ನವದೆಹಲಿ:ಉಚ್ಛಾಟಿತ ಸೈರಸ್​ ಮಿಸ್ತ್ರಿಯನ್ನು ದೇಶದ ಅತಿದೊಡ್ಡ ಉದ್ಯಮ ಸಮೂಹ ಸಂಸ್ಥೆ ಟಾಟಾ ಸನ್ಸ್​ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿರುವ ನ್ಯಾಷನಲ್ ಲಾ ಅಪೀಲ್ ಟ್ರಿಬ್ಯುನಲ್(ಎನ್​ಸಿಎಲ್​ಎಟಿ) ಕ್ರಮವನ್ನು ಪ್ರಶ್ನಿಸಿ ಟಾಟಾ ಸನ್ಸ್​ ಗುರುವಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.
ಎನ್​ಸಿಎಲ್​ಎಟಿ ನೀಡಿರುವ ಆದೇಶಕ್ಕೆ ತಕ್ಷಣೆ ತಡೆನೀಡುವಂತೆ ಟಾಟಾ ಸನ್ಸ್​ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದೆ.
ಟಾಟಾ ಸನ್ಸ್​ ಅಧ್ಯಕ್ಷ ಸ್ಥಾನದಿಂದ 2012 ರಲ್ಲಿ ರತನ್ ಟಾಟಾ ನಿವೃತ್ತಿಯಾದಾಗ, ಟಾಟಾ ಸನ್ಸ್​​ ಅಧ್ಯಕ್ಷರಾಗಿ ಸೈರಸ್​ ಮಿಸ್ತ್ರಿ ನೇಮಕವಾಗಿದ್ದರು. 2016 ರಲ್ಲಿ ರತನ್ ಟಾಟಾ ಮತ್ತು ಇತರ ನಿರ್ದೇಶಕರು ಮಿಸ್ತ್ರಿಯನ್ನು ಏಕಾಏಕಿ ಟಾಟಾ ಸನ್ಸ್​ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದ್ದರು.
ಬಳಿಕ ಈ ಕ್ರಮವನ್ನು ಸೈರಸ್​ ಮಿಸ್ತ್ರಿ ಎನ್​ಸಿಎಲ್​ಎಟಿಯಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಡಿಸೆಂಬರ್​ 18ರಂದು ಸೈರಸ್​ ಮಿಸ್ತ್ರಿಯನ್ನು ಮರು ನೇಮಕಗೊಳಿಸಿತ್ತು. ಅಲ್ಲದೆ, ಸೈರಸ್​ ಮಿಸ್ತ್ರಿ ಅವರ ಜಾಗಕ್ಕೆ ಎನ್​ ಚಂದ್ರಶೇಖರ್ ಅವರ ಆಯ್ಕೆ ಕಾನೂನು ಬಾಹಿರ ಎಂದು ಹೇಳಿತ್ತು.​(ಏಜೆನ್ಸೀಸ್​)
https://www.vijayavani.net/cyrus-mistry-wins-war-against-tata-group-nclat-restores-his-position-as-executive-chairman/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + one =
Remember me
