ನವದೆಹಲಿ:ಸಾಫ್ಟ್​ವೇರ್​ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್​) ವರ್ಕ್​ ಫ್ರಂ ಹೋಮ್​ನಲ್ಲಿರುವ ಉದ್ಯೋಗಿಗಳಿಗೆ ಆಫೀಸಿಗೆ ಬರಲು ಸೂಚನೆ ನೀಡಿದ್ದಲ್ಲದೆ, ಕಡ್ಡಾಯವಾಗಿ ಡ್ರೆಸ್​ ಕೋಡ್ ಪಾಲಿಸುವಂತೆಯೂ ತಿಳಿಸಿದೆ.
ಟಿಸಿಎಸ್​ನ ಚೀಫ್​ ಹ್ಯೂಮನ್ ರಿಸೋರ್ಸಸ್​ ಆಫೀಸರ್ ಮಿಲಿಂದ್ ಕಕ್ಕಡ್ ಅವರು ಇ-ಮೇಲ್ ಮೂಲಕ ತಮ್ಮ ಉದ್ಯೋಗಿಗಳಿಗೆ ಈ ಸೂಚನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ವರ್ಕ್​ ಫ್ರಂ ಹೋಮ್ ಮುಗಿಸಿ ಆಫೀಸಿಗೆ ಮರಳುತ್ತಿರುವ ಉದ್ಯೋಗಿಗಳು ಸರಿಯಾದ ಡ್ರೆಸ್​ ಕೋಡ್ ಪಾಲಿಸಬೇಕು ಎಂದು ಇ-ಮೇಲ್​ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಕಾರಲ್ಲಿ ಕಾಳಿಂಗ ಸರ್ಪ!; 50 ಕಿ.ಮೀ. ಪ್ರಯಾಣಿಸಿದ ಬಳಿಕವೇ ಗೊತ್ತಾಗಿದ್ದು!
ಉದ್ಯೋಗಿಗಳು ಸೋಮವಾರದಿಂದ ಗುರುವಾರದವರೆಗೆ ಡ್ರೆಸ್​ ಕೋಡ್ ಪಾಲಿಸಬೇಕು. ಈ ದಿನಗಳಲ್ಲಿ ಬಿಸಿನೆಸ್ ಕ್ಯಾಷುವಲ್ಸ್​ ಧರಿಸಿ ಬರಬೇಕು. ಅಂದರೆ ಪುರುಷರು ಫುಲ್ ಶರ್ಟ್-ಟ್ರೌಷರ್ ಧರಿಸಿ ಇನ್​ ಶರ್ಟ್ ಮಾಡಿರಬೇಕು ಹಾಗೂ ಮಹಿಳೆಯರು ಬಿಸಿನೆಸ್ ಡ್ರೆಸ್ ಧರಿಸಿರಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ ಎಲ್ಲ ಸೆಮಿನಾರ್​-ಸಮಾವೇಶಗಳಲ್ಲಿ ಮತ್ತು ಕ್ಲೈಂಟ್ ಭೇಟಿ ವೇಳೆ ಬಿಸಿನೆಸ್ ಫಾರ್ಮಲ್ ಧರಿಸಿರಬೇಕು. ಶುಕ್ರವಾರ ಮಾತ್ರ ಹಾಫ್ ಸ್ಲೀವ್ಡ್ ಶರ್ಟ್, ಟರ್ಟಲ್ ನೆಕ್, ಖಾಕಿಸ್, ಕೈನೊಸ್, ಕುರ್ತಾ-ಸಲ್ವಾರ್ ಇತ್ಯಾದಿ ಧರಿಸಲು ಅವಕಾಶ ಇದೆ ಎಂದು ಇ-ಮೇಲ್​ನಲ್ಲಿ ತಿಳಿಸಲಾಗಿದೆ.
ಮ್ಯಾನೇಜ್​ಮೆಂಟ್ ಮೀಟಿಂಗ್​ನಲ್ಲಿ ಅಂಗಿ ಧರಿಸದೆ ಭಾಗವಹಿಸಿದ ಸಿಇಒ!

ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twelve =
Remember me
