ನವದೆಹಲಿ:ಭಾರತೀಯ ಅತಿದೊಡ್ಡ IT ಸಂಸ್ಥೆಗಳಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕೂಡಾ ಒಂದಾಗಿದೆ. ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸಿದ ಬೆನ್ನಲ್ಲೇ ಟಿಸಿಎಸ್​ನಲ್ಲಿ ಮಾಸ್ ರೆಸಿಗ್ನೇಶನ್ ನಡೆದಿದೆ. ಅದೂ ರಾಜೀನಾಮೆ ನೀಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ.
ಮೂರು ವರ್ಷಗಳಿಂದ ವರ್ಕ್ ಫ್ರಂ ಹೋಮ್​ನಲ್ಲಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸಿದ ಬೆನ್ನಲ್ಲೇ ಮಾಸ್ ರೆಸಿಗ್ನೇಶನ್ ನಡೆದಿದೆ. ರಾಜೀನಾಮೆ ನೀಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ ಎನ್ನಲಾಗಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಟಿಸಿಎಸ್ ಸೇರಿದಂತೆ ಎಲ್ಲಾ ಐಟಿ ಕಂಪನಿಗಳು ತಮ್ಮ ಉದ್ಯೋಗಗಳಿಗೆ ಮನೆಯಿಂದ ಕೆಲಸ ಮಾಡಲು ಅನುಮತಿಸಿತ್ತು. ಈಗ ಜಗತ್ತಿನಲ್ಲೆಡೆ ಕಂಪನಿಗಳು ವರ್ಕ್ ಫ್ರಂ ಹೋಂ ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸುತ್ತಿವೆ.  ಟಿಸಿಎಸ್ ಕೂಡ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ನಿಲ್ಲಿಸಲು ನಿರ್ಧರಿಸಿದೆ.
ಇದನ್ನೂ ಓದಿ:ಮದ್ಯದ ಬೆಲೆ ಹೆಚ್ಚಾದರೆ ಮದ್ಯಪ್ರಿಯರು ಬೇಸರ ಆಗ್ತಾರೆಂದು ಯಾರು ಹೇಳಿದ್ದು? ಅಬಕಾರಿ ಸಚಿವ ಪ್ರಶ್ನೆ
TCS ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಮಾತನಾಡಿ, ‘TCS ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35 ಪ್ರತಿಶತ ಮಹಿಳಾ ಉದ್ಯೋಗಿಗಳಿದ್ದಾರೆ. ಕಂಪನಿಯು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದನ್ನು ನಿಲ್ಲಿಸಿದ ನಂತರ ಮಹಿಳಾ ಉದ್ಯೋಗಿ ರಾಜೀನಾಮೆಗಳು ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮಹಿಳಾ ಉದ್ಯೋಗಿಗಳ ರಾಜೀನಾಮೆ ತಾರತಮ್ಯದಿಂದ ಪ್ರೇರಿತವಾಗಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ, TCS ನಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ರಾಜೀನಾಮೆ ನೀಡುತ್ತಾರೆ. ಅದರೆ ಈಗ ಕೆಲಸ ಬಿಡುವವರ ಸಂಖ್ಯೆ  ಪುರುಷರನ್ನು ಮೀರಿಸಿದೆ ಎಂದಿದ್ದಾರೆ.
ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ರನ್ನು ಹೊಗಳಿದ್ದಕ್ಕೆ ವ್ಯಕ್ತಿ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
