ಮುಂಬೈ:ಟಾಟಾ ಗ್ರೂಪ್‌ನ ಆಟೋಮೋಟಿವ್ ಸ್ಟಾಂಪಿಂಗ್ಸ್ ಆ್ಯಂಡ್​ ಅಸೆಂಬ್ಲೀಸ್​ ಲಿಮಿಟೆಡ್​ (Automotive Stampings and Assemblies Ltd.) ಷೇರುಗಳಲ್ಲಿ ಶುಕ್ರವಾರ ಉತ್ತಮ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ಶೇ. 10ರಷ್ಟು ಏರಿಕೆಯೊಂದಿಗೆ 632.85 ರೂ.ಗೆ ತಲುಪಿದವು.
ಟಾಟಾ ಗ್ರೂಪ್ ಕಂಪನಿಯ ಷೇರುಗಳ ಈ ಏರಿಕೆಯು ದೊಡ್ಡ ಪ್ರಕಟಣೆಯ ಕಾರಣದಿಂದಾಗಿ ಬಂದಿದೆ. ಜಮಶೆಡ್‌ಪುರದಲ್ಲಿರುವ ತನ್ನ ಹೊಸ ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಆಟೋಮೋಟಿವ್ ಸ್ಟಾಂಪಿಂಗ್ಸ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಷೇರುಗಳು ಭಾರೀ ಏರಿಕೆ ಕಂಡಿವೆ.
ಟಾಟಾ ಗ್ರೂಪ್ ಕಂಪನಿಯಾದ ಆಟೋಮೋಟಿವ್ ಸ್ಟಾಂಪಿಂಗ್ಸ್ ಜನವರಿಯಲ್ಲಿ ಜಮ್‌ಶೆಡ್‌ಪುರದಲ್ಲಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. 29 ಫೆಬ್ರವರಿ 2024 ರಿಂದ ಜೆಮ್‌ಶೆಡ್‌ಪುರದಲ್ಲಿರುವ ಹೊಸ ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ ಎಂದು ಕಂಪನಿ ಘೋಷಿಸಿದೆ.
ಆಟೋಮೋಟಿವ್ ಸ್ಟಾಂಪಿಂಗ್ ಷೇರುಗಳ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 1010 ಕೋಟಿ ರೂ. ಮುಟ್ಟಿದೆ.
ಕಳೆದ 4 ವರ್ಷಗಳಲ್ಲಿ ಈ ಷೇರುಗಳಲ್ಲಿ 4800% ರಷ್ಟು ಭಾರಿ ಏರಿಕೆಯಾಗಿದೆ. ಮಾರ್ಚ್ 20, 2020 ರಂದು ಷೇರುಗಳ ಬೆಲೆ 13 ರೂ. ಇತ್ತು. ಕಳೆದ 3 ವರ್ಷಗಳಲ್ಲಿ ಈ ಷೇರುಗಳ ಬೆಲೆ 1541%ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ.38.80ರಿಂದ ರೂ.632ಕ್ಕೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 113ರಷ್ಟು ಏರಿಕೆಯಾಗಿದೆ. ಕಳೆದ 6 ತಿಂಗಳುಗಳಲ್ಲಿ ಆಟೋಮೋಟಿವ್ ಸ್ಟಾಂಪಿಂಗ್‌ಗಳ ಷೇರುಗಳು ಅಂದಾಜು 55% ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 720 ರೂ. ಹಾಗೂ ಕನಿಷ್ಠ ಬೆಲೆ 249 ರೂ. ಇದೆ.

ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್ ಯೋಜನೆಗೆ ಕ್ಯಾಬಿನೆಟ್​ ಅನುಮತಿ: 78,000 ರೂಪಾಯಿವರೆಗೂ ಸಬ್ಸಿಡಿ; ಸೋಲಾರ್​ ಷೇರುಗಳಲ್ಲಿ ಏರಿಕೆ
ರಜಾ ದಿನವಾದ ಶನಿವಾರವೂ ಷೇರು ಮಾರುಕಟ್ಟೆಯಲ್ಲಿ ವಹಿವಾಟು: ವಿಶೇಷ ಟ್ರೇಡಿಂಗ್​ ಸೆಷನ್ಸ್​ ನಡೆಯುತ್ತಿರುವುದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
