ನವದೆಹಲಿ:ಷೇರು ಮಾರುಕಟ್ಟೆ ಹೂಡಿಕೆದಾರರು ಇನ್ನು ಮುಂದೆ ತಮ್ಮ ಲಾಭದ ಮೇಲೆ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಗಳಿಸಿದ ಅಲ್ಪಾವಧಿ ಮತ್ತು ದೀರ್ಘಾವಧಿಯ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:ಇವನು ಅಂತಿಂಥ ಆಸಾಮಿಯಲ್ಲ, ಫುಡ್​ ಡೆಲಿವರಿ ಬಾಯ್ ಸೋಗಿನಲ್ಲಿ ಮಾಡುತ್ತದ್ದ ಕೆಲಸ..?!
ಹೆಚ್ಚಿದ ತೆರಿಗೆ ದರಗಳಿಂದಾಗಿ ಕೇಂದ್ರ ಸರ್ಕಾರಕ್ಕೆ ಒಟ್ಟು ರೂ. 15,000 ಕೋಟಿ ಹೆಚ್ಚುವರಿ ಆದಾಯ ಸಿಗಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ.
ಷೇರುಪೇಟೆಯಲ್ಲಿನ ಹೂಡಿಕೆಯ ಮೇಲಿನ ಅಲ್ಪಾವಧಿ ಬಂಡವಾಳ ಗಳಿಕೆ (ಎಸ್ ಟಿಸಿಜಿ) ಮೇಲಿನ ತೆರಿಗೆ ಶೇ.15ರಷ್ಟಿದ್ದರೆ, ಕೇಂದ್ರ ಅದನ್ನು ಶೇ.20ಕ್ಕೆ ಹೆಚ್ಚಿಸಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಂಡವಾಳ ಲಾಭವನ್ನು ಅಲ್ಪಾವಧಿಯ ಲಾಭಗಳೆಂದು ಪರಿಗಣಿಸಲಾಗುತ್ತದೆ. ಒಂದು ವರ್ಷದ ನಂತರ ಪಡೆದ ಲಾಭವನ್ನು ದೀರ್ಘಾವಧಿಯ ಲಾಭವೆಂದು ಪರಿಗಣಿಸಲಾಗುತ್ತದೆ. ಇವುಗಳ ಮೇಲಿನ ತೆರಿಗೆ ಶೇ.10ರಷ್ಟಿದ್ದರೆ, ಶೇ.12.5ಕ್ಕೆ ಏರಿಕೆಯಾಗಿದೆ.
ಆರ್ಥಿಕ ವರ್ಷದಲ್ಲಿ ಗಳಿಸಿದ ದೀರ್ಘಾವಧಿಯ ಲಾಭದ ಮೇಲೆ ರೂ. 1 ಲಕ್ಷ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅದಕ್ಕಿಂತ ಹೆಚ್ಚು ಪಡೆದರೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಮಿತಿಯನ್ನು 1.25 ಲಕ್ಷಕ್ಕೆ ಹೆಚ್ಚಿಸಿದೆ. ಅಂದರೆ ಇನ್ನು ಮುಂದೆ 1.25 ಲಕ್ಷ ರೂ.ವರೆಗಿನ ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಅದಕ್ಕಿಂತ ಹೆಚ್ಚಿನ ಲಾಭದ ಮೇಲೆ 12.5 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಇನ್ನು ಬಜೆಟ್​ನಲ್ಲಿ ಷೇರುಗಳ ಮರುಖರೀದಿಯ ಮೇಲಿನ ತೆರಿಗೆ ನೀತಿಯಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಲಾಭಾಂಶದ ಮೇಲೆ ತೆರಿಗೆ ಪಾವತಿಸುವ ರೀತಿಯಲ್ಲಿಯೇ, ಮರುಖರೀದಿ ಪ್ರಕ್ರಿಯೆಯಲ್ಲಿ ಷೇರುಗಳ ಮಾರಾಟದ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ನಿರ್ಧಾರವು ಇದೇ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಮಹಿಳೆಯರ ಏಷ್ಯಾಕಪ್: ಸೆಮಿಫೈನಲ್​ ತಲುಪಿದ ಭಾರತ- ಫೈನಲ್ ನಲ್ಲಿ ಪಾಕಿಸ್ತಾನ ಎದುರಾಳಿ?!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × 1 =
Remember me
