ಜಿ ಹಾಕಿವೆ. ಈ ಪೈಕಿ ಕೆಲವು ಕಂಪನಿಗಳು ಕಾರ್ಯಸಾಧ್ಯತೆಯ ಅಂಜಿಕೆಯಿಂದ ಅರ್ಜಿ ವಾಪಸ್ ಪಡೆದಿವೆ.
ಈಗ ಪರವಾನಗಿ ಪಡೆಯಲು ಅರ್ಹವಾಗಿರುವ ಕಂಪನಿಗಳು ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಬ್ಯಾಂಕ್​ಗಳಂತೆ ಖಾಸಗಿ ವಲಯದಲ್ಲಿ ಪೂರ್ಣಪ್ರಮಾಣದಲ್ಲಿ ಬ್ಯಾಂಕ್ ತೆರೆಯಬಹುದಾಗಿದೆ ಎಂದು ಆರ್​ಬಿಐ ರಚಿಸಿದ್ದ ಆಂತರಿಕ ಕಾರ್ಯನಿರ್ವಹಣಾ ಗುಂಪು (ಐಡಬ್ಲ್ಯುಜಿ) ಶುಕ್ರವಾರ ಬಹಿರಂಗಗೊಳಿಸಿದ ವರದಿ ತಿಳಿಸಿದೆ.
ಬ್ಯಾಂಕಿಂಗ್ ಚಟುವಟಿಕೆಗೆ ಒಳಪಡದ ಜನರಿಗೂ ಬ್ಯಾಂಕ್ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಪೇಮೆಂಟ್ ಬ್ಯಾಂಕ್ ಮತ್ತು ಸಣ್ಣ ಬ್ಯಾಂಕ್​ಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ. ಆದರೆ, 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದ ನಂತರವಷ್ಟೇ ಈ ಹೊಸ ಬ್ಯಾಂಕ್​ಗಳು ಕಾರ್ಯಾರಂಭ ಮಾಡಬಹುದಾಗಿದೆ ಎಂದು ಆರ್​ಬಿಐನ ಐಡಬ್ಲ್ಯುಜಿ ಸ್ಪಷ್ಟಪಡಿಸಿದೆ.
ಬ್ಯಾಂಕ್​ಗಳ ಪ್ರವರ್ತಕರ ಪಾಲುದಾರಿಕೆಯನ್ನು ಏರಿಕೆ ಮಾಡುವುದು ದೀರ್ಘಾವಧಿಯ ಸೇವೆಯ (15 ವರ್ಷ) ದೃಷ್ಟಿಯಿಂದ ಔಚಿತ್ಯವೂ ಆಗಿದೆ. ಹೀಗಾಗಿ ಸದ್ಯ ಶೇ. 15 ಇರುವ ಮಿತಿಯನ್ನು ಶೇ. 26ರವರೆಗೂ ಏರಿಸಬಹುದು. ಇದು ಆಯಾಯ ಬ್ಯಾಂಕ್​ಗಳ ಇಕ್ವಿಟಿ ಷೇರಿಗೆ ಅನುಗುಣವಾಗಿರಬೇಕು ಎಂದು ಐಡಬ್ಲ್ಯುಜಿ ಹೇಳಿದೆ.
ಕಳೆದ ಜೂನ್ 12ರಂದು ಐಡಬ್ಲ್ಯುಜಿ ರಚಿಸಿದ್ದ ಆರ್​ಬಿಐ, ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಮಾಲೀಕತ್ವ ಮಾರ್ಗದರ್ಶಿ ಮತ್ತು ಕಾರ್ಪೆರೇಟ್ ಸಂರಚನೆಯನ್ನು ವಿಸ್ತರಿಸುವ ಸಾಧಕ-ಬಾಧಕ ಕುರಿತು ಪರಿಶೀಲಿಸುವ ಹೊಣೆಯನ್ನು ವಹಿಸಿತ್ತು. ಈಗ ಅದರ ವರದಿ ಬಿಡುಗಡೆ ಮಾಡಿದೆ. ಈ ವರದಿಯ ಬಗ್ಗೆ ಸಾರ್ವಜನಿಕರು ಜನವರಿ 15ರೊಳಗೆ ಆಕ್ಷೇಪ ಅಥವಾ ಸಲಹೆ ನೀಡಬಹುದಾಗಿದೆ.
ಹಿಂದೆ ನೀಡಿದ್ದ ಪರವಾನಗಿ
ಆರ್​ಬಿಐ ಏಳು ವರ್ಷದ ಹಿಂದೆ ಎರಡು ಕಂಪನಿಗಳಿಗೆ ಬ್ಯಾಂಕ್ ತೆರೆಯಲು ಅನುಮತಿ ನೀಡಿತ್ತು. ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್​ಗಳು ಕಾರ್ಯಾರಂಭ ಮಾಡಿದ್ದವು. ಅದಕ್ಕೂ ಹಿಂದೆ ಕೊಟಾಕ್ ಮಹೀಂದ್ರ ಮತ್ತು ಯೆಸ್ ಬ್ಯಾಂಕ್​ಗಳು ಅನುಮತಿ ಪಡೆದುಕೊಂಡಿದ್ದವು. ಈಗ ಯೆಸ್ ಬ್ಯಾಂಕ್ ನಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಪರಿವರ್ತನೆಗೆ ಅವಕಾಶ
ಕೈಗಾರಿಕೋದ್ಯಮ ಇಲ್ಲವೆ ಕಾರ್ಪೆರೇಟ್ ಸಮೂಹ ಯಶಸ್ವಿಯಾಗಿ 10 ವರ್ಷಗಳಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು (ಎನ್​ಬಿಎಫ್​ಸಿ) ನಡೆಸುತ್ತಿದ್ದರೆ ಮತ್ತು ಇದರ ಆಸ್ತಿ ಮೌಲ್ಯ -ಠಿ; 50 ಸಾವಿರ ಕೋಟಿಗೂ ಹೆಚ್ಚಿದ್ದರೆ ಇಂಥ ಎನ್​ಬಿಎಫ್​ಸಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಬಹುದಾಗಿದೆ ಎಂದು ಐಡಬ್ಲ್ಯುಜಿ ಸಲಹೆ ನೀಡಿದೆ. ಆದಿತ್ಯ ಬಿರ್ಲಾ ಸಮೂಹ, ಬಜಾಜ್ ಸಮೂಹ, ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಸನ್ಸ್ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಎನ್​ಬಿಎಫ್​ಸಿಗಳನ್ನು ನಡೆಸುತ್ತಿವೆ. ಈ ಎನ್​ಬಿಎಫ್​ಸಿಗಳು ಮಧ್ಯಮ ಶ್ರೇಣಿಯ ಬ್ಯಾಂಕ್​ಗಳಿಗಿಂತ ಹಿರಿದಾಗಿವೆ.
