ಮುಂಬೈ:ಟಾಟಾ ಗ್ರೂಪ್ ಕಂಪನಿಯ ಟಾಟಾ ಟೆಲಿಸರ್ವೀಸಸ್​ (ಮಹಾರಾಷ್ಟ್ರ) ಲಿಮಿಟೆಡ್​ (Tata Teleservices (Maharashtra) Ltd) ಅಂದರೆ ಟಿಟಿಎಂಎಲ್ ಷೇರುಗಳಿಗೆ ಬುಧವಾರ ಸಾಕಷ್ಟು ಬೇಡಿಕೆ ಬಂದಿದೆ.
ಈ ಕಂಪನಿಯ ಷೇರುಗಳಲ್ಲಿ ಬುಧವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇ.8ರಷ್ಟು ಏರಿಕೆ ಕಂಡುಬಂದಿದ್ದು, 98.65 ರೂಪಾಯಿ ತಲುಪಿದ್ದವು. ಹಿಂದಿನ ದಿನವಾದ ಮಂಗಳವಾರ ಕಂಪನಿಯ ಷೇರುಗಳು ಬೆಲೆ 92 ರೂಪಾಯಿಗೆ ಮುಕ್ತಾಯವಾಗಿತ್ತು. ಷೇರುಗಳ ಈ ಏರಿಕೆಯ ಹಿಂದಿನ ಕಾರಣವೆಂದರೆ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶಗಳು.ಈ ತ್ರೈಮಾಸಿಕದಲ್ಲಿ 307 ಕೋಟಿ ರೂ. ನಷ್ಟವಾಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ನಷ್ಟ 310 ಕೋಟಿ ರೂ ಇತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 919 ಕೋಟಿ ರೂ.ಗಳ ನಿವ್ವಳ ನಷ್ಟವಾಗಿದೆ.
BSE ಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, TTML ಷೇರುಗಳು ಕಳೆದ ಒಂದು ವರ್ಷದಲ್ಲಿ 27% ಮತ್ತು ಕಳೆದ ಆರು ತಿಂಗಳಲ್ಲಿ 21% ರಷ್ಟು ಏರಿಕೆ ಕಂಡಿವೆ. ಕಳೆದ ಐದು ವರ್ಷಗಳಲ್ಲಿ TTML ಷೇರುಗಳು 3,268.79% ವರೆಗೆ ಆದಾಯವನ್ನು ನೀಡಿವೆ. ಈ ಅವಧಿಯಲ್ಲಿ ಇದರ ಬೆಲೆ 2 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 109.10 ರೂ. ಮತ್ತು ಕನಿಷ್ಠ ಬೆಲೆ ರೂ 49.80 ಆಗಿದೆ. ಜನವರಿ 11, 2022 ರಂದು ಟಾಟಾ ಗ್ರೂಪ್‌ಗ್ರೂನ ಈ ಷೇರು ತನ್ನ ಜೀವಿತಾವಧಿಯ ಗರಿಷ್ಠ ಬೆಲೆಯಾದ ರೂ 291.05 ತಲುಪಿತ್ತು. ಪ್ರಸ್ತುತ ಷೇರುಗಳು ತಮ್ಮ ಜೀವಿತಾವಧಿಯ ಗರಿಷ್ಠಕ್ಕಿಂತ 66% ಕಡಿಮೆಯಾಗಿದೆ.
ಟಾಟಾ ಟೆಲಿಸರ್ವಿಸಸ್‌ನ ಅಂಗಸಂಸ್ಥೆಯಾಗಿದೆ TTML. ಈ ಕಂಪನಿಯು ತನ್ನ ವಿಭಾಗದಲ್ಲಿ ಮಾರುಕಟ್ಟೆ ಅಗ್ರಗಣ್ಯ ಕಂಪನಿಯಾಗಿದೆ. ಕಂಪನಿಯು ಧ್ವನಿ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತದೆ. ಕಂಪನಿ ಗ್ರಾಹಕರು ಪಟ್ಟಿಯಲ್ಲಿ ಅನೇಕ ದೊಡ್ಡ ಹೆಸರುಗಳಿವೆ. ಇದರ ಮಾರುಕಟ್ಟೆ ಮೌಲ್ಯ 18,563.99 ಕೋಟಿ ರೂಪಾಯಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
