ನವದೆಹಲಿ:ಸಣ್ಣದೊಂದು ಟ್ಯಾಟೂ ಹಾಕಿಸಿಕೊಳ್ಳಬೇಕೆಂದರೆ ಅದೆಷ್ಟು ನೋವಾಗುತ್ತದೆಯಲ್ಲವೇ? ಹಾಗಿರುವಾಗ ಪೂರ್ತಿ ದೇಹಕ್ಕೇ ಟ್ಯಾಟೂ ಹಾಕಿಸಿಕೊಂಡರೆ? ಅಂತದ್ದೊಂದು ನೋವನ್ನು ನಾವು ನೀವು ಊಹಿಸಿಕೊಳ್ಳುವುದಕ್ಕೇ ಅಸಾಧ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕಣ್ಣಿನ ಬಿಳಿಗುಡ್ಡೆಯಿಂದ ಹಿಡಿದು ದೇಹದ ಪ್ರತಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ!
ಹೌದು. ರಾಷ್ಟ್ರ ರಾಜಧಾನಿ ನವದೆಹಲಿ ನಿವಾಸಿ ಕರಣ್ ಸಿಧು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ವ್ಯಕ್ತಿ. 16ನೇ ವಯಸ್ಸಿನಿಂದಲೇ ಟ್ಯಾಟೂ ಕಡೆ ಗಮನ ಹರಿಸಿದ ಕರಣ್ ಈಗ ತನ್ನದೇ ಆದ ಟ್ಯಾಟೂ ಶಾಪ್ ಹೊಂದಿದ್ದಾನೆ. ತಲೆಯಿಂದ ಪಾದದವರೆಗೆ ಎಲ್ಲ ಕಡೆಯಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇನ್ನೂ ವಿಶೇಷವೆಂದರೆ ನ್ಯೂಯಾರ್ಕ್​ ತೆರಳಿ ತನ್ನ ಕಣ್ಣಿನ ಬಿಳಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡು ಕಪ್ಪು ಮಾಡಿಸಿಕೊಂಡು ಬಂದಿದ್ದಾನೆ.
ಟ್ಯಾಟೂ ವಿಶೇಷತೆ ಹೊಂದಿರುವ ಕರಣ್ ತನ್ನ ಹೆಸರನ್ನೇ ಟ್ಯಾಟೂಗ್ರಾಫರ್ ಕರಣ್ ಎಂದು ಬದಲಾಯಿಸಿಕೊಂಡಿದ್ದಾನೆ. ಟ್ಯಾಟೂ ಜತೆ ಇನ್ನೂ ಕೆಲ ವಿಶೇಷ ಕಯಾಲಿಗಳು ಆತನಿಗಿದೆ. ಆತನ ಕಿವಿಯ ರೂಪವನ್ನೂ ಆಪರೇಷನ್ ಮಾಡಿ ಬದಲಾಯಿಸಲಾಗಿದೆ. ಹಲ್ಲೂ ವಿಶೇಷವಾಗಿರಲಿ ಎಂದು ಮಾಮೂಲಿ ಹಲ್ಲನ್ನು ಕೀಳಿಸಿ ಮೆಟಲ್ ಹಲ್ಲನ್ನು ಹಾಕಿಸಿಕೊಂಡಿದ್ದಾನೆ. ನಾಲಿಗೆ ಸಾಮಾನ್ಯವಾಗಿರಬಾರದೆಂದು ಅದನ್ನು ಸೀಳಿಸಿ ಹಾವಿನ ನಾಲಿಗೆಯಂತೆ ಸೀಳು ನಾಲಿಗೆ ಮಾಡಿಕೊಂಡಿದ್ದಾನೆ.
ಈ ರೀತಿ ವಿಶೇಷತೆಗಳನ್ನೂ ತುಂಬಿಕೊಂಡಿರುವ ಕರಣ್ ಅದನ್ನೆಲ್ಲ ತನ್ನ ಪ್ಯಾಶನ್​ಗಾಗಿ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಎಲ್ಲ ಹಂತದಲ್ಲೂ ಸಾಕಷ್ಟು ನೋವಾಗುತ್ತಿತ್ತು. ಆದರೆ ಪ್ಯಾಶನ್​ಗಾಗಿ ನೋವನ್ನು ತಡೆದುಕೊಳ್ಳಲು ನಾನು ಸಿದ್ಧನಿದ್ದೆ. ಈಗ ಬಾಡಿ ಬಿಲ್ಡಿಂಗ್​ ಕಡೆ ಗಮನ ಹರಿಸುತ್ತಿದ್ದೇನೆ. ನನ್ನ ಪೋಷಕರು ನನಗೆ ಸಂಪೂರ್ಣ ಸಪೋರ್ಟ್ ಮಾಡುತ್ತಿದ್ದಾರೆ. 62ನೇ ವಯಸ್ಸಿನ ನನ್ನ ತಂದೆ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಈಗಲೂ ಅವರೂ ಕೂಡ ಬಾಡಿ ಬಿಲ್ಡಿಂಗ್ ಮಾಡುತ್ತಾರೆ. ದೇಶದಲ್ಲಿ ಸಂಪೂರ್ಣ ಮಾಡಿಫೈಯಡ್ ಬಾಡಿ ಇರುವ ಬಾಡಿ ಬಿಲ್ಡರ್ ಎನ್ನುವ ಖ್ಯಾತಿ ನನಗಿದೆ. ಹಾಗೆಯೇ ಭಾರತದಲ್ಲಿ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ನಾನು. ಅದೇ ಕಾರಣಕ್ಕೆ ನನ್ನ 19ನೇ ವಯಸ್ಸಿಗೇ ನನಗೆ ಗಿನ್ನೆಸ್ ರೆಕಾರ್ಡ್ ಬಂದಿದೆ ಎನ್ನುತ್ತಾನೆ ಬಾಡಿ ಬಿಲ್ಡರ್ ಕರಣ್. (ಏಜೆನ್ಸೀಸ್)
ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್! ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಬುಕ್ಕಿಂಗ್

ಜುಲೈ 23ಕ್ಕೆ ಎಜುಕೇಷನ್ ಯುಎಸ್ಎ ಬೆಂಗಳೂರಿನ ಅಂಡರ್​​ ಗ್ರಾಜುಯೇಟ್ ವರ್ಚುಯಲ್ ಶೋಕೇಸ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 7 =
Remember me