ಪರಿಣಾಮ ಏನು?
ಸದ್ಯದ ಸ್ಥಿತಿ ಏನು?
ಸಾರ್ವಜನಿಕ ವಲಯದ (ಪಿಎಸ್​ಬಿ) ಬ್ಯಾಂಕ್​ಗಳನ್ನು ವಿಲೀನಗೊಳಿಸಿ ಆರೇಳು ದೊಡ್ಡ ಬ್ಯಾಂಕ್​ಗಳನ್ನು ಈಗಾಗಲೇ ಸರ್ಕಾರ ರಚಿಸಿದೆ. ಇದರಿಂದ ವಸೂಲಾಗದ ಸಾಲ ಮತ್ತು ಅನುತ್ಪಾದಕ ಆಸ್ತಿಯ (ಎನ್​ಪಿಎ) ಒತ್ತಡದಲ್ಲಿದ್ದ ಬ್ಯಾಂಕ್​ಗಳು ಲಾಭದಾಯಕ ಬ್ಯಾಂಕ್​ಗಳ ಜತೆ ಸೇರಿವೆ. ವಿಲೀನವಾದ ಬ್ಯಾಂಕ್​ಗಳ ಆಸ್ತಿ -ಠಿ; 10 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೊಡ್ಡ ಪಿಎಸ್​ಬಿಗಳಂತೆ ಖಾಸಗಿ ವಲಯದಲ್ಲೂ ನಾಲ್ಕೈದು ದೊಡ್ಡ ಬ್ಯಾಂಕ್​ಗಳಿವೆ.
ಬಂಡವಾಳ ದ್ವಿಗುಣ
ಹೊಸ ಬ್ಯಾಂಕ್ ಆರಂಭಕ್ಕಿದ್ದ -ಠಿ; 500 ಕೋಟಿ ಕನಿಷ್ಠ ಬಂಡವಾಳವನ್ನು -ಠಿ; 1000 ಕೋಟಿಗೆ ಏರಿಸುವಂತೆ ಐಡಬ್ಲ್ಯುಜಿ ಶಿಫಾರಸು ಮಾಡಿದೆ. ಸಣ್ಣ ಗಾತ್ರದ ಬ್ಯಾಂಕ್​ಗೆ -ಠಿ; 200 ಕೋಟಿಯ ಕನಿಷ್ಠ ಬಂಡವಾಳವನ್ನು -ಠಿ; 300 ಕೋಟಿಗೆ ಹೆಚ್ಚಿಸಲೂ ಸಹ ಸಲಹೆ ನೀಡಿದೆ.
ಉತ್ತಮ ಮಾರ್ಗವೇ?
ಎನ್​ಬಿಎಫ್​ಸಿಗಳ ಆಸ್ತಿ ಮತ್ತು ನಷ್ಟಕ್ಕೆ ತಾಳಮೇಳ ಇಲ್ಲವಾಗಿದೆ. ಇಂಥ ಎನ್​ಬಿಎಫ್​ಸಿಗಳ ಸಂಖ್ಯೆ ಹೆಚ್ಚಿದರೆ ಅದು ಇಡೀ ಹಣಕಾಸು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ ಈ ಎನ್​ಬಿಎಫ್​ಸಿಗಳು ಬ್ಯಾಂಕ್ ಅಥವಾ ಮ್ಯುಚುವಲ್ ಫಂಡ್ ಇಲ್ಲವೆ ವಿಮಾ ಕಂಪನಿಗಳಿಂದ ಸಾಲ ಪಡೆದಿರುತ್ತವೆ. ಹೀಗಾಗಿ ಎನ್​ಬಿಎಫ್​ಸಿಗಳ ಬೆಳವಣಿಗೆಯ ಮೇಲೆ ನಿಗಾ ಇರಿಸದಿದ್ದರೆ ಅವುಗಳು ಭವಿಷ್ಯದಲ್ಲಿ ಸಾಲದ ಕೂಪದಲ್ಲಿ ಸಿಲುಕಿಕೊಂಡು ಬಿಡುತ್ತವೆ. ಆದ್ದರಿಂದ ಅವುಗಳನ್ನು ಬ್ಯಾಂಕ್​ಗಳನ್ನಾಗಿ ಪರಿರ್ವತಿಸಲು ಅವಕಾಶ ನೀಡುವುದು ಉತ್ತಮ ಮಾರ್ಗ ಎಂಬುದು ಆರ್​ಬಿಐ ಸಲಹೆಯಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + four =
Remember me
