ಅಗರ್ತಲಾ:ತ್ರಿಪುರಾ ಮಾಧ್ಯಮಿಕ ಶಾಲಾ ಮಂಡಳಿಯ (ಟಿಬಿಎಸ್​ಇ) ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು 53 ವರ್ಷದ ತಾಯಿ ಹಾಗೂ ಆಕೆಯ ಇಬ್ಬರು ಪುತ್ರಿಯರು ಉತ್ತೀರ್ಣರಾದ ವಿಶೇಷ ವಿದ್ಯಮಾನ ವರದಿಯಾಗಿದೆ.
ಶೀಲಾ ರಾಣಿ ದಾಸ್ 10ನೇ ತರಗತಿ ಹಾಗೂ ಇಬ್ಬರೂ ಹೆಣ್ಣು ಮಕ್ಕಳು 12ನೇ ತರಗತಿ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ. ಶೀಲಾ ದಾಸ್​ಗೆ ಚಿಕ್ಕ ವಯಸ್ಸಲ್ಲೇ ಮದುವೆಯಾಗಿದ್ದು ಕೆಲವೇ ವರ್ಷಗಳಲ್ಲಿ ಪತಿ ಮೃತಪಟ್ಟಿದ್ದರು. ಅಷ್ಟರಲ್ಲಿ ಅವರು ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದರು. ಪತಿಯ ಅಗಲಿಕೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ ಶೀಲಾ, ಏಕಾಂಗಿಯಾಗಿ ತಮ್ಮ ಮಕ್ಕಳನ್ನು ಬೆಳೆಸಿದರು. ದೊಡ್ಡವರಾದ ಇಬ್ಬರೂ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ತಾಯಿಯನ್ನು ಒತ್ತಾಯಿಸುತ್ತಿದ್ದರು.
ಅವರ ಪ್ರೀತಿಗೆ ಕಟ್ಟು ಬಿದ್ದು, ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದ ಶೀಲಾ, ಶೈಕ್ಷಣಿಕ ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದಾರೆ. ಮಾಧ್ಯಮಿಕ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವ ಮಹಿಳೆ, ಇದಕ್ಕೆ ತಮ್ಮ ಪುತ್ರಿಯರೊಂದಿಗೆ ಇತರ ಹಲವು ಜನರ ಬೆಂಬಲವೂ ಕಾರಣ ಎಂದು ಸ್ಮರಿಸಿದ್ದಾರೆ.
ರಾಜ್ಯದಲ್ಲಿ ವರುಣಾರ್ಭಟ; ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 4 =
Remember me
