ನವದೆಹಲಿ:ಕೇಂದ್ರ ಬಜೆಟ್ 2024ರಲ್ಲಿ ಲಕೋಟೆಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ತೆರಿಗೆಗಳನ್ನು ಹೆಚ್ಚಿಸಲಾಗಿಲ್ಲ. ಜತೆಗೆ ಸರ್ಕಾರಕ್ಕೆ ಹೆಚ್ಚು ಹಣ ಬೇಕು ಎಂಬ ಉದ್ದೇಶದಿಂದ ಏನನ್ನೂ ಮಾಡಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನು ಓದಿ:ಕಾರ್ಗಿಲ್​ ವಿಜಯದಿವಸ್​; ತನ್ನ ತಪ್ಪುಗಳಿಂದ ಪಾಕಿಸ್ತಾನ ಇನ್ನೂ ಪಾಠ ಕಲಿತಿಲ್ಲ ಪ್ರಧಾನಿ ವಾಗ್ದಾಳಿ
ಪ್ರಧಾನಿ ಮೋದಿ 3.0ರ ಬಜೆಟ್ ಅನ್ನು ಮಂಡಿಸಿದ ನಂತರ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಜೆಟ್ ಕುರಿತು ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್​​ ಅವರು, ಸರ್ಕಾರಕ್ಕೆ ಹೆಚ್ಚಿನ ಹಣ ಬೇಕೆಂದು ತೆರಿಗೆಗಳನ್ನು ಹೆಚ್ಚಿಸಲಾಗಿಲ್ಲ. ಈ ನಿರ್ಧಾರವು ಪ್ರತಿಯೊಂದು ಆಸ್ತಿ ವರ್ಗವನ್ನು ಇದೇ ರೀತಿ ಪರಿಗಣಿಸಬೇಕು ಎಂಬ ಕಲ್ಪನೆಯನ್ನು ಆಧರಿಸಿದೆ ಎಂದು ಹೇಳಿದರು. ಅಲ್ಲದೆ ಈ ಬಜೆಟ್​ ಅನ್ನು ಭವಿಷ್ಯದ ಬಜೆಟ್​ ಎಂದು ಹೇಳಿದ ಅವರು, ಬಂಡಾವಳ ವೆಚ್ಚವು ಚೇತರಿಸಿಕೊಳ್ಳುವವರೆಗೂ ಸರ್ಕಾರವು ಇದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.
ಇದು ಮಧ್ಯಮ ವರ್ಗದವರಿಗೆ ಲಾಭದಾಯಕ ಬಜೆಟ್. ಆದಾಯ ತೆರಿಗೆ ಸ್ಲ್ಯಾಬ್ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ಪರಿಹಾರ ನೀಡಲಾಗಿದೆ. ಅಲ್ಲದೆ ಬಜೆಟ್‌ನಲ್ಲಿ LTCG ಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ಶೇ.20ರಷ್ಟು ಇದ್ದ ದೀರ್ಘಾವಧಿ ಆಸ್ತಿ ತೆರಿಗೆಯನ್ನು ಈಗ ಶೇ.12.5ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.
2024ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ತೆರಿಗೆ ಬದಲಾವಣೆಗಳ ಕುರಿತ ಎಲ್ಲಾ ಅಭಿಪ್ರಾಯಗಳಿಗೆ ಸರ್ಕಾರವು ಮುಕ್ತವಾಗಿದೆ. ಆದರೆ ಹಣಕಾಸು ಮಸೂದೆಯು ಈಗ ಸಂಸತ್ತಿನಲ್ಲಿದೆ. ಈಗ ಅದು ಸದನದ ಆಸ್ತಿ ನಾನು ಅದರ ಬಗ್ಗೆ ಹೊರಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. (ಏಜೆನ್ಸೀಸ್​​)
ಭಾರೀ ಮಳೆಗೆ ರೆಡ್​ ಅಲರ್ಟ್​​ ಘೋಷಿಸಿದ IMD; ಜನರು ಮನೆಯಲ್ಲೇ ಇರುವಂತೆ ಪೊಲೀಸರ ಸಲಹೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 6 =
Remember me
