ನವದೆಹಲಿ:ಉಪ್ಪಿನಿಂದ ಹಿಡಿದು ಸಾಫ್ಟ್​ವೇರ್​ವರೆಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಟಾಟಾ ಗುಂಪಿಗೆ ಏರ್​ ಇಂಡಿಯಾದ ಮಾರಾಟ ಫಿಕ್ಸ್​ ಆಗಿರುವ ಬಗ್ಗೆ ಇಂದು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಈ ವರ್ಷಾಂತ್ಯದೊಳಗೆ ಟಾಟಾ ಸನ್ಸ್​ನ ಟಾಲೇಸ್​ ಪ್ರೈವೇಟ್ ಲಿಮಿಟೆಡ್​ ಕಂಪೆನಿಗೆ ಏರ್​ ಇಂಡಿಯಾದ ವರ್ಗಾವಣೆ ಪ್ರಕ್ರಿಯೆಗಳು ಪೂರೈಸಲಿವೆ ಎಂದಿದೆ.
ನಷ್ಟದಲ್ಲಿ ಮುಳುಗಿರುವ ಏರ್​ ಇಂಡಿಯಾದ ಹೂಡಿಕೆಯನ್ನು ಸಂಪೂರ್ಣ ಹಿಂತೆಗೆಯುವ ಸರ್ಕಾರದ ಯೋಜನೆಯಂತೆ ಆಹ್ವಾನಿಸಲಾಗಿದ್ದ ಖರೀದಿಯ ಬಿಡ್​ಗಳಲ್ಲಿ, “ಟಾಟಾ ಗುಂಪಿನ ಟಾಲೇಸ್​ ಕಂಪೆನಿಯ 18,000 ಕೋಟಿ ರೂಪಾಯಿಗಳ ಬಿಡ್​ ಗೆದ್ದಿದೆ. ಈ ನಿಟ್ಟಿನ ವ್ಯವಹಾರವು ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಮುಗಿಯಲಿದೆ” ಎಂದು ಇನ್​ವೆಸ್ಟ್​ಮೆಂಟ್​ ಅಂಡ್​ ಪಬ್ಲಿಕ್​ ಅಸೆಟ್ ಮ್ಯಾನೇಜ್​ಮೆಂಟ್​ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ:‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ
ತನ್ನ ಶೇಕಡ 100 ರಷ್ಟು ಪಾಲನ್ನು ಟಾಟಾ ಕಂಪೆನಿಗೆ ಮಾರುತ್ತಿರುವ ಕೇಂದ್ರ ಸರ್ಕಾರಕ್ಕೆ, 2,700 ಕೋಟಿ ರೂಪಾಯಿ ನಗದು ಲಭಿಸಲಿದೆ ಎನ್ನಲಾಗಿದೆ. ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಿಂದ ಜೆ.ಆರ್.ಡಿ. ಟಾಟಾ ಅವರೇ ಆರಂಭಿಸಿದ್ದ ಏರ್​ ಇಂಡಿಯಾ ಕಂಪೆನಿ ಇದೀಗ ಮರಳಿ ತವರು ಸಂಸ್ಥೆಯ ತೆಕ್ಕೆಗೇ ಸೇರುತ್ತಿದೆ.
ಟಾಟಾ ಕಂಪೆನಿಯ ವಿನ್ನಿಂಗ್ ಬಿಡ್, ಕಂಪೆನಿಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿದ್ದ 12,906 ಕೋಟಿ ರೂಪಾಯಿ ರಿಸರ್ವ್​ ಪ್ರೈಸ್​ಗಿಂತ ಸುಮಾರು 5000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.​ ಏರ್​ ಇಂಡಿಯಾದ ಮಾಲೀಕತ್ವ ಪಡೆಯುತ್ತಿರುವ ಟಾಟಾ ಕಂಪೆನಿ, ಒಂದು ವರ್ಷದ ತನಕ ಎಲ್ಲಾ ನೌಕರರನ್ನೂ ಉದ್ಯೋಗದಲ್ಲಿ ಮುಂದುವರೆಸಬೇಕು. ಎರಡನೇ ವರ್ಷದಿಂದ ವಾಲೆಂಟರಿ ರಿಟೈರ್​ಮೆಂಟ್​ ಸ್ಕೀಮ್​(ವಿಆರ್​ಎಸ್)ನ ಅವಕಾಶ ನೀಡಬಹುದು ಎಂದು ಸರ್ಕಾರ ಷರತ್ತು ವಿಧಿಸಿದೆ.
Welcome back, Air India 🛬🏠pic.twitter.com/euIREDIzkV
— Ratan N. Tata (@RNTata2000)October 8, 2021

ಏರ್​ ಇಂಡಿಯಾ ಮತ್ತೆ ಟಾಟಾ ಗುಂಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಟಾಟಾ ಗುಂಪಿನ ಮುಖ್ಯಸ್ಥ ರತನ್ ಟಾಟಾ ಅವರು, ಭಾವುಕವಾದ ಸಂದೇಶವನ್ನು ಟ್ವೀಟ್ ಮಾಡಿದ್ದು, “ವೆಲ್ಕಮ್ ಬ್ಯಾಕ್, ಏರ್ ಇಂಡಿಯ” ಎಂದಿದ್ದಾರೆ. ಏರ್ ಇಂಡಿಯಾ ಪುನರ್​ನಿರ್ಮಾಣಕ್ಕೆ ಮಹತ್ವದ ಪ್ರಯತ್ನ ನಡೆಯಲಿದೆ ಎಂದಿದ್ದು, ಜೆಆರ್​ಡಿ ಟಾಟಾ ಅವರಿರುವ ಹಳೆಯ ಏರ್ ಇಂಡಿಯಾ ವಿಮಾನದ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.(ಏಜೆನ್ಸೀಸ್)
ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ

VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
