ನವದೆಹಲಿ:ಹಾಲಿ ನಷ್ಟದಲ್ಲಿ ನಡೆಯುತ್ತಿರುವ ಏರ್​ ಇಂಡಿಯಾ ಏರ್​ಲೈನ್ಸ್​ ಕಂಪೆನಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಟಾಟಾ ಕಂಪೆನಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇಂದು(ಅಕ್ಟೋಬರ್ 1) ಅನುಮೋದನೆ ನೀಡಿದೆ. 1932 ರಲ್ಲಿ ಟಾಟಾ ಏರ್​ಲೈನ್ಸ್​ ಎಂಬ ಹೆಸರಿನಲ್ಲಿ ಆರಂಭಗೊಂಡು, 1947ರಲ್ಲಿ ರಾಷ್ಟ್ರೀಕರಣದ ನಂತರ ಏರ್ ಇಂಡಿಯಾ ಆಗಿದ್ದ ‘ಮಹಾರಾಜ’, ಇದೀಗ ಮರಳಿ ತನ್ನ ತವರು ಸಂಸ್ಥೆಗೇ ಸೇರುತ್ತಿರುವುದು ವಿಶೇಷವಾಗಿದೆ.
ಏರ್​ ಇಂಡಿಯ ಮತ್ತು ಏರ್ ಇಂಡಿಯ ಎಕ್ಸ್​ಪ್ರೆಸ್​ಗಳಲ್ಲಿನ ಶೇ.100 ರಷ್ಟು ಸರ್ಕಾರಿ ಪಾಲುದಾರಿಕೆ ಮತ್ತು ಗ್ರೌಂಡ್​ ಹ್ಯಾಂಡ್ಲಿಂಗ್ ಕಂಪೆನಿ ಎಐಎಸ್​ಎಟಿಎಸ್​ನಲ್ಲಿ ಶೇ.50 ರಷ್ಟು ಪಾಲುದಾರಿಕೆಯನ್ನು ಸರ್ಕಾರ ಮಾರಾಟ ಮಾಡುತ್ತಿದೆ. ಖರೀದಿಗಾಗಿ ಟಾಟಾ ಸನ್ಸ್​ ಪ್ರೈವೇಟ್​ ಲಿಮಿಟೆಡ್​ ಸಲ್ಲಿಸಿದ್ದ ಬಿಡ್​ಅನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರದ ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮಂತ್ರಿ ಪಿಯೂಶ್​ ಗೋಯಲ್, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸದಸ್ಯರಾಗಿದ್ದರು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ:ದುಬಾರಿಯಾದ ಫೇಸ್ಬುಕ್​ ಸ್ನೇಹ! ಬರೋಬ್ಬರಿ 14 ಲಕ್ಷ ರೂ. ಕಳ್ಕೊಂಡು ಕಣ್ಣೀರಿಡುತ್ತಿರುವ ಹಾಸನದ ಮಹಿಳೆ
ಏರ್​ ಇಂಡಿಯಾದಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸರ್ಕಾರ 2020 ರ ಜನವರಿಯಲ್ಲಿ ಯೋಜನೆ ರೂಪಿಸಿತ್ತು. 2021 ರ ಏಪ್ರಿಲ್​ನಲ್ಲಿ ಆಸಕ್ತ ಉದ್ಯಮಿಗಳಿಂದ ಫೈನಾನ್ಶಿಯಲ್ ಬಿಡ್​ಗಳನ್ನು ಆಹ್ವಾನಿಸಿತ್ತು. ಏರ್​ ಇಂಡಿಯಾದ ರಿಸರ್ವ್​ ಪ್ರೈಸ್​ 15,000-20,000 ಕೋಟಿ ರೂ.ಗಳಷ್ಟಿತ್ತು. ಟಾಟಾ ಗುಂಪಿನೊಂದಿಗೆ ಸ್ಪೈಸ್​ಜೆಟ್​ ಸಂಸ್ಥಾಪಕ ಅಜಯ್​ ಸಿಂಗ್​ ಕೂಡ ಬಿಡ್​ ಸಲ್ಲಿಸಿದವರಲ್ಲಿ ಅಗ್ರಗಣ್ಯರಾಗಿದ್ದರು ಎನ್ನಲಾಗಿದೆ.
ದೇಶಾದ್ಯಂತ 4,400 ದೇಶೀಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್​ ಮತ್ತು ಪಾರ್ಕಿಂಗ್​ ಸ್ಲಾಟ್​ಗಳನ್ನು ಹೊಂದಿರುವ ಏರ್​ ಇಂಡಿಯ, ವಿದೇಶದ ವಿಮಾನ ನಿಲ್ದಾಣಗಳಲ್ಲಿ ಕೂಡ 900 ಸ್ಲಾಟ್​ಗಳನ್ನು ಹೊಂದಿದೆ. 1932 ರಲ್ಲಿ ಆರಂಭವಾದಾಗ ಟಾಟಾ ಏರ್​ಲೈನ್ಸ್​ ಎಂಬ ಹೆಸರು ಹೊಂದಿದ್ದ ಏರ್​ ಇಂಡಿಯ ಸಂಸ್ಥಾಪಕರು ಉದ್ಯಮ ದಿಗ್ಗಜ ಜೆಆರ್​ಡಿ ಟಾಟಾ. 1947 ರಲ್ಲಿ ಇದು ರಾಷ್ಟ್ರೀಕರಿಸಲ್ಪಟ್ಟಿತ್ತು. 2007 ರಲ್ಲಿ ಇಂಡಿಯನ್​ ಏರ್​ಲೈನ್ಸ್​ನೊಂದಿಗೆ ಮರ್ಜರ್​ ಆದಾಗಿನಿಂದ, ಏರ್​ ಇಂಡಿಯಾ ನಷ್ಟದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್​)
ಮೀಸಲಾತಿ ಹೋರಾಟ ಕೈಬಿಡಲು ಸಿಎಂ ಮನವಿ; ಇಂದು ಚರ್ಚೆ ನಂತರ ನಿರ್ಣಯ ಎಂದ ಸ್ವಾಮೀಜಿ

ಹೊಸ ಮೈಲಿಗಲ್ಲು: ಅರ್ಹ ಜನಸಂಖ್ಯೆಯ ಕಾಲು ಭಾಗಕ್ಕೆ ಎರಡೂ ಡೋಸ್ ಲಸಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
